ಕಾಫಿನಾಡಲ್ಲಿ ಮತ್ತೆ ಪೊಲೀಸ್-ವಕೀಲರ ಮಧ್ಯೆ ಸಂಘರ್ಷ; ವಕೀಲರ ಕಾರಿಗೆ ಬೈಕ್​ ಗುದ್ದಿದ ಪೊಲೀಸ್ ಪೇದೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 20, 2023 | 8:52 PM

ಮತ್ತೆ ಪೊಲೀಸ್-ವಕೀಲರ ಮಧ್ಯೆ ಸಂಘರ್ಷ ಮುಂದುವರೆದಿದ್ದು, ವಕೀಲರ(Lawyer) ಕಾರಿಗೆ ಆಕಸ್ಮಿಕವಾಗಿ ಬೈಕಿನಲ್ಲಿ ಬಂದ ಪೊಲೀಸ್( ಪೇದೆ(Police Constable) ಗುದ್ದಿದ ಘಟನೆ ಚಿಕ್ಕಮಗಳೂರು (Chikmagalur) ನಗರದ ಕೋರ್ಟ್ ಮುಂಭಾಗದಲ್ಲಿ ನಡೆದಿದೆ.

ಕಾಫಿನಾಡಲ್ಲಿ ಮತ್ತೆ ಪೊಲೀಸ್-ವಕೀಲರ ಮಧ್ಯೆ ಸಂಘರ್ಷ; ವಕೀಲರ ಕಾರಿಗೆ ಬೈಕ್​ ಗುದ್ದಿದ ಪೊಲೀಸ್ ಪೇದೆ
ಚಿಕ್ಕಮಗಳೂರಿನಲ್ಲಿ ಲಾಯರ್ ಕಾರಿಗೆ ಪೊಲೀಸ್​ ಪೇದೆಯ ಕಾರು ಡಿಕ್ಕಿ​
Follow us on

ಚಿಕ್ಕಮಗಳೂರು, ಡಿ.20: ಕಾಫಿನಾಡಲ್ಲಿ ಮತ್ತೆ ಪೊಲೀಸ್-ವಕೀಲರ ಮಧ್ಯೆ ಸಂಘರ್ಷ ಮುಂದುವರೆದಿದ್ದು, ವಕೀಲರ(Lawyer) ಕಾರಿಗೆ ಆಕಸ್ಮಿಕವಾಗಿ ಬೈಕಿನಲ್ಲಿ ಬಂದ ಪೊಲೀಸ್( ಪೇದೆ(Police Constable) ಗುದ್ದಿದ ಘಟನೆ ಚಿಕ್ಕಮಗಳೂರು (Chikmagalur) ನಗರದ ಕೋರ್ಟ್ ಮುಂಭಾಗದಲ್ಲಿ ನಡೆದಿದೆ. ವಕೀಲರು ಹಾಗೂ ಪೊಲೀಸರ ನಡುವೆ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪೊಲೀಸ್ ಪೇದೆ ಮಹೇಶ್ ಎಂಬುವವರಿಂದ ಡಿಕ್ಕಿಯಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ವಕೀಲರ ಸಂಘದ ಅಧ್ಯಕ್ಷ‌ ಸುಧಾಕರ್ ಅವರ ನೇತೃತ್ವದಲ್ಲಿ ಕೋರ್ಟ್ ಮುಂಭಾಗದಲ್ಲಿ ಸಂಘರ್ಷ ರಾಜಿಯಾಗಿದ್ದು, ಅಪಘಾತ ಪ್ರಕರಣದ ಕುರಿತು ಕಾನೂನು ಹೋರಾಟ ಮುಂದುವರಿಸಲು ವಕೀಲರು ತೀರ್ಮಾನ ಮಾಡಿದ್ದಾರೆ.

ಏನಿದು ಪೊಲೀಸ್-ವಕೀಲರ ಮಧ್ಯೆ ಸಂಘರ್ಷ?

ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಲ್ಮೆಟ್​ ಹಾಕದ ವಿಚಾರವಾಗಿ ವಕೀಲ ಪ್ರೀತಮ್​ ಎಂಬುವರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಕೀಲರು ಪೊಲೀಸ್​ ಠಾಣೆಯಲ್ಲಿ ಪ್ರತಿಭಟನೆ ಮಾಡಿದ್ದರು. ಹೀಗಾಗಿ ಠಾಣೆಯಲ್ಲಿ ಪ್ರತಿಭಟನೆ ನಡೆಸಿದ್ದ ವಕೀಲರ ವಿರುದ್ಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ನಾಲ್ಕು ಪ್ರತ್ಯೇಕ ಎಫ್​ಐಆರ್​ ದಾಖಲಾಗಿತ್ತು. ಇದಾದ ಮೇಲೆ ವಕೀಲರು ಹಾಗೂ ಪೊಲೀಸರ ನಡುವಿನ ಜಟಾಪಟಿ ತಾರಕಕ್ಕೆ ಏರಿತ್ತು.  ವಕೀಲರು ಠಾಣೆಯಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಹಲ್ಲೆ ಖಂಡಿಸಿ ಮಧ್ಯರಾತ್ರಿವರೆಗೂ ನಗರದ ಹನುಮಂತಪ್ಪ ಸರ್ಕಲ್​​ನಲ್ಲಿ ಪೊಲೀಸರು ಮತ್ತು ಅವರ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದರು.

ಇದನ್ನೂ ಓದಿ:ಚಿಕ್ಕಮಗಳೂರು ವಕೀಲ-ಪೊಲೀಸರ ಜಟಾಪಟಿ: ವಕೀಲರ ವಿರುದ್ಧ 4 ಪ್ರತ್ಯೇಕ ಪ್ರಕರಣ ದಾಖಲು

ಸಿಐಡಿ ತನಿಖೆ

ನಂತರ ಡಿ.06 ಯಿಂದ ಸಿಐಡಿ ಎಸ್​ಪಿ ವೆಂಕಟೇಶ್ ನೇತೃತ್ವದಲ್ಲಿ ಪ್ರಕರಣದ ತನಿಖೆ ಶುರುವಾಗಿತ್ತು. ಘಟನೆ ಕುರಿತು ಹೈಕೋರ್ಟ್ ಡಿ.12 ರಂದು ಸಂಪೂರ್ಣ ವರದಿ ಸಲ್ಲಿಸುವಂತೆ ಸಿಐಡಿ ಡಿಜಿಗೆ ಸೂಚಿಸಿತ್ತು. ಈ ಹಿನ್ನಲೆ ಚಿಕ್ಕಮಗಳೂರಿಗೆ ಸಿಐಡಿ ಅಧಿಕಾರಿಗಳ ತನಿಖಾ ತಂಡ ಆಗಮಿಸಿತ್ತು. ವಕೀಲ ಪ್ರೀತಮ್ ಮೇಲೆ ಚಿಕ್ಕಮಗಳೂರು ಠಾಣೆ ಪೊಲೀಸರಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್​ ಇಲಾಖೆ ಹಾಗೂ ವಕೀಲರ ವಿರುದ್ಧ ಧರಣಿ ಕುರಿತು ತನಿಖೆ ನಡೆಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ