ಪ್ರಶಂಸನೀಯ! ಚಿಕ್ಕಬಳ್ಳಾಪುರದಲ್ಲಿ ಗಂಧದಗುಡಿ ಘಮಲು -ಅಪ್ಪು ಅಭಿಮಾನಿಗಳಿಂದ ಗಂಧದ ಸಸಿ ವಿತರಣೆ

| Updated By: ಸಾಧು ಶ್ರೀನಾಥ್​

Updated on: Oct 28, 2022 | 5:49 PM

Sandalwood Saplings: ಆಗ ದೇಹದಾನ, ನೇತ್ರದಾನ, ದಾನಗಳಿಗೆ ಮೇಲುಗೈ! ಈಗ ಪರಿಸರ ಕಾಳಜಿಗಾಗಿ ಗಂಧದ ಪರಿಮಳ ಹರಡುತ್ತಿರುವ ಅಪ್ಪು ಅಭಿಮಾನಿಗಳು! ಹುಶಃ ರಾಜ್ಯದಲ್ಲಿ ಇಂತಹ ಪ್ರಯತ್ನ ಇದೊಂದೇ ಆಗಿದೆ.

ಪ್ರಶಂಸನೀಯ! ಚಿಕ್ಕಬಳ್ಳಾಪುರದಲ್ಲಿ ಗಂಧದಗುಡಿ ಘಮಲು -ಅಪ್ಪು ಅಭಿಮಾನಿಗಳಿಂದ ಗಂಧದ ಸಸಿ ವಿತರಣೆ
ಆಗ ದೇಹದಾನ, ನೇತ್ರದಾನ, ದಾನಗಳಿಗೆ ಮೇಲುಗೈ! ಈಗ ಪರಿಸರ ಕಾಳಜಿಗಾಗಿ ಗಂಧದ ಪರಿಮಳ ಹರಡುತ್ತಿರುವ ಅಪ್ಪು ಅಭಿಮಾನಿಗಳು!
Follow us on

ಪವರ್‌ಸ್ಟಾರ್ ಪುನೀತ್‌ ರಾಜಕುಮಾರ್ (Puneeth Rajkumar) ನಟಿಸಿರುವ ಕೊನೆಯ ಸಿನಿಮಾ ಗಂಧದಗುಡಿ (Gandhada Gudi) ಸಾಕ್ಷ್ಯಚಿತ್ರ ರೂಪದಲ್ಲಿ ಇಂದು ತೆರೆಗೆ ಅಪ್ಪಳಿಸುತ್ತಿದ್ದಂತೆ ಅಪ್ಪು ಅಭಿಮಾನಿಗಳ ಸಂತಸ, ಸಂಭ್ರಮ ಮುಗಿಲುಮುಟ್ಟಿದೆ. ಮತ್ತೊಂದಡೆ ಗಂಧದಗುಡಿ ಚಲನಚಿತ್ರ ಪ್ರೇರಣೆಯಿಂದ ಚಲನಚಿತ್ರ ವೀಕ್ಷಿಸಲು ಬಂದವರಿಗೆ ಅಪ್ಪು ಅಭಿಮಾನಿಗಳು ಉಚಿತವಾಗಿ ಗಂಧದ ಸಸಿಗಳನ್ನು (Sandalwood Saplings) ವಿತರಣೆ ಮಾಡಿ ಪರಿಸರ ಕಾಳಜಿ ಮೆರೆದಿದ್ದಾರೆ. ಬಹುಶಃ ರಾಜ್ಯದಲ್ಲಿ ಇಂತಹ ಪ್ರಯತ್ನ ಇದೊಂದೇ ಆಗಿದೆ.

ಗಂಧದಗುಡಿ ಸಾಕ್ಷ್ಯಚಿತ್ರದ ಮೂಲಕ ನಾಡಿನ ನೆಲ, ಜಲ, ಅರಣ್ಯ ಸಂಪತ್ತು ಪ್ರವಾಸಿ ತಾಣಗಳನ್ನು ಕಣ್ಮುಂದೆ ತಂದು ನಿಲ್ಲಿಸಿರುವ ಪವರ್‌ಸ್ಟಾರ್ ಪುನೀತ್‌ ರಾಜಕುಮಾರ್, ಅಭಿಮಾನಿಗಳ ಮನದಲ್ಲಿ ಪರಿಸರ ಕಾಳಜಿ ಬಿತ್ತಿದ್ದಾರೆ. ದಿವಂಗತ ಪವರ್‌ಸ್ಟಾರ್ ಪುನೀತ್‌ ರಾಜಕುಮಾರ್ ನಟಿಸಿರುವ ಗಂಧದಗುಡಿ ಕೊನೆಯ ಚಿತ್ರವನ್ನು ಮುಗಿಬಿದ್ದು ಅವರ ಅಭಿಮಾನಿಗಳು ವೀಕ್ಷಿಸಿದರು. ಚಿಕ್ಕಬಳ್ಳಾಪುರ ನಗರದ ಬಾಲಾಜಿ ಚಲನಚಿತ್ರ ಮಂದಿರ, ಶಿಡ್ಲಘಟ್ಟದ ವೆಂಕಟೇಶ್ವರ ಚಲನಚಿತ್ರ ಮಂದಿರದಲ್ಲಿ ಫಸ್ಟ್ ಶೋ ಪ್ರದರ್ಶನ ಕಂಡಿತು. ಅಪ್ಪು ಅಭಿಮಾನಿಗಳಂತೂ ಅಪ್ಪು ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ, ಈಡುಗಾಯಿ ಹೊಡೆದು ಚಿತ್ರ ಶತದಿನೋತ್ಸವ ಆಚರಿಸಲೆಂದು ಶುಭ ಕೋರಿದರು.

ಆಗ ದೇಹದಾನ, ನೇತ್ರದಾನ, ದಾನಗಳಿಗೆ ಮೇಲುಗೈ! ಈಗ ಪರಿಸರ ಕಾಳಜಿಗಾಗಿ ಗಂಧದ ಪರಿಮಳ ಹರಡುತ್ತಿರುವ ಅಪ್ಪು ಅಭಿಮಾನಿಗಳು!

ಇನ್ನು ಚಿಕ್ಕಬಳ್ಳಾಪುರ ನಗರದ ಬಾಲಾಜಿ ಚಲನಚಿತ್ರ ಮಂದಿರದಲ್ಲಿ ಪರದೆ ಮೇಲೆ ಶೋ ಆರಂಭವಾಗುತ್ತಿದ್ದಂತೆ ಅಪ್ಪು ಅಭಿಮಾನಿಗಳು ಪರದೆಗೆ ಆರತಿ ಎತ್ತಿ, ಕುಂಬಳ ಕಾಯಿಯಿಂದ ದೃಷ್ಟಿ ತೆಗೆದು ಅಪ್ಪು ಚಿತ್ರಕ್ಕೆ ಹೂಮಳೆಗೆರೆದು ಪ್ರದರ್ಶನಕ್ಕೆ ಸ್ವಾಗತ ಕೋರಿದರು. ಸಾಕ್ಷ್ಯ ಚಿತ್ರದಲ್ಲಿ ಅಪ್ಪು ಕಾಡಿನಲ್ಲಿ ನಡೆದಾಡುವ ದೃಶ್ಯಗಳನ್ನು ಕಂಡು ಪುನೀತರಾದರು. ಚಿತ್ರದಲ್ಲಿ ಪರಿಸರ ಪ್ರೇಮ ತೊರೆದ ಕಾರಣ ಇದರಿಂದ ಪ್ರೇರಣೆಗೊಂಡ ಅವರ ಅಭಿಮಾನಿಗಳು ಚಲನಚಿತ್ರ ವೀಕ್ಷಣೆ ಮಾಡಲು ಬಂದ ಪ್ರೇಕ್ಷಕರಿಗೆ ಪ್ರತಿಯೊಬ್ಬರಿಗೂ ಗಂಧದ ಸಸಿಗಳನ್ನು ವಿತರಿಸಿ, ಪರಿಸರ ಪ್ರೇಮ ಮೆರೆದರು. ಇನ್ನು ಕೆಲವರು ಅಪ್ಪು ಸ್ಮರಣೆಯಲ್ಲಿ ಶ್ರೀಗಂಧದ ಸಸಿಗಳನ್ನು ಹೊತ್ತು ನೃತ್ಯ ಮಾಡಿದರು. (ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ )

ಒಟ್ನಲ್ಲಿ ನಿಜ ಜೀವನದಲ್ಲಿ ಸಮಾಜ ಪರಿಸರ ಸೇವೆ ದೀನ ದಲಿತ ಸೇವೆ ಮಾಡುವುದರ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದ ದಿವಂಗತ ನಟ ಪುನೀತ್ ರಾಜಕುಮಾರ್, ತಮ್ಮ ಕೊನೆ ಚಲನಚಿತ್ರ ಗಂಧದ ಗುಡಿಯಲ್ಲೂ ಪರಿಸರ ಪ್ರೇಮ ಮೆರೆದ ಕಾರಣ ಅವರ ಹಾದಿಯಲ್ಲೆ ಅವರ ಅಭಿಮಾನಿಗಳು ವಿವಿಧೆಡೆ ವಿವಿಧ ಸಾಮಾಜಿಕ ಕೈಕಾರ್ಯಗಳನ್ನು ಕೈಗೊಂಡಿರುವುದು ಪ್ರಶಂಸನೀಯ.

Published On - 5:47 pm, Fri, 28 October 22