Nandi Hills: ಪ್ರವಾಸಿಗರಿಗೆ ಗುಡ್ ನ್ಯೂಸ್, ಚಿಕ್ಕಬಳ್ಳಾಪುರದ ನಂದಿ ಬೆಟ್ಟ ಪ್ರವೇಶದ ಸಮಯ ಬದಲಾವಣೆ

| Updated By: ಆಯೇಷಾ ಬಾನು

Updated on: Nov 20, 2022 | 11:00 AM

ಚಿಕ್ಕಬಳ್ಳಾಪುರ ತಾಲೂಕಿನಲ್ಲಿದ್ದರೂ ರಾಜಧಾನಿ ಬೆಂಗಳೂರಿನ ಬಹುತೇಕ ಮಂದಿಗೆ ನಂದಿ ಹಿಲ್ಸ್​ ಅಂದ್ರೆ ಹಾಟ್ ಫೇವರೆಟ್. ಅದ್ರಲ್ಲೂ ಶನಿವಾರ-ಭಾನುವಾರ ಬಂದ್ರೆ ಸಾವಿರಾರು ಜನ ಲಗ್ಗೆ ಇಡ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಬರೋದ್ರಿಂದ ಬೆಟ್ಟದ ಬುಡದಲ್ಲಿ ಟ್ರಾಫಿಕ್ ಜಾಮ್ ಆಗಿ ಸವಾರರು ಹೈರಾಣಾಗುತ್ತಾರೆ.

1 / 8
ಚಿಕ್ಕಬಳ್ಳಾಪುರದಲ್ಲಿರು ಪ್ರಕೃತಿ ಸ್ವರ್ಗಕ್ಕೆ ಹೋಗ್ಬೇಕು ಅಂದ್ರೆ ಪ್ರವಾಸಿಗರು ಪಡೋ ಪಾಡು ಅಷ್ಟಿಷ್ಟಲ್ಲ. ಗಂಟೆಗಟ್ಟಲೆ ರೋಡ್​ನಲ್ಲೇ ನಿಂತು ಹೈರಾಣಾಗುತ್ತಾರೆ. ಬೆಟ್ಟದ ತುದಿ ಮುಟ್ಟುವಷ್ಟರಲ್ಲಿ ಸುಸ್ತಾಗ್ತಾರೆ. ಆದ್ರೆ ಇನ್ಮುಂದೆ ಇದಕ್ಕೆಲ್ಲಾ ಕೊಂಚ ಬ್ರೇಕ್ ಬೀಳೋದು ಪಕ್ಕಾ.

2 / 8
ಹಚ್ಚಹಸಿರಿನ ಚಪ್ಪರ ಹಾಕಿದಂತಿದೆ. ಮರಗಿಡಗಳ ಸಾಲು ಸ್ವಾಗತ ಕೋರುತ್ತಿವೆ. ಮಂಜಿನ ರಾಶಿ ಮುತ್ತಿಡುತ್ತಿದ್ರೆ ಪ್ರವಾಸಿಗರೆಲ್ಲಾ ತಂಗಾಳಿಗೆ ಮೈವೊಡ್ಡಿ ನಿಂತಿದ್ದಾರೆ. ಕೊರೆಯೋ ಚಳಿಯಲ್ಲೂ ಪ್ರಕೃತಿಯ ಸೌಂದರ್ಯಕ್ಕೆ ಶರಣಾಗಿದ್ದಾರೆ.

3 / 8
ಮೇಲೆ ಬೆಳ್ಳಿ ಮೋಡ, ಕೆಳಗೆ ತಂಪಾದ ಇಬ್ಬನಿ, ಸುತ್ತಮುತ್ತ ಎತ್ತ ನೋಡಿದರೂ ಮುತ್ತಿಕ್ಕುವ ಮಂಜು. ನಿಜಕ್ಕೂ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿರೋ ಪ್ರಕೃತಿ ತಾಣ ನಂದಿ ಗಿರಿಧಾಮ.

4 / 8
ಚಿಕ್ಕಬಳ್ಳಾಪುರ ತಾಲೂಕಿನಲ್ಲಿದ್ದರೂ ರಾಜಧಾನಿ ಬೆಂಗಳೂರಿನ ಬಹುತೇಕ ಮಂದಿಗೆ ನಂದಿ ಹಿಲ್ಸ್​ ಅಂದ್ರೆ ಹಾಟ್ ಫೇವರೆಟ್. ಅದ್ರಲ್ಲೂ ಶನಿವಾರ-ಭಾನುವಾರ ಬಂದ್ರೆ ಸಾವಿರಾರು ಜನ ಲಗ್ಗೆ ಇಡ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಬರೋದ್ರಿಂದ ಬೆಟ್ಟದ ಬುಡದಲ್ಲಿ ಟ್ರಾಫಿಕ್ ಜಾಮ್ ಆಗಿ ಸವಾರರು ಹೈರಾಣಾಗುತ್ತಾರೆ.

ಚಿಕ್ಕಬಳ್ಳಾಪುರ ತಾಲೂಕಿನಲ್ಲಿದ್ದರೂ ರಾಜಧಾನಿ ಬೆಂಗಳೂರಿನ ಬಹುತೇಕ ಮಂದಿಗೆ ನಂದಿ ಹಿಲ್ಸ್​ ಅಂದ್ರೆ ಹಾಟ್ ಫೇವರೆಟ್. ಅದ್ರಲ್ಲೂ ಶನಿವಾರ-ಭಾನುವಾರ ಬಂದ್ರೆ ಸಾವಿರಾರು ಜನ ಲಗ್ಗೆ ಇಡ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಬರೋದ್ರಿಂದ ಬೆಟ್ಟದ ಬುಡದಲ್ಲಿ ಟ್ರಾಫಿಕ್ ಜಾಮ್ ಆಗಿ ಸವಾರರು ಹೈರಾಣಾಗುತ್ತಾರೆ.

5 / 8
ಆದ್ರೆ ಇನ್ಮುಂದೆ ಇಂಥಾ ಹೆಣಗಾಟ ಸ್ವಲ್ಪ ಕಡಿಮೆ ಆಗುತ್ತೆ. ಯಾಕಂದ್ರೆ ಇಷ್ಟು ದಿನ ಗಿರಿಧಾಮ ಬೆಳಗ್ಗೆ 6 ಗಂಟೆಗೆ ಓಪನ್ ಆಗ್ತಿತ್ತು. ಈಗ  ನೂತನ ನಂದಿ ಗಿರಿಧಾಮ ಸಮಗ್ರ ಅಭಿವೃದ್ಧಿ ಮತ್ತು ನೂತನ ನಿರ್ವಹಣಾ ಸಮಿತಿ ಹೊಸ ನಿರ್ಧಾರ ಕೈಗೊಂಡಿದೆ. 6 ಗಂಟೆ ಬದಲು ಬೆಳಿಗ್ಗೆ 5-30ಕ್ಕೆ ಗಿರಿಧಾಮ ಓಪನ್ ಮಾಡಲು ಆದೇಶಿಸಿದೆ.

6 / 8
ನಂದಿ ಹಿಲ್ಸ್ ಅಂದ್ರೆ ತಂಪಾದ ವಾತಾವರಣ, ತುಂತುರು ಮಳೆ, ಗಿಡ, ಮರ, ಬಳ್ಳಿಗಳ ಸೊಬಗು, ಹೂಗಳ ರಾಶಿ ಎಲ್ಲರನ್ನೂ ಕೈಬೀಸಿ ಕರೆಯುತ್ತೆ. ಅದ್ರಲ್ಲೂ ಬೆಟ್ಟದ ತುದಿಯಲ್ಲಿ ನಿಂತು ಸೂರ್ಯೋದಯ ಹಾಗೂ ಸೂರ್ಯಸ್ತದ ವಿಹಂಗಮ ನೋಟ ನೋಡುವುದೇ ಚೆಂದ.

7 / 8
ಹೀಗೆ ಸಾವಿರಾರು ಜನ ಪ್ರವಾಸಿಗರು ಬೆಳ್ಳಂಬೆಳಗ್ಗೆ 4 ಗಂಟೆಗೆ ಗಿರಿಧಾಮಕ್ಕೆ ಬಂದ್ರೂ ಗಿರಿಧಾಮ ಬಂದ್ ಆಗಿರುತ್ತಿತ್ತು. ಆದ್ರೆ ಇನ್ಮುಂದೆ ಬೆಳಗ್ಗೆ 6ರ ಬದಲು 5-30ಕ್ಕೆ ಓಪನ್ ಮಾಡೋದ್ರಿಂದ ಅನುಕೂಲ ಆಗಲಿದೆ. ಹೀಗಾಗಿ ಪ್ರವಾಸಿಗರು ಕೂಡ ಖುಷಿ ವ್ಯಕ್ತಪಡಿಸಿದ್ದಾರೆ.

8 / 8
ಇಷ್ಟೆಲ್ಲಾ ಜನ ಪ್ರವಾಸಿಗರು ಬಂದ್ರೂ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಸ್ವಚ್ಛತೆ ಮರೀಚಿಕೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಸ್ವಲ್ಪ ಒತ್ತು ಕೊಟ್ರೆ ಪ್ರವಾಸಿಗರಿಗೂ ಅನುಕೂಲ ಆಗಲಿದೆ.

Published On - 11:00 am, Sun, 20 November 22