ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಹಲವೆಡೆ ಅಪಾರ ಹಾನಿ ಸಂಭವಿಸಿದೆ. ಶಿಡ್ಲಘಟ್ಟ ತಾಲೂಕಿನ ಚೊಕ್ಕನಹಳ್ಳಿ ಗ್ರಾಮದ ಬಳಿ ನಾರಾಯಣರೆಡ್ಡಿ ಕೆರೆ ಕಟ್ಟೆ ಒಡೆದು ಅಪಾರ ಬೆಳೆ ನೀರುಪಾಲಾಗಿದೆ. ಭತ್ತ, ರಾಗಿ, ಕಡಲೇಕಾಯಿ ಸೇರಿ ಅಪಾರ ಬೆಳೆ ನೀರುಪಾಲಾಗಿದ್ದು, ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಧಾರಾಕಾರ ಮಳೆಗೆ ಬಟ್ಲಹಳ್ಳಿ ಮುಖ್ಯ ರಸ್ತೆ ಬಂದ್:
ಚಿಂತಾಮಣಿ: ಧಾರಾಕಾರ ಮಳೆಯಿಂದ ಬ್ರಾಹ್ಣಣರಹಳ್ಳಿ ಬಳಿ ಕುಶಾವತಿ ನದಿ ತುಂಬಿ ಹರಿಯುತ್ತಿರುವ ಕಾರಣ, ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಮುಖ್ಯರಸ್ತೆ ಬಂದ್ ಆಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಹಳ್ಳಿಗಳಾದ ಬ್ರಾಹ್ಣಣರಹಳ್ಳಿ, ಬೊಮ್ಮಲಾಕಪುರ, ವೈ ಗೊಲ್ಲಹಳ್ಳಿ, ಮಾದಮಂಗಲ, ಕೊನಪ್ಪಲ್ಲಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.
ಧಾರಾಕಾರ ಮಳೆಗೆ ಉಕ್ಕಿ ಹರಿದ ಕುಶಾವತಿ ನದಿ:
ರಾತ್ರಿ ಸುರಿದ ಧಾರಾಕರ ಮಳೆಗೆ ಚಿಂತಾಮಣಿ ತಾಲೂಕಿನ ಬ್ರಾಹ್ಮಣರ ಹಳ್ಳಿ ಬಳಿ ಕುಶಾವತಿ ನದಿ ಉಕ್ಕಿ ಹರಿಯುತ್ತಿದೆ. ಬತ್ತಿದ ನದಿಯಲ್ಲಿ ನೀರು ನೋಡಿ ರೈತರು ಸಂತಸಗೊಂಡಿದ್ದಾರೆ. ನದಿ ತುಂಬಿ ಹರಿಯುತ್ತಿರುವ ಅಪರೂಪದ ದೃಶ್ಯ ನೋಡಲು ಜನರು ಧಾವಿಸಿದ್ದಾರೆ.
ಇದನ್ನೂ ಓದಿ:
ಉತ್ತರ ಕನ್ನಡ: ಗ್ಯಾಸ್ ಟ್ಯಾಂಕರ್ ಸ್ಫೋಟ; ಸುತ್ತಮುತ್ತ 300-400 ಮೀಟರ್ ವ್ಯಾಪಿಸಿರುವ ಬೆಂಕಿ
Karnataka Dams Water Level: ರಾಜ್ಯದ 5 ಪ್ರಮುಖ ಡ್ಯಾಂಗಳು ಭರ್ತಿ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ