ಚಿಕ್ಕಮಗಳೂರು: ಏಕಾಏಕಿ ರಸ್ತೆಯಲ್ಲಿ ಕುಸಿದುಬಿದ್ದು 6 ಲಕ್ಷ ರೂಪಾಯಿ ಮೌಲ್ಯದ ಹೋರಿ ಸಾವು

ಸತೀಶ್ ಎಂಬುವರಿಗೆ ಸೇರಿದ ಎತ್ತು ಜಾತ್ರೆಗೆ ಹೋಗುವಾಗ ಕುಸಿದು ಬಿದ್ದು ಸಾವನ್ನಪ್ಪಿದೆ. ಜೋಡೆತ್ತುಗಳಿಗೆ ರಾಮ-ಲಕ್ಷ್ಮಣ ಎಂದು ಕುಟುಂಬಸ್ಥರು ಹೆಸರಿಟ್ಟಿದ್ದರು. ಇದೀಗ ರಾಮ ಸಾವನ್ನಪ್ಪಿದೆ. ಸದ್ಯ ಸಾಕು ಪ್ರಾಣಿಯ ಸಾವಿನಿಂದ ಸತೀಶ್ ಕುಟುಂಬಸ್ಥರು ಕಂಗಾಲಾಗಿದ್ದಾರೆ.

ಚಿಕ್ಕಮಗಳೂರು: ಏಕಾಏಕಿ ರಸ್ತೆಯಲ್ಲಿ ಕುಸಿದುಬಿದ್ದು 6 ಲಕ್ಷ ರೂಪಾಯಿ ಮೌಲ್ಯದ ಹೋರಿ ಸಾವು
ಹೋರಿ
Follow us
TV9 Web
| Updated By: preethi shettigar

Updated on:Feb 14, 2022 | 11:20 AM

ಚಿಕ್ಕಮಗಳೂರು: ಕಳೆದ ವರ್ಷ 6 ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿದ್ದ ಹೋರಿ ಸಾವನ್ನಪ್ಪಿದ(Death) ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಕಾಟಿನಕೆರೆ ಬಳಿ ನಡೆದಿದೆ. ಜಾತ್ರೆಗೆ(Fair) ಹೋಗುತ್ತಿದ್ದ ವೇಳೆ 6 ಲಕ್ಷ ರೂಪಾಯಿ ಮೌಲ್ಯದ ಹೋರಿ(OX) ಕುಸಿದುಬಿದ್ದು ಸಾವನ್ನಪ್ಪಿದೆ. ಅಂತರಘಟ್ಟೆ ಜಾತ್ರೆಗೆ ಗಾಡಿಯನ್ನು ಕಟ್ಟಿಕೊಂಡು ಹೋಗುವಾಗ ಹೋರಿ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದೆ.

ಸತೀಶ್ ಎಂಬುವರಿಗೆ ಸೇರಿದ ಎತ್ತು ಜಾತ್ರೆಗೆ ಹೋಗುವಾಗ ಕುಸಿದು ಬಿದ್ದು ಸಾವನ್ನಪ್ಪಿದೆ. ಜೋಡೆತ್ತುಗಳಿಗೆ ರಾಮ-ಲಕ್ಷ್ಮಣ ಎಂದು ಕುಟುಂಬಸ್ಥರು ಹೆಸರಿಟ್ಟಿದ್ದರು. ಇದೀಗ ರಾಮ ಸಾವನ್ನಪ್ಪಿದೆ. ಸದ್ಯ ಸಾಕು ಪ್ರಾಣಿಯ ಸಾವಿನಿಂದ ಸತೀಶ್ ಕುಟುಂಬಸ್ಥರು ಕಂಗಾಲಾಗಿದ್ದಾರೆ.

ನಿನ್ನೆ ಎತ್ತಿಗಾಡಿ ಸ್ಪರ್ಧೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದರು

ಜಾತ್ರೆಗೆ ಹೋಗುತ್ತಿದ್ದ ಎತ್ತಿನ ಗಾಡಿ ಡಿಕ್ಕಿಯಾಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮೀಪ ನಡೆದಿದೆ. ಅಜ್ಜಂಪುರ ತಾಲೂಕಿನ ಅಬ್ಬಿನಹೊಳಲು ಗ್ರಾಮದ, ಗೌರಪುರ ಗ್ರಾಮ ಪಂಚಾಯತಿಯಲ್ಲಿ ವಾಟರ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಜಕಣಚಾರಿ(48) ಮೃತ ದುರ್ದೈವಿ. ಫೆ.12 ರಂದು ಅದ್ದೂರಿ ಅಂತರಗಟ್ಟೆ ಜಾತ್ರೆ ನಡೆದಿದ್ದು, ರಥೋತ್ಸವದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಜಾತ್ರೆಗೆ ಸುತ್ತಮುತ್ತಲಿನ ನೂರಾರು ಹಳ್ಳಿಗಳಿಂದ ಎತ್ತಿನಗಾಡಿಯನ್ನ ಹೊಡೆದುಕೊಂಡು ಬರುವುದು ಹಿಂದಿನಿಂದಲೂ ಬಂದಿರುವ ರೂಢಿ. ಇದೇ ರೀತಿ ಮೊನ್ನೆ ಸಂಜೆ ಭಕ್ತರು ಎತ್ತಿನಗಾಡಿಯನ್ನ ಜೋಶ್​ನಲ್ಲಿ ಹೊಡೆದುಕೊಂಡು ಬರುವ ಸಂದರ್ಭದಲ್ಲಿ ಬೆದರಿದ ಎತ್ತುಗಳು ಬೈಕ್​ನಲ್ಲಿ ಹೋಗುತ್ತಿದ್ದ ಜಕಣಾಚಾರಿ ಬೆನ್ನಿಗೆ ಗುದ್ದಿದೆ.

ಎತ್ತುಗಳು ಗುದ್ದಿದ ಪರಿಣಾಮ ಜಕಣಾಚಾರಿ ಹಾರಿ ರಸ್ತೆ ಪಕ್ಕಕ್ಕೆ ಬಿದ್ದಿದ್ದಾರೆ. ಕೂಡಲೇ ವಿಚಾರ ತಿಳಿದ ಅಜ್ಜಂಪುರ ಪೊಲೀಸರು ಸ್ಥಳಕ್ಕೆ ಧಾವಿಸಿ, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಈ ವೇಳೆ ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಶಿವಮೊಗ್ಗ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಜಕಣಚಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಈ ಬಗ್ಗೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ರೈತರು ಎತ್ತಿನಗಾಡಿಗಳನ್ನ ಉತ್ಸಾಹಭರಿತವಾಗಿ ಕೇಕೆ ಹಾಕಿಕೊಂಡು ಓಡಿಸುತ್ತಿದ್ದ ಸಂದರ್ಭದಲ್ಲಿ ಮುಗ್ಗರಿಸಿ ಬಿದ್ದು ಹಲವು ರಾಸುಗಳು ಕೂಡ ಗಂಭೀರ ಗಾಯಗೊಂಡಿವೆ. ಅಂತರಗಟ್ಟೆ ಜಾತ್ರೆ ಅದ್ದೂರಿಯಾಗಿ ನಡೆದರೂ ಕೂಡ ಈ ರೀತಿ ಹಲವಾರು ದುರಂತಗಳು ನಡೆದಿರುವುದು ಭಕ್ತರನ್ನ ಆತಂಕಗೊಳಿಸಿದೆ.

ಇದನ್ನೂ ಓದಿ:

26 ಲಕ್ಷಕ್ಕೆ ಎತ್ತು ಖರೀದಿಸಿದ ತುರುವೇಕೆರೆ ಬಿಜೆಪಿ ಶಾಸಕ ಮಸಾಲ ಜಯರಾಮ್; ಹೋರಿ ವಿಡಿಯೋ ಇಲ್ಲಿದೆ ನೋಡಿ

ಕೊವಿಡ್ ನಿಯಮ ಉಲ್ಲಂಘಿಸಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಿಯಾದ ಎಂಪಿ ರೇಣುಕಾಚಾರ್ಯ; ಬಳಿಕ ಕ್ಷಮೆಯಾಚನೆ

Published On - 11:17 am, Mon, 14 February 22