3 ಇಲಾಖೆ,‌ 50ಕೋಟಿ ರೂ.ಗೂ ಅಧಿಕ ಅನುದಾನ: ಕೆರೆ ಅಭಿವೃದ್ಧಿ ಹೆಸರಲ್ಲಿ ಸಿಟಿ ರವಿ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ: ತನಿಖೆಗೆ ಆಗ್ರಹಿಸಿದ ಕಾಂಗ್ರೆಸ್

|

Updated on: May 28, 2023 | 10:41 AM

ಬಿಜೆಪಿ ನಾಯಕ ಸಿಟಿ ರವಿಗೆ ಕೆರೆಯೊಂದ್ದು ಕಂಟಕವಾಗಿ ಕಾಡತೊಡಗಿದೆ. ನಾಲ್ಕು ಬಾರಿ ಚುನಾವಣೆಯಲ್ಲಿ ಗೆದ್ದು 20 ವರ್ಷಗಳ ಕಾಲ‌ ಶಾಸಕನಾಗಿ ಕಟ್ಟಿದ್ದ ಬಿಜೆಪಿ ಕೋಟೆಯನ್ನ ಛಿದ್ರ ಮಾಡಲು ಚುನಾವಣೆಯಲ್ಲಿ ಕಾಂಗ್ರೆಸ್ ಬಳಸಿದ್ದು ಈ ಕೆರೆಯ ಅಸ್ತ್ರವನ್ನೇ, ಮೂರು ಇಲಾಖೆಯಿಂದ ಕೋಟಿ ಹಣವನ್ನ ಕೆರೆ ಅಭಿವೃದ್ಧಿಗೆ ತಂದಿರುವ ಸಿಟಿ ರವಿಗೆ, ಚುನಾವಣೆ ಸೋಲಿಗೆ ಪ್ರಮುಖ ಕಾರಣವಾಗಿದ್ದು ಇದೆ. ಯಾಕೆ ಅಂತೀರಾ? ಇಲ್ಲಿದೆ ನೋಡಿ.

3 ಇಲಾಖೆ,‌ 50ಕೋಟಿ ರೂ.ಗೂ ಅಧಿಕ ಅನುದಾನ: ಕೆರೆ ಅಭಿವೃದ್ಧಿ ಹೆಸರಲ್ಲಿ ಸಿಟಿ ರವಿ  ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ: ತನಿಖೆಗೆ ಆಗ್ರಹಿಸಿದ ಕಾಂಗ್ರೆಸ್
ಸಿಟಿ ರವಿ ವಿರುದ್ದ ಭ್ರಷ್ಟಾಚಾರ ಆರೋಪ
Follow us on

ಚಿಕ್ಕಮಗಳೂರು: ಅದು 129 ಎಕರೆ ವಿಸ್ತೀರ್ಣವಿರುವ ನಗರದ ಹೃದಯ ಭಾಗದಲ್ಲಿರುವ ಬಸವನಹಳ್ಳಿ ಕೆರೆ. ಸಾವಿರಾರು ರೈತರ ಬದುಕಿಗೆ ಆಸರೆಯಾಗಿದ್ದ ಕೆರೆಯಿದು. ಚಿಕ್ಕಮಗಳೂರು(Chikkamagaluru) ನಗರದ ಜೀವನಾಡಿಯಾಗಿರುವ ಕೆರೆಯ ಅಭಿವೃದ್ಧಿಗೆ ಮಾಜಿ ಶಾಸಕ, ಬಿಜೆಪಿ ನಾಯಕ ಸಿ.ಟಿ ರವಿ(CT Ravi)ಯವರು ಸಣ್ಣ ನೀರಾವರಿ ಇಲಾಖೆ, ಕಾವೇರಿ ಅಭಿವೃದ್ಧಿ ನಿಗಮ, ಪ್ರವಾಸೋದ್ಯಮ ಇಲಾಖೆಯಿಂದ 5 ವರ್ಷಗಳಲ್ಲಿ 50 ಕೋಟಿ ರೂಪಾಯಿ ಹಣವನ್ನ ಅನುದಾನ ತಂದಿದ್ದಾರೆ. ಸಣ್ಣ ನೀರಾವರಿ ಇಲಾಖೆಯಿಂದ 7 ಕೋಟಿ, ಕಾವೇರಿ ಅಭಿವೃದ್ಧಿ ನಿಗಮದಿಂದ 7 ಕೋಟಿ ರೂಪಾಯಿಯಲ್ಲಿ ಕೆರೆ ಅಭಿವೃದ್ಧಿ ಕಾರ್ಯ ಮುಗಿದಿದೆ ಎಂದು 14 ಕೋಟಿ ಹಣವನ್ನ ಕೂಡ ಗುತ್ತಿಗೆದಾರರು ಪಡೆದುಕೊಂಡಿದ್ದಾರೆ.

ಆದರೆ, ಕಾಮಗಾರಿ ಸಿ.ಟಿ ರವಿ ಪ್ರವಾಸೋದ್ಯಮ ಇಲಾಖೆಯ ಸಚಿವರಾಗಿದ್ದ ವೇಳೆ ಪ್ರವಾಸೋದ್ಯಮ ಇಲಾಖೆಯಿಂದ 36 ಕೋಟಿ ಹಣ ಬಿಡುಗಡೆ ಮಾಡಿಸಿದ್ದು .36 ಕೋಟಿ ಹಣದಲ್ಲಿ ಅರ್ಧದಷ್ಟು ಕಾಮಗಾರಿ ಮುಗಿದಿದೆ ಎಂದು ಹಣ ಬಿಡುಗಡೆಯಾಗಿದೆ. ಆದ್ರೆ, ಬಸವನಹಳ್ಳಿ ಕೆರೆ ಅಭಿವೃದ್ಧಿ ಹೆಸರಲ್ಲಿ ಸಿ.ಟಿ ರವಿ ಹಣ ಲೂಟಿ ಮಾಡುತ್ತಿದ್ದಾರೆ ಎಂಬ ಆರೋಪ‌ ಕೇಳಿ ಬಂದಿದ್ದು. ಮೂರು ಇಲಾಖೆಯಿಂದ ಬಿಡುಗಡೆಯಾಗಿರುವ ಅನುದಾನದಲ್ಲಿ ಏನೇನು ಕೆಲಸ ಮಾಡಿದ್ದೀರಾ ತೋರಿಸಿ ಅಂತ ಕಾಂಗ್ರೆಸ್ ಕಾರ್ಯಕರ್ತರು ಸಿ.ಟಿ ರವಿಗೆ ಪ್ರಶ್ನೆ ಮಾಡಿದ್ದಾರೆ. ಆರ್​ಟಿಐ(RTI) ನಡಿಯಲ್ಲಿ ದಾಖಲೆಗಳನ್ನ ಪಡೆದು ನ್ಯಾಯಾಲಯದಲ್ಲಿ ಕಾಮಗಾರಿ ನಿಲ್ಲಿಸುವಂತೆ ಮನವಿ ಸಲ್ಲಿಸಿ, ಸರ್ಕಾರದ ಮಟ್ಟದಲ್ಲಿ ತನಿಖೆಗೆ ಆಗ್ರಹ ಮಾಡಿದ್ದಾರೆ.

ಇದನ್ನೂ ಓದಿ:545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಹಗರಣದಲ್ಲಿ ಹಣದ ಹೊಳೆಯೇ ಹರಿದಿರುವುದು ದೃಢ

ಚುನಾವಣೆಯಲ್ಲಿ ಸಿಟಿ ರವಿ‌ ಸೋಲಿಸಲು ಕೆರೆ ಭ್ರಷ್ಟಾಚಾರದ ಅಸ್ತ್ರ ಬಳಸಿದ್ದ ಕಾಂಗ್ರೆಸ್

ನಾಲ್ಕು ಬಾರಿ ಚುನಾವಣೆಯಲ್ಲಿ ಗೆದ್ದು 20 ವರ್ಷ ಶಾಸಕರಾಗಿ ಚಿಕ್ಕಮಗಳೂರನ್ನ ಭದ್ರಕೋಟೆ ಮಾಡಿಕೊಂಡಿದ್ದ ಸಿಟಿ ರವಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ರುಚಿಯನ್ನ ಒಂದು ಕಾಲದ ಆಪ್ತನಾಗಿದ್ದ ಎಚ್.ಡಿ‌ ತಮ್ಮಯ್ಯ ನೀಡಿದ್ದಾರೆ. ಚುನಾವಣೆಯ ಪ್ರಚಾರದ ವೇಳೆ ತಮ್ಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಬಳಸಿದ್ದು ಬಸವನಹಳ್ಳಿ ಕೆರೆಯ ಕೋಟಿ ಕೋಟಿ ಹಣದ ಭ್ರಷ್ಟಾಚಾರದ ಅಸ್ತ್ರವನ್ನೇ. ಹೌದು ಬಸವನಹಳ್ಳಿ ಕೆರೆ ಅಭಿವೃದ್ಧಿ ಹೆಸರಲ್ಲಿ ಭ್ರಷ್ಟಾಚಾರ ನಡೆದಿದೆ, ಕೋಟಿ ಕೋಟಿ ಹಣ ಲೂಟಿ ಮಾಡಿದ್ದಾರೆ, ಕೆರೆ ಅಭಿವೃದ್ಧಿ ಮಾಡಿದ್ರೆ ಚಿಕ್ಕಮಗಳೂರು ಜನತೆ ನೀವೇ ನೋಡಿ ಮತ ನೀಡಿ ಎಂದು ಕಾಂಗ್ರೆಸ್ ಪ್ರಚಾರ ಮಾಡಿತ್ತು.

ಸಿಟಿ ರವಿ ಕಾಲದ ಕಾಮಗಾರಿ ತನಿಖೆ ಮಾಡಲು ಶಾಸಕ ತಮ್ಮಯ್ಯ ಸಿದ್ದ

ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಶಾಸಕ ತಮ್ಮಯ್ಯ ಸಿಟಿ ರವಿ ಕಾಲದಲ್ಲಿ ನಡೆದ ಒಂದೊಂದು ಕಾಮಗಾರಿಗಳ ತನಿಖೆ ಮಾಡಿಸಿಯೇ ಸಿದ್ದ ಎಂದಿದ್ದಾರೆ. ಸರ್ಕಾರಿ ದಾಖಲೆಗಳಲ್ಲಿ‌129 ಎಕರೆ ಇರುವ ಕೆರೆಯನ್ನ ಅರ್ಧದಷ್ಟು ಒತ್ತುವರಿ ಮಾಡಲಾಗಿದೆ. ಒತ್ತುವರಿ ತೆರವು ಮಾಡದೆ ಕಾಮಗಾರಿ ನಡೆಸುತ್ತಿರುವುದು ಯಾಕೆ? 14 ಕೋಟಿ ಸೇರಿದಂತೆ ಪ್ರವಾಸೋದ್ಯಮ ಇಲಾಖೆಯಲ್ಲಿ ನಡೆಯುತ್ತಿರುವ ಕಾಮಗಾರಿಯಲ್ಲಿ ಗೋಲ್ಮಾಲ್ ನಡೆದಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಸಿ.ಟಿ ರವಿ ವಿರುದ್ಧ ತನಿಖೆ ನಡೆಸಬೇಕು ಎಂದು ಪಟ್ಟು ಹಿಡಿದು ಕುಳಿತುಕೊಂಡಿದ್ದಾರೆ.

ಇದನ್ನೂ ಓದಿ:ವೋಟರ್​ ಐಡಿ ಹಗರಣ: ಹುಬ್ಬಳ್ಳಿ, ದಾವಣಗೆರೆ, ಕನಕಗಿರಿಯಲ್ಲಿಯೂ ಅಕ್ರಮ ಪತ್ತೆ; ಚಿಲುಮೆ ಮೇಲೆ ದೂರು ಕೊಟ್ಟ ಸಮನ್ವಯ ಟ್ರಸ್ಟ್​ಗೆ ನೊಟೀಸ್

ಒಟ್ಟಿನಲ್ಲಿ ಬಿಜೆಪಿಯ ಮಾಜಿ ಶಾಸಕ ಸಿ.ಟಿ ರವಿಗೆ ಬಸವನಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಯೇ ಕಂಟಕವಾಗಿದ್ದು. ಕೆರೆ ಅಭಿವೃದ್ಧಿ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಸಿ.ಟಿ ರವಿ ವಿರುದ್ಧ ಕಾಂಗ್ರೆಸ್ ಆರೋಪಿಸುತ್ತಿದ್ದು. ತನಿಖೆಗೆ ಶಾಸಕ ಎಚ್. ಡಿ ತಮ್ಮಯ್ಯ ಸರ್ಕಾರಕ್ಕೆ ಆಗ್ರಹಿಸುವುದಾಗಿ ಹೇಳಿದ್ದಾರೆ. ಸಾವಿರಾರು ರೈತರ ಬದುಕಿಗೆ ಜೀವನಾಡಿಯಾಗಿದ್ದ ಕೆರೆ ಅಭಿವೃದ್ಧಿ ಹೆಸರಲ್ಲಿ ಹಣ ಲೂಟಿ ಮಾಡಿದ್ರೆ, ಶಿಕ್ಷೆ ಆಗಲೇಬೇಕು ಅಂತ ಚಿಕ್ಕಮಗಳೂರಿನ ಜನತೆ ಕೂಡ ಆಗ್ರಹ ಮಾಡುತ್ತಿದ್ದಾರೆ.

ವರದಿ: ಅಶ್ವಿತ್ ಟಿವಿ9 ಚಿಕ್ಕಮಗಳೂರು

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ