ಚಿಕ್ಕಬಳ್ಳಾಪುರಕ್ಕೂ ಬಂತು ಮಳೆ, ರೈತ ಮೊಗದಲ್ಲಿ ತಂತು ಕಳೆ, ಬಿಸಿಲಿಗೆ ಬಾಡಿದ್ದ ಬೆಳೆಗಳಿಗೆ ಜೀವಕಳೆ

| Updated By: ಸಾಧು ಶ್ರೀನಾಥ್​

Updated on: May 20, 2024 | 2:03 PM

ಈ ಬಾರಿಯ ರಣ ಬಿಸಿಲಿಗೆ ಸಂಪೂರ್ಣ ಒಣಗಿ ಹೋಗಿರೋ ಸೇವಂತಿಗೆ ಹೂವಿನ ಗಿಡಗಳು..... ಒಣಗಿ ಹೋಗಿರುವ ಗಿಡದಿಂದಲೇ ಮತ್ತೆ ಚಿಗುರುತ್ತಿರೋ ಹಚ್ಚ ಹಸಿರು... ಮಳೆಯ ಪರಿಣಾಮ ನಳ ನಳಸುತ್ತಿರುವ ಸೇವಂತಿ, ರೋಜ್ ದ್ರಾಕ್ಷಿ ತೋಟಗಳು. ಈ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರದಲ್ಲಿ.

ಚಿಕ್ಕಬಳ್ಳಾಪುರಕ್ಕೂ ಬಂತು ಮಳೆ, ರೈತ ಮೊಗದಲ್ಲಿ ತಂತು ಕಳೆ, ಬಿಸಿಲಿಗೆ ಬಾಡಿದ್ದ ಬೆಳೆಗಳಿಗೆ ಜೀವಕಳೆ
ಚಿಕ್ಕಬಳ್ಳಾಪುರಕ್ಕೂ ಬಂತು ಮಳೆ, ರೈತ ಮೊಗದಲ್ಲಿ ತಂತು ಕಳೆ
Follow us on

ಹೂವು, ಹಣ್ಣು, ತರಕಾರಿ ಸೇರಿದಂತೆ ಸಿಲ್ಕ್, ಮಿಲ್ಕ್ ಗೆ ಖ್ಯಾತಿಯಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು (farmers), ಮಳೆರಾಯನ (heavy Rains) ಮೇಲೆ ಅವಲಂಬಿತರಾಗಿದ್ದರು. ಆದರೆ ಸಕಾಲಕ್ಕೆ ಮಳೆ-ಬೆಳೆ ಇಲ್ಲದೇ ಬರಗಾಲಕ್ಕೆ ತುತ್ತಾಗಿದ್ದರು. ಕೊನೆಗೂ ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರವಾಗಿ ಮಳೆಯಿಂದ, ಸೊರಗಿ ಹೋಗಿದ್ದ ಬೆಳೆಗಳೆಲ್ಲವೂ (crops) ಈಗ ಮರು ಜೀವ ಪಡೆದುಕೊಂಡಿದ್ದು ಜೀವ ಕಳೆ ತುಂಬಿಕೊಂಡು ನಳನಳಿಸುತ್ತಿವೆ. ಈ ಕುರಿತು ಒಂದು ವರದಿ.

ಚಿಕ್ಕಬಳ್ಳಾಪುರ ಜಿಲ್ಲೆಯ (Chikkaballapur Rains) ರೈತರು ಹೂವು ಹಣ್ಣು ತರಕಾರಿಗಳನ್ನ ಬೆಳೆಯೋದ್ರಲ್ಲಿ ಫೇಮಸ್. ರಾಜಧಾನಿಗೆ ಪ್ರತಿನಿತ್ಯ ಹೂವು ಹಣ್ಣು ಹಾಲು ತರಕಾರಿಗಳನ್ನು ಸರಬರಾಜು ಮಾಡೋ ಜಿಲ್ಲೆ ಅಂದರೆ ಚಿಕ್ಕಬಳ್ಳಾಪುರ. ಆದರೆ ಈ ಬಾರಿಯ ರಣಬಿಸಿಲಿನ ಪರಿಣಾಮ ಜಿಲ್ಲೆಯಲ್ಲೂ ಸಹ ದಾಖಲೆಯ ಉಷ್ಣಾಂಶ ತಾಪಮಾನ ಏರಿಕೆಯಿಂದಾಗಿ ಬೆಳೆಗಳೆಲ್ಲವೂ ಸಂಪೂರ್ಣ ಸುಟ್ಟು ಹೋಗುವಂತಾಗಿತ್ತು. ರೈತರು ಬೆಳೆದ ಸೇವಂತಿ ಹೂವಂತೂ ಸಂಪೂರ್ಣ ಬಿಸಿಲಿನ ತಾಪಮಾನದಿಂದ ಒಣಗಿ ಹೋಗಿತ್ತು. ಆದರೆ ಕಳೆದ ಎರಡು ಮೂರು ದಿನಗಳಿಂದ ಸುರಿದ ಧಾರಾಕರ ಮಳೆಗೆ ಜಿಲ್ಲೆಯಾದ್ಯಂತ ಹೊಸ ಜೀವ ಕಳೆ ಬಂದಿದೆ.

ಜಿಲ್ಲೆಯಲ್ಲಿ ಯಾವುದೇ ನದಿ ನಾಲೆಗಳಿಲ್ಲದಿದ್ದರೂ ಸಾವಿರಾರು ಅಡಿ ಕೊಳವೆಬಾವಿ ಕೊರೆದು ಕೊಳವೆ ಬಾವಿ ನೀರಿನ ಮೂಲಕವೇ ಎಲ್ಲಾ ಬೆಳೆಗಳನ್ನು ಸಹ ಬೆಳೆಯಲಾಗುತ್ತದೆ. ಅದರಲ್ಲೂ ಡ್ರಿಪ್ ಇರಿಗೇಶನ್ ಮೂಲಕ ಹನಿ ಹನಿ ನೀರನ್ನು ಉಳಿಸಿ ಬೆಳೆಗಳನ್ನ ಬೆಳೆಯಲಾಗುತ್ತಿದ್ದು ಆದರೆ ಈ ಬಾರಿ ಜಿಲ್ಲೆಯಲ್ಲಿ 40 ಡಿಗ್ರಿ ತಾಪಮಾನ ದಾಖಲೆಯಾಗಿದ್ದು ಈ ರಣ ಬಿಸಿಲಿನ ಪರಿಣಾಮ ಬೆಳೆದ ಬೆಳೆಗಳೆಲ್ಲವೂ ನಾಶವಾಗುವಂತಾಗಿತ್ತು. ಆದ್ರೆ ಮಳೆ ಬಂದು ಭೂತಾಯಿಗೆ ಹಸಿರು ಹುಡಿ ತುಂಬಿದಂತಾಗಿದೆ.

ಇದನ್ನೂ ಓದಿ: ಹತ್ತಾರು ವರ್ಷದಿಂದ ಕಾಟನ್‌ವುಡ್ ಮರದಲ್ಲೇ ನೂರಾರು ಜೇನುಗೂಡು ಕಟ್ಟುತ್ತಿದೆ! ಅದರ ವಿಶೇಷ ಮಾಹಿತಿ ಇಲ್ಲಿದೆ

ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧೆಡೆ ಮಳೆ ಸುರಿದಿರುವುದು ಒಂದಡೆ ಸಂತಸವಾದರೆ, ಮತ್ತೊಂದಡೆ ಚಿಕ್ಕಬಳ್ಳಾಪುರ ನಗರದ ಸಿ.ಎಸ್.ಐ. ಆಸ್ಪತ್ರೆ ರಸ್ತೆಯಲ್ಲಿ ಮರವೊಂದು ಉರುಳಿಬಿದ್ದು, ಕೆಲವು ವಿದ್ಯುತ್ ನೆಲಕ್ಕುರಳಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:02 pm, Mon, 20 May 24