Chikkaballapura News: ಪರಿಷ್ಕೃತ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಯೋಜನೆ ನೋಂದಣಿಗೆ ಚಿಕ್ಕಬಳ್ಳಾಪುರ ರೈತರಿಂದ ಅರ್ಜಿ ಆಹ್ವಾನ

| Updated By: ಸಾಧು ಶ್ರೀನಾಥ್​

Updated on: Jul 20, 2023 | 6:29 PM

R WBCIS: ಚಿಕ್ಕಬಳ್ಳಾಪುರ ತಾಲ್ಲೂಕಿನ ಎಲ್ಲ ದ್ರಾಕ್ಷಿ, ದಾಳಿಂಬೆ, ಮಾವು ಬೆಳೆಗಾರರು ಮುಂದೆ ಪ್ರಕೃತಿ ವಿಕೋಪದಿಂದ ಆಗಬಹುದಾದ ಆರ್ಥಿಕ ನಷ್ಟದ ಪರಿಹಾರ ಪಡೆಯಲು ಟಾಟಾ ಎಐಜಿ ಜನರಲ್ ಇನ್ಸುರೆನ್ಸ್ ಕಂಪನಿಯಿಂದ ಕಡ್ಡಾಯವಾಗಿ ವಿಮಾ ಯೋಜನೆ ಪಡೆಯುವಂತೆ ರೈತರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. 

Chikkaballapura News: ಪರಿಷ್ಕೃತ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಯೋಜನೆ ನೋಂದಣಿಗೆ ಚಿಕ್ಕಬಳ್ಳಾಪುರ ರೈತರಿಂದ ಅರ್ಜಿ ಆಹ್ವಾನ
ದ್ರಾಕ್ಷಿ, ದಾಳಿಂಬೆ, ಮಾವು ಬೆಳೆ ನಷ್ಟದ ವಿಮಾ ಯೋಜನೆಗೆ ಚಿಕ್ಕಬಳ್ಳಾಪುರ ರೈತರಿಂದ ಅರ್ಜಿ ಆಹ್ವಾನ, ಕೊನೆ ದಿನಾಂಕ ಯಾವಾಗ?
Follow us on

ಚಿಕ್ಕಬಳ್ಳಾಪುರ, ಜುಲೈ 20: ಪ್ರಸಕ್ತ 2023ನೇ ಸಾಲಿನ ಮುಂಗಾರು ಹಂಗಾಮಿಗೆ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ (Restructured Weather Based Crop Insurance Scheme -R WBCIS) ಯೋಜನೆಯಡಿ ಚಿಕ್ಕಬಳ್ಳಾಪುರ ತಾಲ್ಲೂಕಿಗೆ ಸಂಬಂಧಿಸಿದಂತೆ ಮೂರು ಹೋಬಳಿಯ ಎಲ್ಲಾ ಪಂಚಾಯಿತಿಗಳಿಗೂ ಅನ್ವಯವಾಗುವಂತೆ ದ್ರಾಕ್ಷಿ, ದಾಳಿಂಬೆ ಮತ್ತು ಮಾವು ಬೆಳೆಗಳಿಗೆ ವಿಮೆ ಮಾಡಿಸಲು ಅಧಿಸೂಚನೆ ಹೊರಡಿಸಲಾಗಿದೆ. ಆದ್ದರಿಂದ ಚಿಕ್ಕಬಳ್ಳಾಪುರ ತಾಲ್ಲೂಕಿನ ಎಲ್ಲ ದ್ರಾಕ್ಷಿ, ದಾಳಿಂಬೆ, ಮಾವು ಬೆಳೆಗಾರರು (Pomegranate, Grape, Mango) ಮುಂದೆ ಪ್ರಕೃತಿ ವಿಕೋಪದಿಂದ ಆಗಬಹುದಾದ ಆರ್ಥಿಕ ನಷ್ಟದ ಪರಿಹಾರ ಪಡೆಯಲು ಟಾಟಾ ಎಐಜಿ (TATA AIG) ಜನರಲ್ ಇನ್ಸುರೆನ್ಸ್ ಕಂಪನಿಯಿಂದ ಕಡ್ಡಾಯವಾಗಿ ವಿಮಾ ಯೋಜನೆ ಪಡೆಯುವಂತೆ ರೈತರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಬೆಳೆ ವಿಮೆ ಪ್ರೀಮಿಯಂ ಕಂತು (Insurance Premium) ಪಾವತಿಸಲು ಜುಲೈ 31 ಅಂತಿಮ ದಿನಾಂಕವಾಗಿದೆ.

ಪಾವತಿಸಬೇಕಾದ ಮೊತ್ತದ ವಿವರ

ದ್ರಾಕ್ಷಿ ಬೆಳೆಗೆ ವಿಮಾ ಮೊತ್ತ -2,80,000/-, ರೈತರು ಪಾವತಿಸಬೇಕಾದ ಪ್ರೀಮಿಯಂ ಮೊತ್ತ ಪ್ರತಿ ಹೆಕ್ಟೆರ್ ಗೆ -14,000/- ಪ್ರತಿ ಎಕರೆಗೆ-5,600/-
ಮಾವು ಬೆಳೆಗೆ ವಿಮಾ ಮೊತ್ತ-80,000/-, ರೈತರು ಪಾವತಿಸಬೇಕಾದ ಪ್ರೀಮಿಯಂ ಮೊತ್ತ ಪ್ರತಿ ಹೆಕ್ಟೆರ್ ಗೆ -4,000/- ಪ್ರತಿ ಎಕರೆಗೆ-1,600/-
ದಾಳಿಂಬೆ ಬೆಳೆಗೆ ವಿಮಾ ಮೊತ್ತ-1,27,000/-, ರೈತರು ಪಾವತಿಸಬೇಕಾದ ಪ್ರೀಮಿಯಂ ಮೊತ್ತ ಪ್ರತಿ ಹೆಕ್ಟೆರ್ ಗೆ-6,350/- ಪ್ರತಿ ಎಕರೆಗೆ-2,540/-

ರೈತರು ಪ್ರೀಮಿಯಂ ವಂತಿಕೆಯನ್ನು ಸಂಬಂಧಪಟ್ಟ ಬ್ಯಾಂಕ್, ಸೇವಾ ಸಿಂಧು ಕೇಂದ್ರ, ಗ್ರಾಮ ಒನ್ ಕೇಂದ್ರಗಳಲ್ಲಿ ಪಾವತಿಸಿ ಸ್ವೀಕೃತಿ ಪಡೆಯಬೇಕು.

ಹೆಚ್ಚಿನ ಮಾಹಿತಿಗಾಗಿ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಾದ ಚಿಕ್ಕಬಳ್ಳಾಪುರ ಕಸಬಾ -97426 97571, ಮಂಡಿಕಲ್ಲು-99002 48990, ನಂದಿ -83109 47258, ಸಹಾಯಕ ತೋಟಗಾರಿಕೆ ನಿರ್ದೇಶಕರು -96200 69249, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು -99163 75216 ಮೊಬೈಲ್​​ಗೆ ಸಂಪರ್ಕಿಸಬಹುದೆಂದು ಚಿಕ್ಕಬಳ್ಳಾಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಗಾಯಿತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Restructured Weather Based Crop Insurance Scheme – ಪ್ರಕೃತಿ ವಿಕೋಪಗಳು / ಹವಾಮಾನ ವೈಪರೀತ್ಯಗಳಾದ ಅತಿವೃಷ್ಟಿ, ಅನಾವೃಷ್ಟಿ, ಬಿರುಗಾಳಿ, ಆಲಿಕಲ್ಲು ಮಳೆ, ಪ್ರವಾಹ, ಸಿಡಿಲಿನಿಂದ ಉಂಟಾಗುವ, ಬೆಂಕಿ ಅವಘಡ ಇತ್ಯಾದಿ ಕಾರಣಗಳಿಂದ ಸಂಭವಿಸಬಹುದಾದ ಬೆಳೆಹಾನಿಯ ನಷ್ಟದ ಪರಿಹಾರವನ್ನು ಬೆಳೆ ವಿಮೆ ಘಟಕವಾರು (ಗ್ರಾಮ ಪಂಚಾಯಿತಿ) ನಿರ್ಧರಿಸಿ, ಬೆಳೆ ನಷ್ಟದ ಪರಿಹಾರವನ್ನು ನೀಡುವುದರ ಮೂಲಕ ರೈತರಿಗೆ ನೆರವಾಗುವುದು ಮರುವಿನ್ಯಾಸಗೊಳಿಸಿದ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:26 pm, Thu, 20 July 23