ಚಿಕ್ಕಬಳ್ಳಾಪುರ, ನ.19: ಪ್ರತಿದಿನ ಪ್ರೇಮಿಗಳು, ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಚಿಕ್ಕಬಳ್ಳಾಪುರ(Chikkaballapur) ತಾಲೂಕಿನ ವಿಶ್ವವಿಖ್ಯಾತ ಪ್ರವಾಸಿ ತಾಣ ನಂದಿಗಿರಿಧಾಮ, ಇಂದು ಪ್ರೇಮಿಗಳು, ಪ್ರವಾಸಿಗರು (Tourists), ಪರಿಸರ ಪ್ರೇಮಿಗಳು ಇಲ್ಲದೆ ಬೀಕೊ ಎನ್ನುತ್ತಿದೆ. ಇಂದು ಭಾನುವಾರದ ರಜೆ ಇದ್ದರೂ ಪ್ರವಾಸಿಗರು ಗಿರಿಧಾಮದತ್ತ ಸುಳಿದಿಲ್ಲ. ಅದಕ್ಕೆ ಕಾರಣ ಇಂಡಿಯಾ-ಆಸ್ಟೇಲಿಯಾ ಹೈವೊಲ್ಟೇಜ್ ಫೈನಲ್ ಕ್ರಿಕೆಟ್ ಪಂದ್ಯ. ಜನರು ಪ್ರವಾಸ, ಪಿಕ್ನಿಕ್ಗೆ ಇಂದು ಗುಡ್ ಬಾಯ್ ಹೇಳಿ, ಮನೆಗಳ ಟಿವಿಗಳ ಮುಂದೆ ಕುಳಿತು ಕ್ರಿಕೆಟ್ ವಿಕ್ಷಣೆ ಮಾಡುತ್ತಿದ್ದಾರೆ.
ಲೀಗ್ ಪಂದ್ಯಗಳಲ್ಲಿ ಯಾವುದೇ ಸೋಲನ್ನು ಕಾಣದೇ ಭಾರತ ತಂಡ ಫೈನಲ್ ತಲುಪಿದೆ. ಇಂದು ನಡೆಯುವ ಪಂದ್ಯದಲ್ಲಿ ಗೆಲುವು ಸಾಧಿಸುವ ಎಲ್ಲರ ಫೇವರೇಟ್ ತಂಡವಾಗಿರುವ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಮ್ಯಾಚ್ ನೋಡಲು ಎಲ್ಲರೂ ಮನೆಯಲ್ಲಿ ಇದ್ದಾರೆ. ಹೌದು, ಫೈನಲ್ ಪಂದ್ಯವನ್ನು ಕಣ್ತುಂಬಿಕೊಳ್ಳಿಸಲು ಪ್ರವಾಸಿಗರು ಮನೆಯಲ್ಲಿ ಇದ್ದು, ಇಂಡಿಯಾ ಗೆಲ್ಲಲು ಪ್ರಾರ್ಥಿಸುತ್ತಿದ್ದಾರೆ.
ಇದನ್ನೂ ಓದಿ:ಪ್ರೇಮಿಗಳ ದಿನದಂದು ನಂದಿಗಿರಿಧಾಮದ ಕುಳಿರ್ಗಾಳಿಯಲ್ಲಿ ಪ್ರೇಮಿಗಳ ಪ್ರೇಮ ನಿವೇದನೆ, ಪಿಸುಮಾತು ಮತ್ತು ಬಿಸಿಯಪ್ಪುಗೆ!
ವೀಕೆಂಡ್ ಬಂದರೆ ಸಾಕು ನಂದಿ ಗಿರಿಧಾಮದಲ್ಲಿ ಜನರು ಹಾಗೂ ವಾಹನಗಳ ಜನಸಂದಣಿ ಕಾಣುತ್ತಿತ್ತು. ಆದ್ರೆ, ಇಂದು(ನ.19) ವಾಹನಗಳು, ಜನ ಸಂದಣಿ ಕಾಣಲಿಲ್ಲ, ಅಲ್ಲೊಬ್ಬರು ಇಲ್ಲೊಬ್ಬರು ಪ್ರವಾಸಿಗರು ಆಗಮಿಸಿ ಪ್ರಕೃತಿ ಸೊಬಗು ಸವಿಯುತ್ತಿದ್ದಾರೆ. ಪ್ರತಿದಿನ ಪ್ರತಿಕ್ಷಣ ಜನರು ಹಾಗೂ ವಾಹನಗಳಿಂದ ಗಿಜಿಗಿಡುತ್ತಿದ್ದ ನಂದಿಗಿರಿಧಾಮ, ಇಂದು ಪ್ರವಾಸಿಗರು ಹಾಗೂ ವಾಹನಗಳು ಇಲ್ಲದೆ ನಿಶಬ್ದವಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ