ಶಿವಮೊಗ್ಗ: ರಂಜಾನ್ ಉಪವಾಸ ಮುಗಿಸಿ ಈಜಲು ಹೋದ ಮೂವರು ಬಾಲಕರು ನೀರುಪಾಲು
ರಂಜಾನ್ ಉಪವಾಸ ಮುಗಿಸಿ ಈಜಲು ಹೋಗಿದ್ದ ಮೂವರು SSLC ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತುಂಗಾ ನದಿಯ ರಾಮ ಮಂಟಪದ ಬಳಿ ನಡೆದಿದೆ. ಮೃತ ಬಾಲಕರ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ.
ಶಿವಮೊಗ್ಗ, ಏ.1: ರಂಜಾನ್ ಉಪವಾಸ (Ramadan fasting) ಮುಗಿಸಿ ಈಜಲು ಹೋಗಿದ್ದ ಮೂವರು SSLC ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ (Thirthahalli) ತುಂಗಾ ನದಿಯ (Tunga River) ರಾಮ ಮಂಟಪದ ಬಳಿ ನಡೆದಿದೆ. ರಫನ್, ಇಯನ್ ಮತ್ತು ಅರ್ಫದ್ ಮೃತ ಬಾಲಕರಾಗಿದ್ದಾರೆ.
ರಂಜಾನ್ ಉಪವಾಸ ಮುಗಿಸಿದ ನಂತರ ತುಂಗಾ ನದಿಯಲ್ಲಿ ಈಡಾಜಲೆಂದು ರಫನ್, ಇಯನ್ ಮತ್ತು ಅರ್ಫದ್ ರಾಮ ಮಂಟಪದ ಬಳಿ ಹೋಗಿದ್ದಾರೆ. ಅದರಂತೆ ಈಜಲು ನೀರಿಗೆ ಇಳಿದಾಗ ಮೂವರು ಕೂಡ ನೀರುಪಾಲಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು, ಮೂವರು ಬಾಲಕರ ಮೃತದೇಹವನ್ನು ಹೊರತೆಗೆದಿದ್ದಾರೆ.
ಇದನ್ನೂ ಓದಿ: ಕೊಡಗು: ನದಿಯಲ್ಲಿ ಈಜಲು ತೆರಳಿದ್ದ ಮೂವರು ನೀರುಪಾಲು; ಓರ್ವನ ಮೃತದೇಹ ಪತ್ತೆ
ಮಾಹಿತಿ ತಿಳಿಯುತ್ತಿದ್ದಂತೆ ತುಂಗಾ ತೀರದಲ್ಲಿ ಜನರು ಜಮಾವಣೆಗೊಂಡಿದ್ದಾರೆ. ಸದ್ಯ, ವಂಶದ ಕುಡಿಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರೋಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ತೀರ್ಥಹಳ್ಳಿ ಪೂಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೇಟ್ ದುರಸ್ತಿ ವೇಳೆ ಕಾರ್ಮಿಕ ಸಾವು
ಗದಗ: ಗೇಟ್ ದುರಸ್ತಿ ಮಾಡುವಾಗ ಕಾರ್ಮಿಕ ಸಾವನ್ನಪ್ಪಿದ ಘಟನೆ ಗದಗ ನಗರದ ಮುಳಗುಂದ ನಾಕ ಬಳಿ ನಡೆದಿದೆ. ಗದಗ ನಗರದ ವಿನಯ್ ಗಿಡ್ಡಮಲ್ಲಣ್ಣವರ್ (43) ಮೃತ ದುರ್ದೈವಿ. ನಾಗಶಾಂತಿ ಕಿಯಾ ಮೋಟಾರ್ಸ್ ಶೋ ರೂಮ್ನ ಮುಖ್ಯ ಗೇಟ್ ದುರಸ್ತಿ ಮಾಡುತ್ತಿದ್ದಾಗ ಕಾರ್ ಶೋರೂಂ ಸೇಲ್ಸ್ ಎಕ್ಸಿಕ್ಯುಟಿವ್ ಮ್ಯಾನೇಜರ್ ವಿನಯ್ ಮೈ ಮೇಲೆ ಗೇಟ್ ಬಿದ್ದಿದೆ.
ಶೋ ರೂಮ್ನ ಇತರೆ ಸಿಬ್ಬಂದಿ ಹುಬ್ಬಳ್ಳಿಯಲ್ಲಿ ಕಂಪನಿ ಮೀಟಿಂಗ್ಗೆ ಹೋಗಿದ್ದರು. ಈ ವೇಳೆ ವಿನಯ್ ಒಬ್ಬರೇ ಕಚೇರಿಯಲ್ಲಿದ್ದರು. ಕೆಲಸ ಮುಗಿಸಿ ಮನೆಗೆ ಹೋಗುವ ವೇಳೆ ವಿನಯ್ ಮೇಲೆ ಗೇಟ್ ಬಿದ್ದಿದೆ ಎಂದು ಶಂಕಿಸಲಾಗಿದೆ. ಗೇಟ್ ರಿಪೇರಿ ಮಾಡುವಾಗ ಮೈ ಮೇಲೆ ಗೇಟ್ ಬಿದ್ದಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.
ಸ್ಥಳಕ್ಕೆ ಆಗಮಿಸಿದ ಗದಗ ಶಹರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಯಾವುದೇ ಮುಂಜಾಗ್ರತಾ ಕ್ರಮ ಇಲ್ಲದೇ ಕಾಮಗಾರಿ ಮಾಡಿದ ಹಿನ್ನೆಲೆ ಈ ದುರ್ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:27 pm, Mon, 1 April 24