ಚಿಕ್ಕಬಳ್ಳಾಪುರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(Government School)ಯ ಕೊಠಡಿಯ ಮೇಲ್ಛಾವಣಿಯ ಗಾರೆ ಕುಸಿದುಬಿದ್ದು ಅಧ್ಯಯನ ನಿರತ ಇಬ್ಬರು ವಿದ್ಯಾರ್ಥಿನಿಯರ ತಲೆಗೆ ಗಾಯವಾಗಿರುವ ಘಟನೆ ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆಯ ನೂತನ ಚೇಳೂರು ತಾಲೂಕಿನ ಯರಗುಡಿ ಗ್ರಾಮದಲ್ಲಿ ನಡೆದಿದೆ. ದೊಡ್ಡವಾರಪಲ್ಲಿ ಗ್ರಾಮದ ನಂದಿತಾ ಹಾಗೂ ಗ್ಯಾದಿವಾಂಡ್ಲಪಲ್ಲಿ ಗ್ರಾಮದ ಅಕ್ಷಿತಾ ಗಾಯಗೊಂಡ ವಿದ್ಯಾರ್ಥಿಗಳು. ಇವರು 3ನೇ ತರಗತಿಯಲ್ಲಿ ಓದುತ್ತಿದ್ದು, ಎಂದಿನಂತೆ ಶಾಲೆಗೆ ಬಂದಿದ್ದಾರೆ. ಆದ್ರೆ, ಮಧ್ಯಾಹ್ನ 3.30ರ ಸಮಯದಲ್ಲಿ ಇದ್ದಕ್ಕಿದ್ದಂತೆ ವಿದ್ಯಾರ್ಥಿಗಳು ಕುಳಿತಿದ್ದ ಕೊಠಡಿಯ ಮೇಲ್ಛಾವಣಿಯ ಗಾರೆ ಕುಸಿದುಬಿದ್ದು ಇಬ್ಬರು ವಿದ್ಯಾರ್ಥಿನಿಯರ ತಲೆಗೆ ಗಂಭೀರ ಗಾಯವಾಗಿತ್ತು. ಇತ್ತ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ವಿಷಯ ತಿಳಿದು ‘ಕೊಠಡಿಯ ರಿಪೇರಿ ಕಾಮಗಾರಿ ಕಳಪೆಯಾಗಿದ್ದಾಗ ಈ ರೀತಿ ಆಗುತ್ತೆ ಎಂದರು.
ಇತ್ತೀಚೆಗೆ ತಾನೇ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಕೊಠಡಿಯ ಮೇಲ್ಛಾವಣಿಯನ್ನು ರಿಪೇರಿ ಮಾಡಲಾಗಿತ್ತು. ಕಾಮಗಾರಿ ಕಳಪೆ ಮಾಡಿದ ಕಾರಣ ಈಗ ಗಾರೆ ಕುಸಿದುಬಿದ್ದು ಅವಾಂತರವಾಗಿದೆ. ಅದೃಷ್ಟವಶಾತ್ ಶಾಲೆಯಲ್ಲಿದ್ದ ಇನ್ನಿತರ ವಿದ್ಯಾರ್ಥಿಗಳು ಹೊರಗೆ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ, ಇಲ್ಲವಾದ್ರೆ ದೊಡ್ಡ ಅನಾವುತವೇ ಆಗುತ್ತಿತ್ತು. ಇದರಿಂದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ‘ಈ ರೀತಿಯ ಶಾಲೆಗಳ ಪಟ್ಟಿ ಮಾಡಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ:Haveri News: ಬಸ್ ರಶ್‌ಗೆ ಬಾಲಕಿ ಬಲಿ: ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ ದುರಂತ ಅಂತ್ಯ
ಇನ್ನು ಸರ್ಕಾರಿ ಶಾಲೆಗಳು ಅಂದ್ರೆ, ಅದೇಷ್ಟೊ ಜನ ಪೋಷಕರು ಮೂಗು ಮುರಿಯುತ್ತಾರೆ. ಇನ್ನೂ ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲೆಗಳನ್ನೇ ನಂಬಿಕೊಂಡು ಬಂದಿದ್ದ ಇಬ್ಬರು ವಿದ್ಯಾರ್ಥಿನಿಯರು ಬದುಕುಳಿದಿದ್ದೆ ಹೆಚ್ಚು, ದೊಡ್ಡ ಅವಾಂತರವಾಗುವುದಕ್ಕೂ ಮುನ್ನ ಸರ್ಕಾರ ಈ ಕುರಿತು ಎಚ್ಚೇತ್ತುಕೊಳ್ಳಬೇಕಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ