ಕಾಂಗ್ರೆಸ್‌ಗೆ ದ್ರೋಹ ಮಾಡುವುದನ್ನ ತಿಳಿಸಿದ್ದು S.M.ಕೃಷ್ಣ -ಎಂ.ಆಂಜಿನಪ್ಪ

ಚಿಕ್ಕಬಳ್ಳಾಪುರ: ಕಾಂಗ್ರೆಸ್‌ಗೆ ದ್ರೋಹ ಮಾಡುವುದನ್ನ ತಿಳಿಸಿದ್ದು ಎಸ್.ಎಂ ಕೃಷ್ಣ. ಅವನೊಬ್ಬ ಲೋಫರ್ ಎಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಂ‌.ಆಂಜಿನಪ್ಪ ಎಸ್.ಎಂ.ಕೃಷ್ಣ ವಿರುದ್ಧ ಕಟುವಾಗಿ ಟೀಕಿಸಿದ್ದಾರೆ. ಚಿಕ್ಕಬಳ್ಳಾಪುರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಆಂಜಿನಪ್ಪ ಎಸ್.ಎಂ ಕೃಷ್ಣರ ಮೇಲೆ ವಾಗ್ದಾಳಿ ನಡೆಸಿದ್ರು. ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಾಗೂ ಹಣದ ಪ್ರಭಾವ ಬಳಸಿಕೊಂಡಿದೆ. ಬೂತ್ ಮಟ್ಟದಿಂದ ಕಾಂಗ್ರೆಸ್ ಪಕ್ಷ ಸಂಘಟಿಸುತ್ತೇವೆ. ಇಂಥ ಪರಿಸ್ಥಿತಿಯಲ್ಲಿ 50ಸಾವಿರ ಮತಗಳು ಬಂದಿರುವುದು ಕಾಂಗ್ರೆಸ್​ನ ಹೆಮ್ಮೆ.ನಾವು ಉಪಚುನಾವಣೆಗೆ ಸಕಲ ರೀತಿಯಲ್ಲಿ ಸಜ್ಜಾಗಿರಲಿಲ್ಲ. […]

ಕಾಂಗ್ರೆಸ್‌ಗೆ ದ್ರೋಹ ಮಾಡುವುದನ್ನ ತಿಳಿಸಿದ್ದು S.M.ಕೃಷ್ಣ -ಎಂ.ಆಂಜಿನಪ್ಪ

Updated on: Dec 11, 2019 | 2:55 PM

ಚಿಕ್ಕಬಳ್ಳಾಪುರ: ಕಾಂಗ್ರೆಸ್‌ಗೆ ದ್ರೋಹ ಮಾಡುವುದನ್ನ ತಿಳಿಸಿದ್ದು ಎಸ್.ಎಂ ಕೃಷ್ಣ. ಅವನೊಬ್ಬ ಲೋಫರ್ ಎಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಂ‌.ಆಂಜಿನಪ್ಪ ಎಸ್.ಎಂ.ಕೃಷ್ಣ ವಿರುದ್ಧ ಕಟುವಾಗಿ ಟೀಕಿಸಿದ್ದಾರೆ.

ಚಿಕ್ಕಬಳ್ಳಾಪುರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಆಂಜಿನಪ್ಪ ಎಸ್.ಎಂ ಕೃಷ್ಣರ ಮೇಲೆ ವಾಗ್ದಾಳಿ ನಡೆಸಿದ್ರು. ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಾಗೂ ಹಣದ ಪ್ರಭಾವ ಬಳಸಿಕೊಂಡಿದೆ. ಬೂತ್ ಮಟ್ಟದಿಂದ ಕಾಂಗ್ರೆಸ್ ಪಕ್ಷ ಸಂಘಟಿಸುತ್ತೇವೆ.

ಇಂಥ ಪರಿಸ್ಥಿತಿಯಲ್ಲಿ 50ಸಾವಿರ ಮತಗಳು ಬಂದಿರುವುದು ಕಾಂಗ್ರೆಸ್​ನ ಹೆಮ್ಮೆ.ನಾವು ಉಪಚುನಾವಣೆಗೆ ಸಕಲ ರೀತಿಯಲ್ಲಿ ಸಜ್ಜಾಗಿರಲಿಲ್ಲ. ಹಣ ವಿತರಿಸದೆ 50 ಸಾವಿರ ಮತಗಳು ಬಂದಿರುವುದು ಸಾಧನೆ. ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿದವರಿಗೆ ಕೃತಜ್ಞತೆಗಳು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Published On - 1:32 pm, Wed, 11 December 19