ಮುಳ್ಳಯ್ಯನಗಿರಿ ತಿರುವಿನಲ್ಲಿ 250 ಅಡಿ ಆಳದ ಪ್ರಪಾತಕ್ಕೆ ಬಿದ್ದ ಪ್ರವಾಸಿಗರ ಕಾರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 11, 2024 | 6:17 PM

ಮುಳ್ಳಯ್ಯನಗಿರಿ ತಿರುವಿನಲ್ಲಿ ಪ್ರವಾಸಿಗರ ಕಾರು ಪಲ್ಟಿಯಾಗಿದ್ದು, 250 ಅಡಿ ಆಳದ ಪ್ರಪಾತಕ್ಕೆ ಕಾರು ಬಿದ್ದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪ್ರವಾಸಿಗರು ಪಾರಾಗಿದ್ದಾರೆ. ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಮುಳ್ಳಯ್ಯನಗಿರಿ ತಿರುವಿನಲ್ಲಿ 250 ಅಡಿ ಆಳದ ಪ್ರಪಾತಕ್ಕೆ ಬಿದ್ದ ಪ್ರವಾಸಿಗರ ಕಾರು
ಮುಳ್ಳಯ್ಯನಗಿರಿ ತಿರುವಿನಲ್ಲಿ 250 ಅಡಿ ಆಳದ ಪ್ರಪಾತಕ್ಕೆ ಬಿದ್ದ ಪ್ರವಾಸಿಗರ ಕಾರು
Follow us on

ಚಿಕ್ಕಮಗಳೂರು, ಅ.11: ಚಿಕ್ಕಮಗಳೂರು(Chikkamagaluru) ತಾಲೂಕಿನ ಮುಳ್ಳಯ್ಯನಗಿರಿ ತಿರುವಿನಲ್ಲಿ ಪ್ರವಾಸಿಗರ ಕಾರು ಪಲ್ಟಿಯಾಗಿದ್ದು, 250 ಅಡಿ ಆಳದ ಪ್ರಪಾತಕ್ಕೆ ಕಾರು ಬಿದ್ದಿದೆ. ಕಾರಿನಲ್ಲಿದ್ದ ಐವರು ಪ್ರವಾಸಿಗರಿಗೆ ಗಂಭೀರ ಗಾಯವಾಗಿದ್ದು, ಚಿಕ್ಕಮಗಳೂರು ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಹೈದರಾಬಾದ್ ಮೂಲದ ಪ್ರವಾಸಿಗರಾದ ಇವರು, ಮುಳ್ಳಯ್ಯನಗಿರಿ ಭಾಗಕ್ಕೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ದುರ್ಘಟನೆ ನಡೆದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪ್ರವಾಸಿಗರು ಪಾರಾಗಿದ್ದಾರೆ. ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಯುವ ರೈತನ ಮೇಲೆ ಮೊಸಳೆ ದಾಳಿ; ಮಾಲೀಕನ ಜೀವ ಉಳಿಸಿದ ಎತ್ತು

ಬಾಗಲಕೋಟೆ: ಎತ್ತಿನ‌ ಮೈ ತೊಳೆಯಲು ಹೋದ ಯುವ ರೈತನ ಮೇಲೆ ಮೊಸಳೆ ದಾಳಿ ಮಾಡಿದ್ದು, ಎತ್ತು ಮಾಲೀಕನ ಜೀವ ಉಳಿಸಿದ ಘಟನೆ ಬಾಗಲಕೋಟೆ ‌ಜಿಲ್ಲೆಯ ಬೀಳಗಿ ತಾಲ್ಲೂಕಿನ ಹೊನ್ಯಾಳ ಬಳಿಯ ಆಲಮಟ್ಟಿ ಜಲಾಶಯ ಹಿನ್ನೀರಲ್ಲಿ ನಡೆದಿದೆ.
ಯುವಕ ಧರಿಯಪ್ಪ ಮೇಟಿ ಅವರ ಬಲಗೈಗೆ ಮೊಸಳೆ ಬಾಯಿ‌ ಹಾಕಿದ ಪರಿಣಾಮ ಬಲಗೈ ಕಟ್ ಆಗಿದ್ದು, ಕೂಡಲೇ ಯುವ ರೈತ ಎಡಗೈಯಿಂದ ಎತ್ತಿನ ಹಗ್ಗ ಹಿಡಿದಿದ್ದಾನೆ. ಬಳಿಕ ಮಾಲೀಕನನ್ನು ಹಿನ್ನೀರಿನಿಂದ ಎತ್ತು ಹೊರ ತಂದಿದೆ.

ಇದನ್ನೂ ಓದಿ:ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ಇನ್ನು ಮಾಲೀಕನ‌ನ್ನು ಹಿನ್ನೀರಿನಿಂದ ಹೊರತಂದು ಬಿಟ್ಟಾಗ ಮೊಸಳೆ ಓಡಿ ಹೋಗಿದೆ. ಅಷ್ಟರಲ್ಲೇ ಬಲಗೈ ಮೊಸಳೆ ಬಾಯಿಕೆ‌‌ ಸಿಲುಕಿ ಕಟ್ ಆಗಿತ್ತು. ಎತ್ತಿನ ಹಗ್ಗದ ಆಸರೆಯಿರದಿದ್ದರೆ ಜೀವಕ್ಕೆ ಕಳೆದುಕೊಳ್ಳುವ ಸಾಧ್ಯತೆಯಿತ್ತು. ಗಾಯಾಳುವನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಬೀಳಗಿ ಶಾಸಕ ಜೆಟಿ ಪಾಟಿಲ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಕೂಡಲೇ ಅರಣ್ಯಾಧಿಕಾರಿಗಳ ಜೊತೆ ದೂರವಾಣಿ ಮೂಲಕ ಕರೆ ಮಾಡಿ, ಸೂಕ್ತ ಪರಿಹಾರ ಕೊಡಬೇಕು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ