ಚಿಕ್ಕಬಳ್ಳಾಪುರ, (ಡಿಸೆಂಬರ್ 04): ಟ್ರಕ್ಕಿಂಗ್ಗೆ ಹೋಗಿ ಜಿಲ್ಲೆ ದಂಡಿಗಾನಹಳ್ಳಿ ಜಲಾಶಯದ ಬಳಿಯ ಅರಣ್ಯದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು(Students) ರಕ್ಷಣೆ ಮಾಡಲಾಗಿದೆ. ನಿನ್ನೆ (ಡಿಸೆಂಬರ್ 03) ದಂಡಿಗಾನಹಳ್ಳಿ ಜಲಾಶಯಕ್ಕೆ ತೆರಳಿದ್ದ ಬೆಂಗಳೂರಿನ (Bengaluru) ಜೆ.ಎನ್.ಸಿ.ಆರ್ ಕಾಲೇಜಿನಕೃಷ್ಣತಿವಾರಿ, ಶಂಭಂ ಎನ್ನುವ ವಿದ್ಯಾರ್ಥಿಗಳು ನೆಟ್ವರ್ಕ್ ಸಿಗದೇ, ದಾರಿ ಕಾಣದೇ ರಾತ್ರಿ ಇಡೀ ಅರಣ್ಯದಲ್ಲಿ ಕಳೆದಿದ್ದು, ಕೊನೆಗೆ ಇಂದು(ಡಿಸೆಂಬರ್ 04) ಬೆಳಗಿನ ಜಾವ 4 ಗಂಟೆಗೆ ವಿದ್ಯಾರ್ಥಿಗಳನ್ನು ಅಗ್ನಿ ಶಾಮಕ ದಳ ಹಾಗು ಪೊಲೀಸರು ಸೇರಿಕೊಮಡು ರಕ್ಷಣೆ ಮಾಡಿದ್ದಾರೆ.
ದಂಡಿಗಾನಹಳ್ಳಿ ಜಲಾಶಯಕ್ಕೆ ತೆರಳಿದ್ದ ಕೃಷ್ಣತಿವಾರಿ, ಶಂಭಂ ಅಲ್ಲಿಂದ ಅರಣ್ಯದಲ್ಲಿ ಅಕ್ರಮವಾಗಿ ಟ್ರಕ್ಕಿಂಗ್ಗೆ ತೆರಳಿದ್ದರು. ಬಳಿಕ ದಾರಿ ಗೊತ್ತಾಗದೇ ರಾತ್ರಿಯಿಡೀ ಕಾಡಿನ ಮಧ್ಯೆ ಪರದಾಡಿದ್ದು, ಅಗ್ನಿಶಾಮಕದಳ, ಪೊಲೀಸರು, ಸ್ಥಳೀಯರು ರಾತ್ರಿಯಿಡಿ ಹುಡುಕಾಡಿದ್ದಾರೆ. ಸದ್ಯ ಬೆಳಗಿನ ಜಾವ 4 ಗಂಟೆ ವೇಳೆಗೆ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ.
ಈ ಹಿಂದೆಯೂ ಸಹ ಇದೇ ರೀತಿಯ ಘಟನೆಗಳು ನಡೆದಿವೆ. ಟ್ರಕ್ಕಿಂಗ್ ಹೋದ ಯುವಕರು ದಾರಿ ತಪ್ಪಿ ಪರದಾಡಿದ್ದು, ಬಳಿಕ ಪೊಲೀಸರು ಪತ್ತೆ ಮಾಡಿ ರಕ್ಷಿಸಿದ ಉದಾಹಣರಣೆಗಳು ಇವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ