ಸ್ಟೂಡೆಂಟ್ ಜೊತೆ ಶಿಕ್ಷಕಿ ರೊಮ್ಯಾಂಟಿಕ್‌ ಫೋಟೋ ಶೂಟ್‌, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್

ಹೈ ಸ್ಕೂಲ್‌ ವಿದ್ಯಾರ್ಥಿ ಜೊತೆ ಮುಖ್ಯ ಶಿಕ್ಷಕಿ ಪುಷ್ಪಲತಾ ಎಂಬುವವರು ಕೆನ್ನೆಗೆ ಮುತ್ತು ಕೊಡುವಂತೆ, ಸೀರೆ ಸೆರಗು ಎಳೆಯುವಂತೆ ರೊಮ್ಯಾಂಟಿಕ್‌ ಆಗಿ ಫೋಟೊ ಶೂಟ್‌ ಮಾಡಿಸಿದ್ದಾರೆ. ವಿದ್ಯಾರ್ಥಿ ಕೂಡ ಶಿಕ್ಷಕಿಯನ್ನು ಮುದ್ದಾಡಿದ್ದು ಈ ಎಲ್ಲ ಫೋಟೊಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಸ್ಟೂಡೆಂಟ್ ಜೊತೆ ಶಿಕ್ಷಕಿ ರೊಮ್ಯಾಂಟಿಕ್‌ ಫೋಟೋ ಶೂಟ್‌, ಸಾಮಾಜಿಕ ಜಾಲತಾಣದಲ್ಲಿ  ಫೋಟೋಗಳು ವೈರಲ್
ಸ್ಟೂಡೆಂಟ್ ಜೊತೆ ಶಿಕ್ಷಕಿ ರೊಮ್ಯಾಂಟಿಕ್‌ ಫೋಟ್‌ ಶೂಟ್‌
Edited By:

Updated on: Jan 06, 2024 | 5:34 PM

ಚಿಕ್ಕಬಳ್ಳಾಪುರ, ಡಿ.28: ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವೇಳೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ಹದಿಹರೆಯದ ವಿದ್ಯಾರ್ಥಿಯೊಂದಿಗೆ ರೊಮ್ಯಾಂಟಿಕ್‌ ಆಗಿ ಫೋಟೊ ಶೂಟ್‌ ಮಾಡಿಸಿದ ಘಟನೆ ನಡೆದಿದೆ (Teacher Romantic Photoshoot with Student). ಸದ್ಯ ಸ್ಟೂಡೆಂಟ್ ಟೀಚರ್ ರೊಮ್ಯಾಂಟಿಕ್ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಇನ್ನು ಮುಖ್ಯ ಶಿಕ್ಷಕಿಯ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಚಿಕ್ಕಬಳ್ಳಾಪುರ‌ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಿಂದ ಮಕ್ಕಳನ್ನು ಪ್ರವಾಕ್ಕೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಹೈ ಸ್ಕೂಲ್‌ ವಿದ್ಯಾರ್ಥಿ ಜೊತೆ ಮುಖ್ಯ ಶಿಕ್ಷಕಿ ಪುಷ್ಪಲತಾ ಎಂಬುವವರು ಕೆನ್ನೆಗೆ ಮುತ್ತು ಕೊಡುವಂತೆ, ಸೀರೆ ಸೆರಗು ಎಳೆಯುವಂತೆ ರೊಮ್ಯಾಂಟಿಕ್‌ ಆಗಿ ಫೋಟೊ ಶೂಟ್‌ ಮಾಡಿಸಿದ್ದಾರೆ. ವಿದ್ಯಾರ್ಥಿ ಕೂಡ ಶಿಕ್ಷಕಿಯನ್ನು ಮುದ್ದಾಡಿದ್ದು ಈ ಎಲ್ಲ ಫೋಟೊಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಇನ್ನು ವಿದ್ಯಾರ್ಥಿಯೊಂದಿಗೆ ಹೀಗೆ ಫೋಟೋ ತೆಗೆಸಿಕೊಂಡ ಶಿಕ್ಷಕಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಶಿಕ್ಷಕಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪೋಷಕರು ಒತ್ತಾಯಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೋಷಕರು ಶಾಲೆಗೆ ತೆರಳಿ ಶಿಕ್ಷಕಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಘಟನೆಯ ಬಗ್ಗೆ ಮಕ್ಕಳ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತಂದಿದ್ದು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:35 pm, Thu, 28 December 23