ಬಾಗೇಪಲ್ಲಿ ಕ್ಷೇತ್ರಕ್ಕೆ ಟಿಕೆಟ್ ಘೋಷಿಸಿದ ಹೆಚ್​​ಡಿ ಕುಮಾರಸ್ವಾಮಿ! ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿಸಿದ ಜೆಡಿಎಸ್ ಮುಖಂಡ

| Updated By: ಆಯೇಷಾ ಬಾನು

Updated on: Sep 03, 2021 | 10:25 AM

ಜೆಡಿಎಸ್ ಪಕ್ಷದಿಂದ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ನಾನೆ ಅಭ್ಯರ್ಥಿಯಾಗ್ತಿನಿ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನನ್ನ ಹೆಸರನ್ನೆ ಘೋಷಣೆ ಮಾಡಿದ್ದಾರೆ. ನಾನೆ ಶಾಸಕನೂ ಆಗ್ತಿನಿ ಅಂತ ಜೆಡಿಎಸ್ ಮುಖಂಡ ಡಿ.ಜೆ.ನಾಗರಾಜ ರೆಡ್ಡಿ ಈಗಲೇ ಘೋಷಣೆ ಮಾಡಿಕೊಂಡಿದ್ದಾರೆ.

ಬಾಗೇಪಲ್ಲಿ ಕ್ಷೇತ್ರಕ್ಕೆ ಟಿಕೆಟ್ ಘೋಷಿಸಿದ ಹೆಚ್​​ಡಿ ಕುಮಾರಸ್ವಾಮಿ! ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿಸಿದ ಜೆಡಿಎಸ್ ಮುಖಂಡ
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಘೋಷಿಸಿದ ಹೆಚ್ಡಿ ಕುಮಾರಸ್ವಾಮಿ
Follow us on

ಚಿಕ್ಕಬಳ್ಳಾಪುರ: ಕೂಸು ಹುಟ್ಟುವುದಕ್ಕೂ ಮುನ್ನ ಕೂಲಾವಿ ಹೊಲಿಸಿದರು ಎಂಬ ಗಾದೆ ಮಾತು ಕೇಳಿರುತ್ತೀವಿ. ಈಗ ಇದಕ್ಕೆ ತಕ್ಕಂತೆ ಜೆಡಿಎಸ್ ಮುಖಂಡ ನಡೆದುಕೊಂಡಿದ್ದಾರೆ. 2023ರ ವಿಧಾನಸಭೆ ಚುನಾವಣೆಗೆ ಎರಡು ವರ್ಷ ಬಾಕಿ ಇರುವಾಗಲೇ ಅಭ್ಯರ್ಥಿ ಘೋಷಣೆ ಮಾಡಿಕೊಂಡಿದ್ದಾರೆ. ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ನಾನೆ ಅಭ್ಯರ್ಥಿಯಾಗ್ತಿನಿ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನನ್ನ ಹೆಸರನ್ನೆ ಘೋಷಣೆ ಮಾಡಿದ್ದಾರೆ. ನಾನೆ ಶಾಸಕನೂ ಆಗ್ತಿನಿ ಅಂತ ಜೆಡಿಎಸ್ ಮುಖಂಡ ಡಿ.ಜೆ.ನಾಗರಾಜ ರೆಡ್ಡಿ ಈಗಲೇ ಘೋಷಣೆ ಮಾಡಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಪ್ರಭಾವಿ ಜೆಡಿಎಸ್ ಮುಖಂಡ, ಪ್ರಭಾವಿ ಸುಪ್ರೀಂಕೋರ್ಟ್ ನ ವಿಶ್ರಾಂತ ನ್ಯಾಯಮೂರ್ತಿಗಳ ಹತ್ತಿರದ ಸಂಬಂಧಿಯೂ ಆಗಿರುವ ನಾಗರಾಜ್ ರೆಡ್ಡಿ, ಕೂಸು ಹುಟ್ಟುವುದಕ್ಕೂ ಮುನ್ನವೆ ಕೂಲಾವಿ ಹೊಲಿಸಿದಂತಿದೆ. ಇತ್ತೀಚೆಗೆ ಬಾಗೇಪಲ್ಲಿಯ ಜೆಡಿಎಸ್ ಪ್ರಭಾವಿ ಮುಖಂಡ ಹರಿನಾಥ್ ರೆಡ್ಡಿ ಹಾಗೂ ಜೆಡಿಎಸ್ ಮುಖಂಡ ಗೊಟ್ಟಿಗೇರೆ ಮಂಜುನಾಥ್ ನೇತೃತ್ವದಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಯವರನ್ನು ಗೆಸ್ಟ್ ಹೌಸ್ ನಲ್ಲಿ ಭೇಟಿ ಮಾಡಿದಾಗ ಅಲ್ಲೆ ಕುಮಾರಸ್ವಾಮಿಯವರು ಡಿ.ಜೆ. ನಾಗರಾಜ್ ರೆಡ್ಡಿಯವರೆ ಮುಂದಿನ ವಿಧಾನಸಭೆ ಚುನಾವಣೆಯ ಅಭ್ಯರ್ಥಿ ಎಂದು ಕಾರ್ಯಕರ್ತರ ಸಮ್ಮುಖದಲ್ಲೆ ಘೋಷಣೆ ಮಾಡಿದ್ದಾರೆ ಎಂದು ನಾಗರಾಜ್ ರೆಡ್ಡಿ ತಿಳಿಸಿದ್ದಾರೆ.

ಹಾಗೂ ಇಂದಿನಿಂದಲೇ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಹೆಚ್ಡಿಕೆ ಸೂಚಿಸಿದ್ದಾರಂತೆ. ಇದ್ರಿಂದ ಮುಂದಿನ 2023ರ ವಿಧಾನಸಭೆ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರದಿಂದ ನಾನೆ ಗೆದ್ದು ಶಾಸಕನಾಗ್ತಿನಿ ಅಂತ ಡಿ.ಜೆ. ನಾಗರಾಜ್ ರೆಡ್ಡಿ ಹೇಳಿಕೊಂಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರದಿಂದ ಟಿಕೆಟ್ ವಂಚಿತರಾಗಿದ್ದ ನಾಗರಾಜ್, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದರ ಮೂಲಕ ಪಕ್ಷದ ಅಧಿಕೃತ ಅಭ್ಯರ್ಥಿ ಸಿ.ಆರ್ ಮನೋಹರ್ ರ ಸೋಲಿಗೆ ಕಾರಣರಾಗಿದ್ರು. ಇದ್ರಿಂದ ಕಾಂಗ್ರೇಸ್ ಅಭ್ಯರ್ಥಿ ಎಸ್.ಎನ್.ಸುಬ್ಬಾರೆಡ್ಡಿಗೆ ಲಾಭವಾಗಿ ಪ್ರಸ್ತುತ ಎಸ್.ಎನ್.ಸುಬ್ಬಾರೆಡ್ಡಿ ಕಾಂಗ್ರೆಸ್ ಶಾಸಕರಾಗಿದ್ದಾರೆ.

ಇದ್ರಿಂದ ಜೆಡಿಎಸ್ ವರಿಷ್ಠರು ಹಿಂದಿನ ತಪ್ಪು ಮರುಕಳಿಸದಂತೆ ಈ ಭಾರಿ ಅಡ್ವಾನ್ಸ್ ಆಗಿ ಡಿ.ಜೆ.ನಾಗರಾಜ್ ರೆಡ್ಡಿಗೆ ಪಕ್ಷದ ಟಿಕೆಟ್ ನೀಡುವುದಾಗಿ ಘೋಷಣೆ ಮಾಡಿದ್ದು ಈ ವಿಷಯ ನಾಗರಾಜ್ ಹಾಗೂ ಜೆಡಿಎಸ್ ಕಾರ್ಯಕರ್ತರಲ್ಲಿ ಸಂತಸ ಹಿಮ್ಮಡಿಯಾಗುವಂತೆ ಮಾಡಿದೆ. ಇದ್ರಿಂದ ನಾಗರಜ್ ಮುಂಬರುವ ಚುನಾವಣೆಯಲ್ಲಿ ನಾನೆ ಗೆಲ್ಲೋದು, ನಾನೇ ಶಾಸಕನಾಗೊದು ಅಂತ ಬಡಾಯಿ ಕೊಚ್ಚಿಕೊಳ್ತಿದ್ದಾರೆ.

ಇದನ್ನೂ ಓದಿ: ಕೆಬಿಸಿಯಲ್ಲಿ ಗೆದ್ದು ಲಕ್ಷಾಧಿಪತಿಯಾದ ರಾಜಸ್ಥಾನದ ಸರ್ಕಾರಿ ಶಾಲಾ ಶಿಕ್ಷಕಿ ಆಯೆಷಾ; ಪ್ರಶಸ್ತಿಯ ಮೊತ್ತವನ್ನು ಏನು ಮಾಡುತ್ತಾರಂತೆ?

Published On - 10:24 am, Fri, 3 September 21