2022-23ನೇ ಸಾಲಿನಲ್ಲಿ ಹೆಚ್​​ಎಎಲ್​ಗೆ ಅತ್ಯಧಿಕ ಆದಾಯ: ಶೇ 8 ರಷ್ಟು ಏರಿಕೆ

ಹಿಂದೂಸ್ಥಾನ ಏರೋನಾಟಿಕ್ಸ್​ ಲಿಮಿಟೆಡ್​ (HAL)ನ 2022-23ನೇ ಹಣಕಾಸು ಸಾಲಿನ ಆದಾಯವು, ಕಳೆದ 2021-22ರ ಹಣಕಾಸು ವರ್ಷಕ್ಕಿಂತ ಶೇ 8ರಷ್ಟು ಜಾಸ್ತಿಯಾಗಿದೆ ಎಂದು ಹೆಚ್​ಎಎಲ್​ ಮಾದ್ಯಮ ಪ್ರಕಟಣೆ ಹೊರಡಿಸಿದೆ.

2022-23ನೇ ಸಾಲಿನಲ್ಲಿ ಹೆಚ್​​ಎಎಲ್​ಗೆ ಅತ್ಯಧಿಕ ಆದಾಯ: ಶೇ 8 ರಷ್ಟು ಏರಿಕೆ
ಹೆಚ್​ಎಎಲ್​​
Follow us
|

Updated on:Mar 31, 2023 | 10:35 PM

ಬೆಂಗಳೂರು: ಹಿಂದೂಸ್ಥಾನ ಏರೋನಾಟಿಕ್ಸ್​ ಲಿಮಿಟೆಡ್​ (HAL)ನ 2022-23ನೇ ಹಣಕಾಸು ಸಾಲಿನ ಆದಾಯವು, ಕಳೆದ 2021-22ರ ಹಣಕಾಸು ವರ್ಷಕ್ಕಿಂತ ಶೇ 8ರಷ್ಟು ಜಾಸ್ತಿಯಾಗಿದೆ. ಈ ಬಗ್ಗೆ ಶುಕ್ರವಾರ (ಮಾ.31) ಮಾಧ್ಯಮ ಪ್ರಕಟಣೆ ಹೊರಡಿಸಿದ ಹೆಚ್ಎಎಲ್​​​ 2021-22ರ ಸಾಲಿನಲ್ಲಿ 26,500 ಕೋಟಿ ಆದಾಯವಾಗಿದ್ದು, 2022-23ರಲ್ಲಿ 26,620 ಕೋಟಿ ಹೆಚ್ಚಿಗೆ ಆದಾಯವಾಗಿದೆ ಎಂದು ತಿಳಿಸಿದೆ. ಸ್ಥಳೀಯ ರಾಜಕೀಯ ಅಡೆತಡೆಗಳ ಹೊರತಾಗಿಯೂ, ಕಂಪನಿಗೆ ಹೆಚ್ಚಿನ ಆದಾಯವಾಗಿದೆ. ಇದಕ್ಕೆ ಪ್ರಮುಖ ಕಾರಣ ಸ್ವದೇಶಿ ನಿರ್ಮಾಣಕ್ಕೆ ಹೆಚ್ಚಿಗೆ ಒತ್ತು ನೀಡುತ್ತಿರುವುದು ಮತ್ತು ತಯಾರಿಕೆಗೆ ಬೇಕಾದ ವಸ್ತುಗಳು ಸಮರ್ಪಕವಾಗಿ ದೊರೆಯುತ್ತಿರುವುದು ಎಂದು ಹೆಚ್‌ಎಎಲ್ ಸಿಎಂಡಿ, ಸಿ ಬಿ ಅನಂತಕೃಷ್ಣನ್ ಹೇಳಿದ್ದಾರೆ.

ಅನೇಕ ಅಡೆತಡೆಗಳ ನಂತರವೂ ಮಾರ್ಚ್​ 2023 ಅಂತ್ಯದ ವೇಳೆಗೆ ಕಂಪನಿಗೆ ಸುಮಾರು 82 ಸಾವಿರ ಕೋಟಿಗಳಷ್ಟು ರೂ. ಆರ್ಡರ್​​ ಬಂದಿವೆ. ವರ್ಷದಲ್ಲಿ, ಕಂಪನಿಯು 70 HTT -40, 6 Do-228 ಏರ್‌ಕ್ರಾಫ್ಟ್ ಮತ್ತು PSLV ಉಡಾವಣಾ ವಾಹನಗಳ ಉತ್ಪಾದನಾ ಒಪ್ಪಂದಗಳನ್ನು ಒಳಗೊಂಡಂತೆ ಸುಮಾರು 26 ಸಾವಿರ ಕೋಟಿ ರೂ. ಅಷ್ಟು ಹೊಸ ಒಪ್ಪಂದಗಳನ್ನು ಮಾಡಿಕೊಂಡಿದೆ.

2022-23ರ ಹಣಕಾಸು ವರ್ಷದಲ್ಲಿ ವಿವಿಧ ರಕ್ಷಣಾ ಗ್ರಾಹಕರಿಂದ ಸುಮಾರು 25 ಸಾವಿರ ಕೋಟಿಗಳಷ್ಟು ರೂ. ಹಣ ಹರಿದು ಬಂದಿದೆ. ಈ ವರ್ಷದಲ್ಲಿ, ಐಟಿ ಎಟಿನಿಂದ 542 ಕೋಟಿ ರೂ. ಬಡ್ಡಿ ಸೇರಿದಂತೆ 1,798 ಕೋಟಿ ರೂ. ಆದಾಯ ತೆರಿಗೆ ಮರುಪಾವತಿಯಾಗಿದೆ ಎಂದು ಹೆಚ್​ಎಎಲ್​ ಹೇಳಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:25 pm, Fri, 31 March 23

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ