ಚಿಕ್ಕಮಗಳೂರಿನಲ್ಲಿ ವೇಗವಾಗಿ ಹೋಗುತ್ತಿದ್ದ ಎತ್ತಿನ ಗಾಡಿ ಹರಿದು ವ್ಯಕ್ತಿ ಸಾವು; ರಾಸುಗಳಿಗೂ ಗಾಯ

| Updated By: sandhya thejappa

Updated on: Feb 13, 2022 | 2:56 PM

ಎತ್ತುಗಳು ಗುದ್ದಿದ ಪರಿಣಾಮ ಜಕಣಾಚಾರಿ ಹಾರಿ ರಸ್ತೆ ಪಕ್ಕಕ್ಕೆ ಬಿದ್ದಿದ್ದಾರೆ. ಕೂಡಲೇ ವಿಚಾರ ತಿಳಿದ ಅಜ್ಜಂಪುರ ಪೊಲೀಸರು ಸ್ಥಳಕ್ಕೆ ಧಾವಿಸಿ, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ.

ಚಿಕ್ಕಮಗಳೂರಿನಲ್ಲಿ ವೇಗವಾಗಿ ಹೋಗುತ್ತಿದ್ದ ಎತ್ತಿನ ಗಾಡಿ ಹರಿದು ವ್ಯಕ್ತಿ ಸಾವು; ರಾಸುಗಳಿಗೂ ಗಾಯ
ಎತ್ತಿನಗಾಡಿ ಚಕ್ರಕ್ಕೆ ಸಿಲುಕಿದ ವ್ಯಕ್ತಿ, ಜಕಣಚಾರಿ
Follow us on

ಚಿಕ್ಕಮಗಳೂರು: ಜಾತ್ರೆಗೆ ಹೋಗುತ್ತಿದ್ದ ಎತ್ತಿನ ಗಾಡಿ (Hackery) ಡಿಕ್ಕಿಯಾಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಅಜ್ಜಂಪುರ ಸಮೀಪ ನಡೆದಿದೆ. ಅಜ್ಜಂಪುರ ತಾಲೂಕಿನ ಅಬ್ಬಿನಹೊಳಲು ಗ್ರಾಮದ, ಗೌರಪುರ ಗ್ರಾಮ ಪಂಚಾಯತಿಯಲ್ಲಿ ವಾಟರ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಜಕಣಚಾರಿ(48) ಮೃತ ದುರ್ದೈವಿ. ನಿನ್ನೆ (ಫೆ.12) ಅದ್ದೂರಿ ಅಂತರಗಟ್ಟೆ ಜಾತ್ರೆ ನಡೆದಿದ್ದು, ರಥೋತ್ಸವದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಜಾತ್ರೆಗೆ ಸುತ್ತಮುತ್ತಲಿನ ನೂರಾರು ಹಳ್ಳಿಗಳಿಂದ ಎತ್ತಿನಗಾಡಿಯನ್ನ ಹೊಡೆದುಕೊಂಡು ಬರುವುದು ಹಿಂದಿನಿಂದಲೂ ಬಂದಿರುವ ರೂಢಿ. ಇದೇ ರೀತಿ ಮೊನ್ನೆ ಸಂಜೆ ಭಕ್ತರು ಎತ್ತಿನಗಾಡಿಯನ್ನ ಜೋಶ್​ನಲ್ಲಿ ಹೊಡೆದುಕೊಂಡು ಬರುವ ಸಂದರ್ಭದಲ್ಲಿ ಬೆದರಿದ ಎತ್ತುಗಳು ಬೈಕ್​ನಲ್ಲಿ ಹೋಗುತ್ತಿದ್ದ ಜಕಣಾಚಾರಿ ಬೆನ್ನಿಗೆ ಗುದ್ದಿದೆ.

ಎತ್ತುಗಳು ಗುದ್ದಿದ ಪರಿಣಾಮ ಜಕಣಾಚಾರಿ ಹಾರಿ ರಸ್ತೆ ಪಕ್ಕಕ್ಕೆ ಬಿದ್ದಿದ್ದಾರೆ. ಕೂಡಲೇ ವಿಚಾರ ತಿಳಿದ ಅಜ್ಜಂಪುರ ಪೊಲೀಸರು ಸ್ಥಳಕ್ಕೆ ಧಾವಿಸಿ, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಈ ವೇಳೆ ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಶಿವಮೊಗ್ಗ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಜಕಣಚಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಈ ಬಗ್ಗೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ರೈತರು ಎತ್ತಿನಗಾಡಿಗಳನ್ನ ಉತ್ಸಾಹಭರಿತವಾಗಿ ಕೇಕೆ ಹಾಕಿಕೊಂಡು ಓಡಿಸುತ್ತಿದ್ದ ಸಂದರ್ಭದಲ್ಲಿ ಮುಗ್ಗರಿಸಿ ಬಿದ್ದು ಹಲವು ರಾಸುಗಳು ಕೂಡ ಗಂಭೀರ ಗಾಯಗೊಂಡಿವೆ. ಅಂತರಗಟ್ಟೆ ಜಾತ್ರೆ ಅದ್ದೂರಿಯಾಗಿ ನಡೆದರೂ ಕೂಡ ಈ ರೀತಿ ಹಲವಾರು ದುರಂತಗಳು ನಡೆದಿರುವುದು ಭಕ್ತರನ್ನ ಆತಂಕಗೊಳಿಸಿದೆ.

ಖಾಸಗಿ‌ ಬಸ್ ಮರಕ್ಕೆ ಡಿಕ್ಕಿ
ಕೋಲಾರ: ಪಾರ್ಶ್ವಗಾನಹಳ್ಳಿ ಗ್ರಾಮದ‌ ಬಳಿ‌ ಖಾಸಗಿ‌ ಬಸ್ ಮರಕ್ಕೆ ಡಿಕ್ಕಿಯಾಗಿ ಸುಮಾರು 20 ಮಂದಿಗೆ ಗಾಯವಾಗಿದೆ. ಕೋಲಾರ ಹೊರವಲಯದ ಪ್ಲಿಪ್ ಕಾರ್ಟ್ ಕಂಪನಿಗೆ  ಸೇರಿದ್ದ ಬಸ್, ಕೆಲಸ ನಿರ್ಮಿತ ತೆರಳುತ್ತಿದ್ದರು. ಚಾಲಕನ‌ ಅಜಾಗರೂಕತೆಯಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ

ಪಾಕ್ ಪರ ಟ್ವೀಟ್ ಮಾಡಿದ ಹುಂಡೈ; ಇದೊಂದು ದೇಶ ವಿರೋಧಿ ಕಂಪನಿ ಎಂದು ಕಾರಿಗೆ ಸ್ಟಿಕರ್ ಅಂಟಿಸಿ ಯುವಕ ಪ್ರತಿಭಟನೆ

ಅಕ್ರಮ ಮರಳು ಗಣಿಗಾರಿಕೆ: ಅರವಿಂದ ಕೇಜ್ರಿವಾಲ್ ಸುಳ್ಳುಗಾರ; ಪಂಜಾಬ್ ಸಿಎಂ ಚನ್ನಿ ತಿರುಗೇಟು

Published On - 2:18 pm, Sun, 13 February 22