Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!
ಕೈಯಲ್ಲಿ ಹೈ ಫೈ ಸ್ಮಾರ್ಟ್ ಫೋನ್ ಗಳು, ಅದರಲ್ಲಿ ಹೈ ಕ್ವಾಲಿಟಿ ಕ್ಯಾಮೆರಾಗಳು ಒಂದೆಡೆಯಾದ್ರೆ... ಮತ್ತೊಂದೆಡೆ ಸುಂದರ ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಅಪ್ ಲೋಡ್ ಮಾಡಿಲ್ಲ ಅಂದ್ರೆ ಅದೇನೊ ಕಳೆದುಕೊಂಡ ಭಾವನೆ ಮೂಡುತ್ತೆ. ಕಣ್ಣಿಗೆ ಕಂಡ ಸುಂದರ ಹೂ.. ತೋಟದಲ್ಲಿ ಯುವತಿಯರು ಸೇಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ದೃಶ್ಯ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ.