ಡಾ. ವೀರೇಂದ್ರ ಹೆಗ್ಗಡೆ ನಡೆದಾಡುವ-ಮಾತನಾಡುವ ದೇವರು: ಶಿಡ್ಲಘಟ್ಟದಲ್ಲಿ ಆರೋಗ್ಯ ಸಚಿವ ಸುಧಾಕರ್ ಬಣ್ಣನೆ

ಅನ್ನ, ಅಕ್ಷರ, ಆರೋಗ್ಯ, ಪರಿಸರ ರಕ್ಷಣೆಯ ಜೊತೆಗೆ ಕೆರೆ ಹಾಗೂ ದೇವಸ್ಥಾನಗಳ ಪುನರುಜ್ಜೀವನ ಸೇರಿದಂತೆ ಹತ್ತು ಹಲವು ರಂಗಗಳಲ್ಲಿ ಕೊಡುಗೆ ನೀಡಿರುವ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯರವರು ನಡೆದಾಡುವ ಹಾಗೂ ಮಾತನಾಡುವ ದೇವರು ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಶ್ರೀ ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ ಶಿಡ್ಲಘಟ್ಟ ತಾಲೂಕಿನಲ್ಲಿ ಬಣ್ಣನೆ ಮಾಡಿದರು.

ಡಾ. ವೀರೇಂದ್ರ ಹೆಗ್ಗಡೆ ನಡೆದಾಡುವ-ಮಾತನಾಡುವ ದೇವರು: ಶಿಡ್ಲಘಟ್ಟದಲ್ಲಿ ಆರೋಗ್ಯ ಸಚಿವ ಸುಧಾಕರ್ ಬಣ್ಣನೆ
ಡಾ. ವೀರೇಂದ್ರ ಹೆಗಡೆಯರವರು ನಡೆದಾಡುವ-ಮಾತನಾಡುವ ದೇವರು: ಶಿಡ್ಲಘಟ್ಟದಲ್ಲಿ ಆರೋಗ್ಯ ಸಚಿವ ಸುಧಾಕರ್ ಬಣ್ಣನೆ
Edited By:

Updated on: Jul 08, 2022 | 6:20 PM

ಚಿಕ್ಕಬಳ್ಳಾಪುರ: ಅನ್ನ, ಅಕ್ಷರ, ಆರೋಗ್ಯ, ಪರಿಸರ ರಕ್ಷಣೆಯ ಜೊತೆಗೆ ಕೆರೆ ಹಾಗೂ ದೇವಸ್ಥಾನಗಳ ಪುನರುಜ್ಜೀವನ ಸೇರಿದಂತೆ ಹತ್ತು ಹಲವು ರಂಗಗಳಲ್ಲಿ ತಮ್ಮದೆ ಆದ ಕೊಡುಗೆ ನೀಡಿರುವ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯರವರು (Dr Veerendra Heggade) ನಡೆದಾಡುವ ಹಾಗೂ ಮಾತನಾಡುವ ದೇವರು ಆಗಿದ್ದಾರೆ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಖಾತೆಗಳ ಸಚಿವರಾದ ಡಾ. ಕೆ. ಸುಧಾಕರ್ (Health Minister Dr K Sudhakar) ಶ್ರೀ ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ ಬಣ್ಣನೆ ಮಾಡಿದರು.

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಬೆಳ್ಳೂಟಿ ಗ್ರಾಮದ ಗೇಟ್ ನಲ್ಲಿ ನಡೆದ ಸ್ವಸಹಾಯ ಸಂಘಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ವಿರೇಂದ್ರ ಹೆಗ್ಗಡೆಯವರು ನಾಡು, ದೇಶಕ್ಕೆ ಮಾತ್ರವಲ್ಲದೆ ವಿಶ್ವಕ್ಕೆ ಆದರ್ಶಪ್ರಾಯ ಎಂದರು. ವಿರೇಂದ್ರ ಹೆಗ್ಗಡೆಯವರ ಸಮಾಜ ಸೇವೆ ಹೃದಯ ವೈಶಾಲ್ಯತೆಯನ್ನು ಗುರುತಿಸಿ, ಪ್ರಧಾನಿ ನರೇಂದ್ರ ಮೋದಿಯವರು ಹೆಗ್ಗಡೆ ಅವರಂತಹ ಮಹನೀಯರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ. ಇದರಿಂದ ಆ ಸ್ಥಾನದ ಗೌರವವನ್ನು ಹೆಚ್ಚಿಸಿದ್ದಾರೆ ಎಂದರು.

Published On - 5:39 pm, Fri, 8 July 22