ಚಿಕ್ಕಮಗಳೂರು: ದಾಖಲೆಯಿಲ್ಲದೆ ಸಾಗಿಸುತ್ತಿದ್ದ 6.44 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಸೀಜ್

|

Updated on: Mar 31, 2023 | 11:11 PM

ದಾಖಲೆಯಿಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 6.44 ಕೋಟಿ ಮೌಲ್ಯದ 17 ಕೆಜಿ ಚಿನ್ನ ಮತ್ತು ಬೆಳ್ಳಿಯನ್ನು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿ ಚೆಕ್​ಪೋಸ್ಟ್​​ ಬಳಿ ಪೊಲೀಸರು ಸೀಜ್ ಮಾಡಿದ್ದಾರೆ​​​.

ಚಿಕ್ಕಮಗಳೂರು: ದಾಖಲೆಯಿಲ್ಲದೆ ಸಾಗಿಸುತ್ತಿದ್ದ 6.44 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಸೀಜ್
ಚಿನ್ನ, ಬೆಳ್ಳಿ ಸಾಗಿಸುತ್ತಿದ್ದ ವಾಹನ (ಎಡಚಿತ್ರ) ಕಾಂಗ್ರೆಸ್​ ಶಾಲು (ಬಲಚಿತ್ರ)
Follow us on

ಚಿಕ್ಕಮಗಳೂರು: ದಾಖಲೆಯಿಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 6.44 ಕೋಟಿ ಮೌಲ್ಯದ 17 ಕೆಜಿ ಚಿನ್ನ ಮತ್ತು ಬೆಳ್ಳಿಯನ್ನು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿ ಚೆಕ್​ಪೋಸ್ಟ್​​ ಬಳಿ ಪೊಲೀಸರು ಸೀಜ್ ಮಾಡಿದ್ದಾರೆ​​​. ಎಂ.ಸಿ.ಹಳ್ಳಿ ಚೆಕ್​ಪೋಸ್ಟ್​ನಲ್ಲಿ ವಾಹನ ತಪಾಸಣೆ ವೇಳೆ ಚಿನ್ನ ಮತ್ತು ಬೆಳ್ಳಿ ಪತ್ತೆಯಾಗಿದೆ.

ಪ್ರತ್ಯೇಕ ಪ್ರಕರಣದಲ್ಲಿ ಮೂರು ಲಕ್ಷ ಹಣ ಪತ್ತೆ; ಕಾಂಗ್ರೆಸ್ ಪಕ್ಷದ ಶಾಲು ಜಪ್ತಿ

ಗದಗ : ಗದಗ ಜಿಲ್ಲೆಯಲ್ಲಿ ಮತ್ತೆ ಕಂತೆ ಕಂತೆ ಹಣ ಪತ್ತೆಯಾಗಿದೆ.  ಜಿಲ್ಲೆಯ ರೋಣ ಹಾಗೂ ಗದಗ ತಾಲೂಕಿನ ಚೆಕ್ ಪೋಸ್ಟ್ ನಲ್ಲಿ ಯಾವುದೇ ದಾಖಲೆ ಇಲ್ಲದೆ ಹಣ ಸಾಗಾಟ ಮಾಡುತ್ತಿದ್ದಾಗ ಸೀಜ್ ಮಾಡಲಾಗಿದ್ದು, ಕಾಂಗ್ರೆಸ್ ಪಕ್ಷದ ಶಾಲು ಕೂಡ ಜಪ್ತಿ ಮಾಡಲಾಗಿದೆ. ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಚೆಕ್ ಪೋಸ್ಟ್ ನಲ್ಲಿ ಒಂದು ಲಕ್ಷ ರೂ. ಪತ್ತೆಯಾದರೆ, ಹುಬ್ಬಳ್ಳಿ ರಸ್ತೆಯ ದುಂದೂರ ಚೆಕ್ ಪೋಸ್ಟ್ ನಲ್ಲಿ ಎರಡು ಲಕ್ಷ ರೂ. ಹಣ ಸೀಜ್ ಮಾಡಲಾಗಿದೆ.

ಮುಂಬೈ ನಿಂದ ತೋರಣಗಲ್ ಕಡೆ ಹೊರಟಿದ್ದ ವಾಹನದಲ್ಲಿ ಯಾವುದೇ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ ವಾಹನದಲ್ಲಿ 2 ಲಕ್ಷ ರೂ. ಪತ್ತೆಯಾಗಿದೆ. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇನ್ನೂ ಬದಾಮಿಯಿಂದ ರೋಣ ಕಡೆ ಬರುತ್ತಿದ್ದ ಕಾರನ್ನು ತಪಾಸಣೆ ಮಾಡಿದಾಗ  ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಚೆಕ್ ಪೋಸ್ಟ್ ನಲ್ಲಿ 1 ಲಕ್ಷ ರೂ. ಪತ್ತೆಯಾಗಿದೆ. ಹಣ ಸಾಗಿಸುತ್ತಿದ್ದ ಐದು ಜನರನ್ನು ವಿಚಾರಣೆ ನಡೆಸಿದಾಗ ಹಣದ ಮೂಲದ ಬಗ್ಗೆ ಸಮರ್ಪಕವಾಗಿ ಉತ್ತರ ನೀಡಲಿಲ್ಲ ಎನ್ನಲಾಗಿದೆ.

ಮತ್ತೊಂದು ಪ್ರಕರಣದಲ್ಲಿ 17 ಕಾಂಗ್ರೆಸ್ ಪಕ್ಷದ ಧ್ವಜಗಳನ್ನು ಜಪ್ತಿ ಮಾಡಲಾಗಿದೆ. ಕಾರಿನಲ್ಲಿ ಬದಾಮಿಯಿಂದ ರೋಣ ಕಡೆ ಬರುತ್ತಿದ್ದ ಕಾರನ್ನು ತಪಾಸಣೆ ಮಾಡಿದಾಗ ಕಾಂಗ್ರೆಸ್ ಪಕ್ಷದ ಹಸ್ತದ ಗುರುತು ಇರುವ ಧ್ವಜಗಳು ಸಿಕ್ಕಿವೆ. ಎರಡೂ ಪ್ರಕರಣಗಳು ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿವೆ.

ಗದಗ ನಗರದ ಮುಂಡರಗಿ ರಸ್ತೆಯ ಜೆ ಟಿ ಇಂಜಿನಿಯರಿಂಗ್ ಕಾಲೇಜ್ ಬಳಿಯ ಚೆಕ್ ಪೋಸ್ಟ್ ನಲ್ಲಿ ಸುಮಾರು 300 ಕಾಂಗ್ರೆಸ್ ಪಕ್ಷದ ಶಾಲು ಸಿಕ್ಕಿವೆ. ಹಸ್ತದ ಚಿಹ್ನೆ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರ ಭಾವಚಿತ್ರ ಇರುವ ಶಾಲು ಜಪ್ತಿ ಮಾಡಲಾಗಿದೆ. ಬೆಟಗೇರಿ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:11 pm, Fri, 31 March 23