ಚಿಕ್ಕಬಳ್ಳಾಪುರ: ಕಾಂಗ್ರೆಸ್ ಸಭೆಯಲ್ಲಿ ಊಟದ ವಿಚಾರಕ್ಕೆ ಕಾರ್ಯಕರ್ತರ ನಡುವೆಯೇ ಮಾರಾಮಾರಿ ನಡೆದ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಜಿ.ಮದ್ದೇಪಲ್ಲಿ ಕ್ರಾಸ್ ಬಳಿ ನಡೆದಿದೆ. ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ (MLA S.N.Subbareddy) ಅವರು ಗೊರ್ತಪಲ್ಲಿ ಮತ್ತು ತಿಮ್ಮಂಪಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಸಭೆ ಆಯೋಜನೆ ಮಾಡಿದ್ದರು. ಸಭೆಗೆ ಆಗಮಿಸಿದ ಕಾರ್ಯಕರ್ತರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ ಸಭೆಯ ನಂತರ ಊಟದ ವಿಚಾರಕ್ಕೆ ಕಾರ್ಯಕರ್ತರ ನಡುವೆ ಮಾತಿನ ಚಕಾಮಕಿ ಆರಂಭವಾಗಿ ಕಿತ್ತಾಡಿಕೊಂಡಿದ್ದಾರೆ. ಕಾರ್ಯಕರ್ತರ ನಡುವೆ ಸಣ್ಣದಾಗಿ ಆರಂಭವಾದ ಜಗಳ ಕೆಲವೇ ನಿಮಿಷಗಳಲ್ಲಿ ವಿಕೋಪಕ್ಕೆ ತಿರುಗಿದೆ. ಪರಿಣಾಮ ಕೆಲವು ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇದೆ ವೇಳೆ ನೆಲಕ್ಕೆ ಬಿದ್ದ ಕಾರ್ಯಕರ್ತನೊಬ್ಬನಿಗೆ ಕೆಲವು ಕಾರ್ಯಕರ್ತರು ಕಾಲಿನಿಂದ ತುಳಿದು ಅಮಾನುಷವಾಗಿ ವರ್ತನೆ ಮಾಡಿದ್ದಾರೆ.
ಬೆಂಗಳೂರು: ಬೈಕ್ ಡಿಕ್ಕಿ ಹೊಡೆದು ಸುಲಿಗೆ ಗೆ ಯತ್ನ ನಡೆಸಿದ ಘಟನೆ ನಗರದ ಸರ್ಜಾಪುರ ರಸ್ತೆಯಲ್ಲಿ ನಡೆದಿದೆ. ಇಂದು ಮುಂಜಾನೆ ಮೂರು ಗಂಟೆ ವೇಳೆಯಲ್ಲಿ ಯುವಕ- ಯುವತಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಮುಂಭಾಗದಿಂದ ಬಂದ ಬೈಕ್ ಕಾರಿಗೆ ಡಿಕ್ಕಿ ಹೊಡೆದಿದೆ. ಯುವಕ ಮತ್ತು ಯುವತಿ ಕಾರಿನಿಂದ ಇಳಿಯುತ್ತಿದ್ದಂತೆ ಬೈಕ್ ಸವಾರರು ಬೆದರಿಕೆ ಹಾಕಿದ್ದಾರೆ. ಇದೇ ವೇಳೆ ಇಬ್ಬರಿದ್ದ ಬೈಕ್ ಸವಾರರ ಜೊತೆ ಮತ್ತೊಬ್ಬ ಸೇರಿಕೊಂಡಿದ್ದಾನೆ. ಒಟ್ಟು ಮೂವರು ಸೇರಿ ಸುಲಿಗೆ ಯತ್ನ ನಡೆಸಲು ಮುಂದಾಗಿದ್ದಾರೆ. ಕೂಡಲೇ ಎಚ್ಚೆತ್ತ ಯುವಕ, ಕಾರನ್ನು ಹಿಂಬದಿಗೆ ವೇಗವಾಗಿ ಚಲಾಯಿಸಿ ಸ್ಥಳದಿಂದ ಹೋಗಿದ್ದಾರೆ. ಘಟನೆ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಹಿತ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಲಾಗಿದೆ.
ತುಮಕೂರು: ಖಾಸಗಿ ಬಸ್ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಇಬ್ಬರು ಸವಾರರು ಸಾವನ್ನಪ್ಪಿದ ಘಟನೆ ತಾಲೂಕಿನ ಹೆಬ್ಬೂರು ಬಳಿ ನಡೆದಿದೆ. ಮೃತ ಇಬ್ಬರು ಬೈಕ್ ಸವಾರರ ಗುರುತು ಪತ್ತೆಯಾಗಿಲ್ಲ. ಘಟನೆ ಸ್ಥಳಕ್ಕೆ ಭೇಟಿ ನೀಡಿದ ಹೆಬ್ಬೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:52 pm, Sun, 29 January 23