ಮಂಗಳೂರು ಪಣಂಬೂರು ಬೀಚ್‌ನಲ್ಲಿ ಮೂವರು ಯುವಕರು ನೀರುಪಾಲು

ಮಂಗಳೂರು ಹೊರವಲಯದ ಪಣಂಬೂರು ಬೀಚ್‌ನಲ್ಲಿ ಮೂವರು ಯುವಕರು ನೀರುಪಾಲಾಗಿರುವಂತಹ ಘಟನೆ ನಡೆದಿದೆ. ಮಿಲನ್(20), ಲಿಖಿತ್(18), ನಾಗರಾಜ್(24) ಮೃತ ಯುವಕರು. ಮೀನುಗಾರರು ಹಾಗೂ ಜೀವರಕ್ಷಕ ದಳದಿಂದ ಶೋಧ ಕಾರ್ಯ ನಡೆದಿದೆ. ಪಣಂಬೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಮಗಳನ್ನ ರಕ್ಷಿಸಲು ಹೋಗಿ ತಂದೆ-ತಾಯಿ ಸೇರಿದಂತೆ ಮೂವರು ನೀರುಪಾಲಾಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.

ಮಂಗಳೂರು ಪಣಂಬೂರು ಬೀಚ್‌ನಲ್ಲಿ ಮೂವರು ಯುವಕರು ನೀರುಪಾಲು
ಮೃತರು
Follow us
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ಗಂಗಾಧರ​ ಬ. ಸಾಬೋಜಿ

Updated on:Mar 03, 2024 | 9:37 PM

ಮಂಗಳೂರು, ಮಾರ್ಚ್​​​ 3: ಮೂವರು ಯುವಕರು ನೀರುಪಾಲಾಗಿರುವಂತಹ ಘಟನೆ ಮಂಗಳೂರು ಹೊರವಲಯದ ಪಣಂಬೂರು ಬೀಚ್‌ (Panambur Beach) ನಲ್ಲಿ ನಡೆದಿದೆ. ಮಿಲನ್(20), ಲಿಖಿತ್(18), ನಾಗರಾಜ್(24) ಮೃತ ಯುವಕರು. ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ ಮಿಲನ್, ಕೈಕಂಬದ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿ ಲಿಖಿತ್, ನಾಗರಾಜ್ ಕಂಪನಿಯೊಂದರಲ್ಲಿ ಸೂಪರ್‌ವೈಸರ್ ಆಗಿದ್ದ. ಮೀನುಗಾರರು ಹಾಗೂ ಜೀವರಕ್ಷಕ ದಳದಿಂದ ಶೋಧ ಕಾರ್ಯ ನಡೆದಿದೆ. ಪಣಂಬೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಗಳನ್ನ ರಕ್ಷಿಸಲು ಹೋಗಿ ತಂದೆ-ತಾಯಿ ಕೂಡ ನೀರುಪಾಲು

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಹೊಸಕೋಟೆ ತಾಲೂಕಿನ ಕರಿಬೀರನಹೊಸಹಳ್ಳಿ ಗ್ರಾಮದ ಮರಿಯಪ್ಪ ಅನ್ನೂ ಈ ರೈತ ಎಂದಿನಂತೆ ಇಂದು ಬೆಳಗ್ಗೆ ಪತ್ನಿ ಮುನಿಯಮ್ಮ ಮತ್ತು ಮಗಳು ಭಾರತಿ ಜೊತೆ ತೋಟದಲ್ಲಿ ಕೃಷಿ ಕೆಲಸ ಮಾಡಲು ತೆರಳಿದ್ದರು. ಜೊತೆಗೆ ತೋಟದಲ್ಲಿ ಕೃಷಿ ಕೆಲಸ ಮಾಡಿಕೊಂಡು ಮಧ್ಯಾಹ್ನ ಶೆಡ್​ನಲ್ಲಿ ಊಟ ಸಹ ಮಾಡಿದ್ದಾರೆ. ಆದರೆ ಊಟ ಮಾಡಿದ ನಂತರ ಮಗಳು ಕೃಷಿ ಹೊಂಡದಲ್ಲಿ ಕೈ ತೊಳೆಯಲು ಹೋಗಿದ್ದು ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ.

ಇದನ್ನೂ ಓದಿ: ರಾಯಚೂರು: ಗ್ರಾಮ ದೇವಿ ಜಾತ್ರೆಗೆ ಬಂದಿದ್ದವನ ಹತ್ಯೆ! ಪಾರ್ಟಿಗೆಂದು ಹೋದವ ಮೂರು ದಿನದ ಬಳಿಕ ಶವವಾಗಿ ಪತ್ತೆ

ಹೀಗಾಗಿ ಮಗಳನ್ನ ರಕ್ಷಣೆ ಮಾಡೋಕ್ಕೆ ಅಂತ ತಂದೆ ಮರಿಯಪ್ಪ ಧಾವಿಸಿದ್ದು ಮಗಳನ್ನ ರಕ್ಷಣೆ ಮಾಡಲು ಹರಸಾಹಸ ಪಟ್ಟಿದ್ದಾರೆ. ಆದರೆ ಈ ವೇಳೆ ಮಗಳಿಗೆ ಕೊಡಲು ಯಾವುದೇ ಹಗ್ಗ ಸಿಗದ ಕಾರಣ ತಂದೆಯೆ ನೀರಿಗಿಳಿದಿದ್ದು ಕೃಷಿ ಹೊಂಡದಲ್ಲಿ ಪ್ಲಾಸ್ಟಿಕ್ ಪೇಪರ್ ಹಾಕಿದ್ದ ಕಾರಣ ಮರಿಯಪ್ಪ ಸಹ ನೀರು ಪಾಲಾಗಿದ್ದಾರೆ.

ಮಗಳು ಮತ್ತು ಪತಿ ನೀರು ಪಾಲಾಗಿದ್ದನ್ನ ಕಂಡು ದಂಡೆಯ ಮೇಲಿದ್ದ ಪತ್ನಿ ಮುನಿಯಮ್ಮ ಸಹ ನೀರಿಗಿಳಿದಿದ್ದು ಈ ವೇಳೆ ಆಕೆಯು ಸಹ ನೀರಿನಲ್ಲಿ ಮುಳುಗಿ ಸಾವನ್ನಪಿದ್ದಾಳೆ. ಜೊತೆಗೆ ಗಂಡ ಮಗಳು ನೀರುಪಾಲಾಗಿದಕ್ಕೆ ರಕ್ಷಣೆಗೆ ಧಾವಿಸುವಂತೆ ಮುನಿಯಮ್ಮ ಕಿರುಚಾಡ್ತಿದ್ದನ್ನ ಕಂಡು ಸ್ಥಳಕ್ಕೆ ಬಂದ ಸ್ಥಳಿಯರು ಮೂವರ ರಕ್ಷಣೆಗೆ ದಾವಿಸಿದ್ದಾರೆ. ಆದರೆ ಅಷ್ಟರಲ್ಲೆ ಮೂವರ ಪ್ರಾಣ ಪಕ್ಷಿ ಹಾರಿಹೋಗಿದೆ.

ಇದನ್ನೂ ಓದಿ: ನಿಶಾನಿ ಬೆಟ್ಟದಲ್ಲಿ ಕಾಡಾನೆ ದಾಳಿಗೆ ವೃದ್ಧ ಸಾವು: ಶವ ಕಂಡು ಸ್ಥಳೀಯರಿಗೆ ಮಾಹಿತಿ ನೀಡಿದ ಚಾರಣಿಗರು

ಮೃತ ಮರಿಯಪ್ಪ ಮಗಳು ಭಾರತಿ ಬುದ್ದಿಮಾಂದ್ಯೆಯಾಗಿದ್ದ ಕಾರಣ ಆಕೆ ಕೃಷಿ ಹೊಂಡದ ಬಳಿ ಕೈತೊಳೆಯಲು ಹೋಗಿದ್ದೆ ದುರಂತಕ್ಕೆ ಕಾರಣ ಅಂತ ಶಂಕಿಸಲಾಗಿದೆ. ಇನ್ನೂ ಮೃತದೇಹಗಳನ್ನ ಹೊರತೆಗೆದ ಸ್ಥಳಿಯರು ಹಾಗೂ ಪೊಲೀಸರು ಶವಾಗಾರಕ್ಕೆ ರವಾನಿಸಿ ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:11 pm, Sun, 3 March 24

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ