ಚಿಕ್ಕಬಳ್ಳಾಪುರ: ಶೌಚಾಲಯಕ್ಕಾಗಿ ಮಕ್ಕಳ ಗ್ರಾಮ ಸಭೆಯಲ್ಲಿ ಕಣ್ಣೀರಿಟ್ಟ ವಿದ್ಯಾರ್ಥಿನಿಯರು
ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮ ಪಂಚಾಯತಿ ವತಿಯಿಂದ ಮಕ್ಕಳ ಗ್ರಾಮ ಸಭೆ ನಡೆಯಿತು. ಶಾಲಾ ಮಕ್ಕಳು ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು. ಈ ವೇಳೆ ಕೆಲವು ವಿದ್ಯಾರ್ಥಿನಿಯರು ಮನೆಯಲ್ಲಿ ಶೌಚಾಲಯಗಳು ಇಲ್ಲದಿರುವುದನ್ನು ಹೇಳಿ ಶೌಚಾಲಯ ನಿರ್ಮಾಣ ಮಾಡಿಕೊಡುವಂತೆ ಕಣ್ಣೀರಿಟ್ಟರು.
ಚಿಕ್ಕಬಳ್ಳಾಪುರ, ಜ.6: ತಾಲೂಕಿನ (Chikkaballapur) ನಂದಿ ಗ್ರಾಮ ಪಂಚಾಯತಿ ವತಿಯಿಂದ ಮಕ್ಕಳ ಗ್ರಾಮ ಸಭೆ ನಡೆಯಿತು. ಶಾಲಾ ಮಕ್ಕಳು ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು. ಈ ವೇಳೆ ಕೆಲವು ವಿದ್ಯಾರ್ಥಿನಿಯರು ಮನೆಯಲ್ಲಿ ಶೌಚಾಲಯಗಳು ಇಲ್ಲದಿರುವುದನ್ನು ಹೇಳಿ ಶೌಚಾಲಯ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದರು. ನಮ್ಮ ಮನೆಯಲ್ಲಿ ನಾಲ್ಕು ಜನ ಮಕ್ಕಳಿದ್ದು, ಸಾಕುವುದು ಕಷ್ಟಕರವಾಗಿದೆ. ನಮ್ಮ ಮನೆಯಲ್ಲಿ ಟಾಯ್ಲೆಟ್ ಸಹ ಇಲ್ಲ ಅಂತ ಅಂಗಟ್ಟ ಗ್ರಾಮದ 5 ನೇ ತರಗತಿ ವೇದಾ ಶ್ರೀ ಕಣ್ಣೀರು ಹಾಕಿದಳು. ನಮ್ಮ ತಂದೆ ಇಲ್ಲ ಬಾಡಿಗೆ ಮನೆಯಲ್ಲಿ ಇದ್ದೇವೆ. ಮನೆಯಲ್ಲಿ ಶೌಚಾಲಯ ಕೂಡ ಇಲ್ಲ ಎಂದು ಸುಲ್ತಾನಪೇಟೆ ಗ್ರಾಮದ 10 ನೇ ತರಗತಿ ವಿದ್ಯಾರ್ಥಿನಿ ರಂಜಿತಾ ಸಹ ಕಣ್ಣೀರಾದಳು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ