ರೇಷ್ಮೆ ಗೂಡಿನ ಬಾಕಿ ಹಣ ಕೊಡದೆ ಪ್ರಾಣ ಬೆದರಿಕೆ ಹಾಕಿದ ವ್ಯಾಪಾರಿ: ನ್ಯಾಯ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ ರೈತರು

ರೇಷ್ಮೆ ಗೂಡು ಖರೀದಿ ಮಾಡಿದ್ದ ವ್ಯಾಪಾರಿಯೊರ್ವ ರೈತರಿಗೆ ಅಸಲು ಹಣ ಕೊಡದೆ ಸತಾಯಿಸುತ್ತಿದ್ದು, ಮನೆಯ ಬಳಿ ಹೊದರೆ ಪ್ರಾಣ ಬೆದರಿಕೆ ಹಾಕಿದ್ದಾರೆ. ಇದರಿಂದ ನೊಂದ ರೈತರು ನ್ಯಾಯ ಕೋರಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.

ರೇಷ್ಮೆ ಗೂಡಿನ ಬಾಕಿ ಹಣ ಕೊಡದೆ ಪ್ರಾಣ ಬೆದರಿಕೆ ಹಾಕಿದ ವ್ಯಾಪಾರಿ: ನ್ಯಾಯ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ ರೈತರು
ಪ್ರಾತಿನಿಧಿಕ ಚಿತ್ರ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಗಂಗಾಧರ​ ಬ. ಸಾಬೋಜಿ

Updated on: Jul 22, 2023 | 4:52 PM

ಚಿಕ್ಕಬಳ್ಳಾಪುರ, ಜುಲೈ 22: ರೈತರು (Farmers) ಹಗಲು ರಾತ್ರಿ ಕಷ್ಟಪಟ್ಟು ಬೆಳೆಗಳನ್ನು ಬೆಳೆಯುತ್ತಾರೆ. ಕೈಗೆ ಬಂದ ಬೆಳೆಗಳನ್ನು ಮಾರಿ ರೈತರು ಸಾಲ ತೀರಿಸಿಕೊಳ್ಳುತ್ತಾರೆ. ಆದರೆ ರೈತರನ್ನು ನಂಬಿಸಿ ಬೆಳೆ ಖರೀದಿ ಮಾಡಿದ್ದ ವ್ಯಾಪಾರಿಯೊರ್ವ ರೈತರಿಗೆ ಅಸಲು ಹಣ ಕೊಡದೆ ಸತಾಯಿಸುತ್ತಿದ್ದಾನೆ. ಇದರಿಂದ ನೊಂದ ರೈತರು ನ್ಯಾಯ ಕೋರಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ.

ಜಿಲ್ಲೆತ ಶಿಡ್ಲಘಟ್ಟ ತಾಲ್ಲೂಕು ಕುಂದಲಗುರ್ಕಿ ಗ್ರಾಮದ ರೈತ ಸುರೇಶ್ ಕುಮಾರ್​ ರೇಷ್ಮೆ ಗೂಡು ಬೆಳೆದಿದ್ದಾರೆ. ಬೆಳೆದ ರೇಷ್ಮೆ ಗೂಡನ್ನು ಶಿಡ್ಲಘಟ್ಟ ನಗರದಲ್ಲಿರುವ ರೇಷ್ಮೆ ಗೂಡು ಮಾರುಕಟ್ಟೆಗೆ ಸಾಗಾಟ ಮಾಡಿದರು. ಆದರೆ ಅದನ್ನು ಗಮನಿಸಿದ ಸ್ಥಳಿಯ ರೇಷ್ಮೆ ಗೂಡು ವ್ಯಾಪಾರಿಗಳಾದ ಸೈಯದ್ ಸೈಪ್ ರಾಜಾ, ಅಪ್ರೋಜ್ ಮತ್ತು ಇರ್ಫಾನ್ ರೈತನ ಮನವೋಲಿಸಿದ್ದಾರೆ.

ಇದನ್ನೂ ಓದಿ: Hassan News: ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ ರಸ್ತೆಯಲ್ಲಿ ಭೂಕುಸಿತ

ಸರ್ಕಾರಿ ಮಾರುಕಟ್ಟೆಯಲ್ಲಿ ಗೂಡನ್ನು ಮಾರಾಟ ಮಾಡಿದರೆ ತಕ್ಷಣ ಹಣ ಬರಲ್ಲ, ಉತ್ತಮ ಬೆಲೆ ಬರಲ್ಲ ಅಂತ ಮನವೋಲಿಸಿ ರೈತನಿಂದ ರೇಷ್ಮೆ ಗೂಡು ಖರೀದಿ ಮಾಡಿದ್ದಾರೆ. ಪ್ರತಿ ಕೆ.ಜಿ ಗೂಡಿಗೆ 400 ರೂ.ಗಳಂತೆ ಒಟ್ಟು 43,200 ರೂ.ಗಳಿಗೆ ವ್ಯಾಪಾರ ಮಾಡಿದ್ದಾರೆ.

ಗೂಡು ಖರೀದಿ ಸಮಯದಲ್ಲಿ ವ್ಯಾಪಾರಿ ಇರ್ಫಾನ್ ರವರು 20.000 ರೂ. ನಗದು ಹಣವನ್ನು ಫೋನ್ ಪೇ ಮಾಡಿದ್ದಾನೆ. ಉಳಿದ ಹಣವನ್ನು ಸ್ವಲ್ಪ ಸಮಯದ ನಂತರ ನೀಡುವುದಾಗಿ ತಿಳಿಸಿದ್ದನಂತೆ. ಆದರೆ ಬಳಿಕ ಫೋನ್​ ಸಂಪರ್ಕ ಸಿಗದೆ ರೈತನನ್ನು ಸತಾಯಿಸುತ್ತಿದ್ದಾನೆ. ವ್ಯಾಪಾರ ಮಾಡಿ ಒಂದು ವಾರ ಆದರೂ ಇದುವರೆಗೂ ಹಣವನ್ನು ಕೊಡುತ್ತಿಲ್ಲ.

ಇದನ್ನೂ ಓದಿ: ಕ್ಯಾಟರ್ ಪಿಲ್ಲರ್ ಹುಳ ಕಚ್ಚಿದರೆ ಮನುಷ್ಯರು ಸಾಯುತ್ತಾರೆ! ಕಲಬುರಗಿಯಲ್ಲಿ ಹಬ್ಬಿದ ವದಂತಿ

ವ್ಯಾಪಾರಿಯನ್ನು ಹುಡುಕಿಕೊಂಡು ಮನೆಯ ಬಳಿ ಹೊದರೆ ಆತನ ಪತ್ನಿ ಹಾಗೂ ಸಂಬಂಧಿಗಳು ಪ್ರಾಣ ಬೆದರಿಕೆ ಹಾಕಿದ್ದಾರಂತೆ. ಇದರಿಂದ ನ್ಯಾಯ ಕೊಡಿಸುವಂತೆ ರೈತ ಸುರೇಶಕುಮಾರ್ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ