Chikkaballapur: ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ ಮಹಿಳೆಗೆ ವಂಚನೆ

| Updated By: Rakesh Nayak Manchi

Updated on: Jul 23, 2023 | 6:36 PM

ಗೃಹಿಣಿಯೊರ್ವಳು ವರ್ಕ್ ಪ್ರಾಂ ಹೋಮ್ ಮೂಲಕ ಸಂಪಾದನೆ ಮಾಡಲು ಮುಂದಾಗಿ ಕೊನೆಗೆ ಸಂಪಾದನೆಯೂ ಇಲ್ಲ ಕೂಡಿಟ್ಟ ಹಣನೂ ಕಳೆದುಕೊಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ವಂಚನೆ ಸಂಬಂಧ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Chikkaballapur: ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ ಮಹಿಳೆಗೆ ವಂಚನೆ
ವರ್ಕ್ ಪ್ರಾಂ ಹೋಮ್ ಹೆಸರಿನಲ್ಲಿ ಚಿಕ್ಕಬಳ್ಳಾಪುರದ ಮಹಿಳೆಗೆ ವಂಚಿಸಿದ ಸೈಬರ್ ಕಳ್ಳರು
Image Credit source: jcomp / freepik
Follow us on

ಚಿಕ್ಕಬಳ್ಳಾಪುರ, ಜುಲೈ 23: ಕುಟುಂಬ ನಿರ್ವಹಣೆಗೆ ಹೆಚ್ಚುವರಿ ಹಣಕಾಸಿನ ಅಗತ್ಯತೆ ಬಗ್ಗೆ ಅರಿತು ಏನು ಮಾಡುವುದು ಎಂದು ಯೋಚಿಸುತ್ತಿದ್ದ ಗೃಹಿಣಿಯೊಬ್ಬರು ಸೈಬರ್ ವಂಚನೆಯ (Fraud) ಜಾಲಕ್ಕೆ ಸಿಲುಕಿ ಇದ್ದ ಹಣವನ್ನೂ ಕಳೆದುಕೊಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ (Chikkaballapur) ನಡೆದಿದೆ. ವರ್ಕ್ ಪ್ರಾಂ ಹೋಮ್ ಸ್ಕೀಮ್ ಮೂಲಕ ಸಂಪಾದನೆ ಮಾಡಲು ಮುಂದಾಗಿ ಕೊನೆಗೆ ಸಂಪಾದನೆಯೂ ಸಿಗದೆ ಕೂಡಿಟ್ಟ ಹಣವೂ ಕಳೆದುಕೊಂಡ ಮಹಿಳೆ ನ್ಯಾಯಕ್ಕಾಗಿ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

ಚಿಂತಾಮಣಿ ತಾಲೂಕಿನ ಬನಹಳ್ಳಿ ಗ್ರಾಮದ ನಿವಾಸಿ ನವ್ಯ ಬಿ.ಎಂ. ವಿದ್ಯಾವಂತೆ ಆಗಿದ್ದು, ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಕುಟುಂಬ ನಿರ್ವಹಣೆಗೆ ನನ್ನ ಮತ್ತು ಗಂಡನ ವೇತನ ಸಾಲುತ್ತಿಲ್ಲ, ಬಿಡುವಿನ ಸಮಯಲ್ಲಿ ಸುಮ್ಮನೆ ಟಿವಿ ನೋಡಿಕೊಂಡು ಕುಳಿತುಕೊಳ್ಳುವುದರ ಬದಲು ಏನಾದರು ಕೆಲಸ ಮಾಡೋಣ ಅಂತ ಯೋಚನೆ ಮಾಡಿದ್ದರು. ಹೀಗೆ ಗೂಗಲ್​ನಲ್ಲಿ ಹುಡುಕಾಡಿದಾಗ azm888.com WORK FROM HOME, PART TIME JOB ಲಿಂಕ್ ಕಣ್ಣಿಗೆ ಬಿದ್ದಿದೆ.

ಹಿಂದೆ ಮುಂದೆ ನೋಡದೆ ಹೇಗೊ ಒಳ್ಳೆಯ ಆಧಾಯ ಬರಬಹುದು ಎಂದು ಭಾವಿಸಿ ಲಿಂಕ್ ಕ್ಲಿಕ್ ಮಾಡಿದ್ದಾರೆ. ನಂತರ ಆ ಲಿಂಕ್ ಮಹಿಳೆಯನ್ನು ಆನ್​ಲೈನ್ ಲೋಕಕ್ಕೆ ಕರೆದುಕೊಂಡು ಹೋಗಿದೆ. ಲಿಂಕ್​ನ ಸಿಬ್ಬಂದಿ ಮಹಿಳೆಯ ಪೋನ್ ನಂಬರ್ ಅನ್ನು ಟೆಲಿ ಗ್ರಾಮ್​ನ ANGUS ಎಂಬ ಗ್ರೂಪ್​ಗೆ ಸೇರಿಸಿದ್ದಾರೆ. ಮುಂದೆ ನಡೆದದ್ದೇ ಬೇರೆ.

ಇದನ್ನೂ ಓದಿ: Chikkaballapur News: ಹಣ ದ್ವಿಗುಣದ ಆಸೆಗೆ 3.21 ಲಕ್ಷ ರೂಪಾಯಿ ಕಳೆದುಕೊಂಡ ಚಿಕ್ಕಬಳ್ಳಾಪುರ ಶಿಕ್ಷಕಿ!

ನವ್ಯ ತನ್ನ ಪೊನ್ ಫೇ ಮೂಲಕ ರೆಜಿಸ್ಟರ್ ಹಣವನ್ನು ಲಿಂಕ್​ನ ಮೂಲಕ ಮೊದಲು ವರ್ಗಾಯಿಸಿದ್ದಾರೆ. ಸ್ವಲ್ಪ ಸಮಯದ ನಂತರ ಆಕೆಯ ಖಾತೆಗೆ 302 ರೂ.ಗಳನ್ನು ಕಂಪನಿಯ ಸಿಬ್ಬಂದಿ ಹಾಕಿ ನವ್ಯಾರನ್ನು ನಂಬಿಸಿದ್ದಾರೆ. ಇದನ್ನು ನಂಬಿದ ಮಹಿಳೆ ಪುನಃ 500 ರೂ.ಗಳನ್ನು ಹೂಡಿಕೆ ಮಾಡಿದ್ದಾಳೆ. ಹೀಗೆ ವಿವಿಧ ಹಂತಗಳಲ್ಲಿ ಒಟ್ಟು 1,73,626 ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಕಂಪನಿಯ ರೆಜಿಸ್ಟರ್​ನಲ್ಲಿ 275717 ರೂಪಾಯಿಗಳ ಲಾಭ ತೊರಿಸಲಾಗಿದೆ.

ಅದನ್ನು ನಿಜವೆಂದು ನಂಬಿದ ನವ್ಯ, ಹಣ ಡ್ರಾ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಆದರೆ ಕಂಪನಿಯ ಸಿಬ್ಬಂದಿಗಳು ಶೇ.2 ಟ್ಯಾಕ್ಸ್ ಕಟ್ಟಿದರೆ ಹಣ ಡ್ರಾ ಅವಕಾಶ ಕೊಡುವುದಾಗಿ ತಿಳಿಸಿದ್ದಾರೆ. ಕೊನೆಗೆ ಇದೆಲ್ಲಾ ಫ್ರಾಡ್ ಅಂತ ತಿಳಿದ ನವ್ಯಾ ಈಗ ಚಿಕ್ಕಬಳ್ಳಾಪುರ ಜಿಲ್ಲಾ ಸಿಇಎನ್ ಸೈಬರ್ ಪೊಲೀಸರ ಮೊರೆ ಹೋಗಿದ್ದು, ತನಗೆ ನ್ಯಾಯ ಕೊಡಿಸುವಂತೆ ದೂರು ನೀಡಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:13 pm, Sun, 23 July 23