ಚಿಕ್ಕಬಳ್ಳಾಪುರ, ಮೇ.22: ಜಿಲ್ಲೆಯ ಚಿಂತಾಮಣಿ(Chintamani)ನಗರದ ನಿವಾಸಿ ರಚನಾ ಎಂಬುವವರ ಮೂರು ವರ್ಷದ ಪುಟಾಣಿ ಕಂದ ಚಾನವಿ(Chanavi). ಗಂಟೆಗಿಂತಲೂ ಹೆಚ್ಚಿನ ಸಮಯ ನೀರಿನಲ್ಲಿ ತೇಲುವ ಮೂಲಕ ಮ್ಯಾಜಿಕ್ ಮಾಡಿದ್ದಾಳೆ. ಈ ಮಗುವಿಗೆ ಒಂದಷ್ಟು ಪುಟಾಣಿ ಮಕ್ಕಳು ಸಾಥ್ ನೀಡಿದ್ದು, ತಮ್ಮ ಮಕ್ಕಳ ಮೋಡಿ ಕಂಡು ಬೆರಗಾದ ಪೋಷಕರು, ನಿಜಕ್ಕೂ ಮೂಕವಿಸ್ಮಿತರಾಗಿದ್ದಾರೆ.
ಚಿಂತಾಮಣಿಯಲ್ಲಿ ಸ್ವಿಮ್ಮಿಂಗ್ ಮಾಸ್ಟರ್ ಗೋವಿಂದರಾಜು ಎನ್ನುವವರು, ಚಿಂತಾಮಣಿ ಹಾಗೂ ಬಾಗೇಪಲ್ಲಿ ಮಾರ್ಗ ಮದ್ಯ ಇರುವ ಮಳಮಾಚನಹಳ್ಳಿ ಗ್ರಾಮದ ರೈತರ ಬಾವಿಯಲ್ಲಿ ಮಕ್ಕಳಿಗೆ ಸ್ವಿಮ್ಮಿಂಗ್ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಗೋವಿಂದರಾಜು ಬಳಿ ತರಭೇತಿ ಪಡೆಯುತ್ತಿರುವ ಪುಟಾಣಿ ಚಾನವಿ.
ಇದನ್ನೂ ಓದಿ:ಶಿವಮೊಗ್ಗದ ತುಂಗಾ ನದಿಯಲ್ಲಿ ಈಜಲು ಬಂದಿದ್ದ ಬೆಂಗಳೂರಿನ ಇಬ್ಬರು ಯುವಕರು ನೀರು ಪಾಲು
ಬೆಳೆಯುವ ಸಿರಿ ಮೊಳಕೆಯನ್ನು ಎನ್ನುವ ಹಾಗೆ ಸ್ವಿಮ್ಮಿಂಗ್ನಲ್ಲಿ ಸಾಧನೆ ಮಾಡಲು ಹೊರಟಿದ್ದಾಳೆ. ಸ್ವಿಮ್ಮಿಂಗ್ನಲ್ಲಿ ಸಾಧನೆ ಮಾಡುವ ಕನಸು ಹೊತ್ತಿರುವ ಚಿಂತಾಮಣಿಯ ಪೋರಿ ಚಾನವಿ, ಸತತ ಪ್ರಯತ್ನದಿಂದ ಈಗಾಗಲೇ ಸ್ವಿಮ್ಮಿಂಗ್ನ ವಿವಿಧ ಆಯಾಮಗಳನ್ನು ಕಲಿತಿದ್ದು, ಇನ್ನಿತರ ಮಕ್ಕಳಿಗೆ ಮಾದರಿಯಾಗಿದ್ದಾಳೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ