- Kannada News Photo gallery Young women take selfies in floriculture lands near highway at chikkaballapur
Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪೀಕಲಾಟ!
ಕೈಯಲ್ಲಿ ಹೈ ಫೈ ಸ್ಮಾರ್ಟ್ ಫೋನ್ ಗಳು, ಅದರಲ್ಲಿ ಹೈ ಕ್ವಾಲಿಟಿ ಕ್ಯಾಮೆರಾಗಳು ಒಂದೆಡೆಯಾದ್ರೆ... ಮತ್ತೊಂದೆಡೆ ಸುಂದರ ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಅಪ್ ಲೋಡ್ ಮಾಡಿಲ್ಲ ಅಂದ್ರೆ ಅದೇನೊ ಕಳೆದುಕೊಂಡ ಭಾವನೆ ಮೂಡುತ್ತೆ. ಕಣ್ಣಿಗೆ ಕಂಡ ಸುಂದರ ಹೂ.. ತೋಟದಲ್ಲಿ ಯುವತಿಯರು ಸೇಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ದೃಶ್ಯ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ.
Updated on:Jan 30, 2023 | 6:04 PM

ಹೂ ತೋಟದಲ್ಲಿ ಸೇಲ್ಪಿಗೆ ಮುಗಿಬಿದ್ದ ಯುವತಿಯರು! ಯುವತಿಯರಿಗೆ ಚೆಲ್ಲಾಟ ರೈತರಿಗೆ ಪಿಕಲಾಟ! ವರದಿ: ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ

ಕೈಯಲ್ಲಿ ಹೈ ಫೈ ಸ್ಮಾರ್ಟ್ ಫೋನ್ ಗಳು, ಅದರಲ್ಲಿ ಹೈ ಕ್ವಾಲಿಟಿ ಕ್ಯಾಮೆರಾಗಳು ಒಂದೆಡೆಯಾದ್ರೆ... ಮತ್ತೊಂದೆಡೆ ಸುಂದರ ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಅಪ್ ಲೋಡ್ ಮಾಡಿಲ್ಲ ಅಂದ್ರೆ ಅದೇನೊ ಕಳೆದುಕೊಂಡ ಭಾವನೆ ಮೂಡುತ್ತೆ.

ಇನ್ನು ಕಣ್ಣಿಗೆ ಸುಂದರವಾದದ್ದನ್ನು ಕಂಡ ತಕ್ಷಣ ಅದನ್ನು ಸೇಲ್ಫಿ ಫೋಟೊ ತೆಗೆದುಕೊಳ್ಳಲಿಲ್ಲ ಅಂದ್ರೆ ಹೇಗೆ ಹೇಳಿ!

ಕಣ್ಣಿಗೆ ಕಂಡ ಸುಂದರ ಹೂ.. ತೋಟದಲ್ಲಿ ಯುವತಿಯರು ಸೇಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ದೃಶ್ಯ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ? ಈ ವರದಿ ನೋಡಿ!!

ಸ್ಪರ್ಧೆಗಿಳಿದವರಂತೆ... ನಾನಾ ನೀನಾ, ನನ್ನ ಮೊಬೈಲ್ ನಲ್ಲಿ ಚೆನ್ನಾಗಿ ಫೋಟೊ ಬರುತ್ತಾ... ನಿನ್ನ ಮೊಬೈಲ್ ನಲ್ಲಿ ಫೋಟೊ.. ಚೆನ್ನಾಗಿ ಬರುತ್ತಾ... ಅಂತಾ ಸುಂದರ ಯುವತಿಯರು ಸುಂದರ ಕಲರ್ ಕಲರ್ ಸೇವಂತಿ ತೋಟದಲ್ಲಿ ಸೇಲ್ಪಿ ಫೋಟೊ ಕ್ಲಿಕ್ಕಿಸಿಕೊಂಡರು.

ಇದೆಲ್ಲಾ ಕಂಡುಬಂದಿದ್ದು ಚಿಕ್ಕಬಳ್ಳಾಪುರ ತಾಲೂಕಿನ ಮರಸನಹಳ್ಳಿ ಹಾಗೂ ಲಿಂಗಶೆಟ್ಟಿಪುರದ ಬಳಿ ರೈತರ ಸೇವಂತಿ ತೋಟದಲ್ಲಿ.

ಇದ್ರಿಂದ, ಕಷ್ಟಪಟ್ಟು ಬೆಳೆದ ಹೂ ಜಮೀನಿನಲ್ಲಿ ಹಾಳಾಗ್ತಿದೆ ಎನ್ನುತ್ತಾರೆ ರೈತ ಮಹಿಳೆ ಮಮತಾ.



ಚಿಕ್ಕಬಳ್ಳಾಪುರದ ಬಳಿ 112 ಅಡಿಗಳ ಆದಿಯೋಗಿ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದೆ ತಡ, ರಾಜಧಾನಿ ಬೆಂಗಳೂರಿನ ಯುವಕ ಯುವತಿಯರ ಚಿತ್ತ ಆದಿಯೋಗಿಯತ್ತ ಮೂಡಿದೆ.



ರಸ್ತೆ ಬದಿ ಇರುವ ತೋಟಗಳು ಈಗ ಸೇಲ್ಫೀ ಸ್ಪಾಟ್ ಗಳಾಗಿವೆ.







ಕೆಲವು ರೈತರು ಸೇಲ್ಪಿ ತೆಗೆದುಕೊಳ್ಳಲು ಬರುವವರಿಂದ ಪ್ರವೇಶ ಶುಲ್ಕದ ಹೆಸರಿನಲ್ಲಿ ಹಣ ಪಡೆಯುತ್ತಿದ್ದಾರೆ ಎಂಬ ಮಾತೂ ಕೇಳಿಬಂದಿದೆ.








Published On - 5:38 pm, Mon, 30 January 23




