ತಮಿಳುನಾಡಿನಲ್ಲೂ ಕನ್ನಡಿಗರ ವಾಹನದ ಮೇಲೆ ಕಿರಿಕ್: ಅಯ್ಯಪ್ಪ ಸ್ವಾಮಿ ಮಾಲಾಧಾರಿ ಭಕ್ತರಿದ್ದ ವಾಹನದ ಮೇಲೆ ಕಲ್ಲು ತೂರಾಟ

| Updated By: ಆಯೇಷಾ ಬಾನು

Updated on: Dec 08, 2022 | 9:21 AM

ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಶಬರಿಮಲೆ‌ಪ್ರವಾಸಕ್ಕೆ ತೆರಳಿ ವಾಪಾಸ್ಸಾಗುತ್ತಿದ್ದ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಭಕ್ತರಿದ್ದ ವಾಹನದ ಮೇಲೆ ತಮಿಳುನಾಡಿನ ಮಧುರೈನಲ್ಲಿ ಕಲ್ಲು ತೂರಾಟ ನಡೆದಿದೆ.

ತಮಿಳುನಾಡಿನಲ್ಲೂ ಕನ್ನಡಿಗರ ವಾಹನದ ಮೇಲೆ ಕಿರಿಕ್: ಅಯ್ಯಪ್ಪ ಸ್ವಾಮಿ ಮಾಲಾಧಾರಿ ಭಕ್ತರಿದ್ದ ವಾಹನದ ಮೇಲೆ ಕಲ್ಲು ತೂರಾಟ
ತಮಿಳುನಾಡಿನಲ್ಲೂ ಕನ್ನಡಿಗರ ವಾಹನದ ಮೇಲೆ ಕಿರಿಕ್
Follow us on

ಚಿಕ್ಕಬಳ್ಳಾಪುರ: ಬೆಳಗಾವಿ ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಪುಂಡರು ಕಾಲು ಕೆರೆದು ಜಗಳಕ್ಕೆ ಬರ್ತಿದ್ದಾರೆ. ನಿನ್ನೆ ಶಿವಸೇನೆ ಬಣ, ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಸೇರಿದಂತೆ ವಿವಿಧ ಮರಾಠಿ ಪರ ಸಂಘಟನೆಗಳು ಕರ್ನಾಟಕದ ಸರ್ಕಾರಿ ಬಸ್‌ಗಳನ್ನೇ ಟಾರ್ಗೆಟ್ ಮಾಡಿ ಮಹಾರಾಷ್ಟ್ರದ ಬಾರಾಮತಿ ಬಸ್‌ ನಿಲ್ದಾಣ, ಸಿಂಧದುರ್ಗ ಜಿಲ್ಲೆಯಲ್ಲಿ ಕರ್ನಾಟಕ ಸಾರಿಗೆ ಬಸ್‌ಗೆ ಮಸಿ ಬಳಿದಿದ್ದರು. ಪುಣೆಯ ಹೊರವಲಯ ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರ್ತಿದ್ದ ಕೆಎಸ್ಆರ್ಟಿಸಿ ಬಸ್ ತಡೆದು ಜೈ ಮಹಾರಾಷ್ಟ್ರ ಅಂತಾ ಗೀಚಿದ್ದರು. ಆದ್ರೆ ಈಗ ಮಹಾರಾಷ್ಟ್ರ ಪುಂಡರ ಅಟ್ಟಹಾಸ ಮುಂದುವರೆದಿದೆ. ಮಹಾರಾಷ್ಟ್ರ ಆಯ್ತು ಈಗ ತಮಿಳುನಾಡಿನಲ್ಲೂ ಕನ್ನಡಿಗರ ವಾಹನದ ಮೇಲೆ ಕಿರಿಕ್ ಮಾಡುತ್ತಿದ್ದಾರೆ.

ಕಿಡಿಗೇಡಿಗಳು ಕರ್ನಾಟಕದ ಟಿಟಿ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಶಬರಿಮಲೆ‌ಪ್ರವಾಸಕ್ಕೆ ತೆರಳಿ ವಾಪಾಸ್ಸಾಗುತ್ತಿದ್ದ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಭಕ್ತರಿದ್ದ ವಾಹನದ ಮೇಲೆ ತಮಿಳುನಾಡಿನ ಮಧುರೈನಲ್ಲಿ ಕಲ್ಲು ತೂರಾಟ ನಡೆದಿದೆ. ಅಯ್ಯಪ್ಪಸ್ಚಾಮಿ ದರ್ಶನ ಮುಗಿಸಿ ಮಧುರೆ ದೇವಾಲಯಕ್ಕೆ ಆಗಮಿಸಿದ್ದ ಕನ್ನಡಿಗರು ಟಿಟಿ ವಾಹನದ ಮೇಲೆ ಕನ್ನಡ ಧ್ವಜ ಕಟ್ಟಿದ್ದಕ್ಕೆ ಕಿಡಿಗೇಡಿಗಳು ಕಿರಿಕ್ ಮಾಡಿದ್ದಾರೆ. ಕನ್ನಡ ಧ್ವಜ ಕಟ್ಟಿರೋದಕ್ಕೆ ಉದ್ದೇಶಪೂರ್ವಕವಾಗಿ ಕಲ್ಲು ತೂರಾಟ ನಡೆಸಿದ್ದಾರೆ. ನಮಗೆ ರಕ್ಷಣೆ ಕೊಡಿ ಎಂದು ಕನ್ನಡಿಗರು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ಫಲ ನೀಡದ ವಿಶೇಷ ಕಾರ್ಯಾಚರಣೆ; ಚಿರತೆ ಪತ್ತೆ ಕಾರ್ಯತಂತ್ರ ಬದಲಾಯಿಸಿದ ಅರಣ್ಯ ಇಲಾಖೆ

ಶ್ರೀನಿವಾಸಪುರ ಪಟ್ಡಣ ಬಂದ್

ವಿಮಾ ಕಂಪನಿಗಳಿಂದ ತೋಟಗಾರಿಕೆ ಬೆಳೆಗಳಿಗೆ ವಿಮೆ ಹಣ ನೀಡದೆ ಅನ್ಯಾಯ ಮಾಡಲಾಗುತ್ತಿದೆ. ಹೀಗಾಗಿ ಮಾವು ಬೆಳೆಗಾರರ ಸಂಯುಕ್ತ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಡಣ ಬಂದ್​ಗೆ ಕರೆ ನೀಡಲಾಗಿದೆ. ಬಂದ್ ಹಿನ್ನೆಲೆ ಬೆಳಂಬೆಳಗ್ಗೆ ಫೀಲ್ಡ್ ಗಿಳಿದ ಮಾವು ಬೆಳೆಗಾರರು ಬಲವಂತವಾಗಿ ಬಂದ್ ಗೆ ಬೆಂಬಲ ಸೂಚಿಸುವಂತೆ ಒತ್ತಾಯ ಮಾಡಿದ್ದಾರೆ. ಶ್ರೀನಿವಾಸಪುರ ಪಟ್ಟಣದಲ್ಲಿ ಅಂಗಡಿ ಮುಂಗಟ್ಟು ಮುಚ್ಚಿಸಿ ಬಂದ್​ಗೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಬಂದ್ ಹಿನ್ನೆಲೆ ಶ್ರೀನಿವಾಸಪುರ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:43 am, Thu, 8 December 22