26 ಲಕ್ಷಕ್ಕೆ ಎತ್ತು ಖರೀದಿಸಿದ ತುರುವೇಕೆರೆ ಬಿಜೆಪಿ ಶಾಸಕ ಮಸಾಲ ಜಯರಾಮ್; ಹೋರಿ ವಿಡಿಯೋ ಇಲ್ಲಿದೆ ನೋಡಿ
ಮಂಡ್ಯ ಜಿಲ್ಲೆಯ ಬನ್ನೂರು ಗ್ರಾಮದ ರೈತ ಕೃಷ್ಣೇಗೌಡ ಎಂಬುವರಿಂದ ಶಾಸಕ ಮಸಾಲ ಜಯರಾಮ್ ಎರಡು ಎತ್ತುಗಳನ್ನ ಖರೀದಿ ಮಾಡಿದ್ದಾರೆ. ಎತ್ತುಗಳಿಗೆ ಮೂರು ವರ್ಷ.
ತುಮಕೂರು: ಒಂದು ಜೋಡಿ ಎತ್ತುಗಳಿಗೆ (ox)) ಸಾಮಾನ್ಯವಾಗಿ 1 ಲಕ್ಷ ರೂ. ಇರುತ್ತದೆ. ಹೆಚ್ಚೆಂದರೆ 2 ಲಕ್ಷ ರೂಪಾಯಿ ಇರಬಹುದು. ಆದರೆ ಶಾಸಕರೊಬ್ಬರು ಖರೀದಿಸಿದ ಎತ್ತುಗಳಿಗೆ ಬರೋಬ್ಬರಿ 26 ಲಕ್ಷ ರೂ. ಇದೆ. ತುರುವೇಕೆರೆ ಬಿಜೆಪಿ ಶಾಸಕ ಮಸಾಲ ಜಯರಾಮ್ (Masala Jayaram) 26 ಲಕ್ಷಕ್ಕೆ ಬಿತ್ತನೆ ಹೋರಿ ಖರೀದಿಸಿದ್ದಾರೆ. ಅಳಿವಿನಂಚಿನಲ್ಲಿರುವ ಹಳ್ಳಿಕಾರ್ ತಳಿಯ ಎರಡು ಎತ್ತುಗಳ ಖರೀದಿ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಬನ್ನೂರು ಗ್ರಾಮದ ರೈತ ಕೃಷ್ಣೇಗೌಡ ಎಂಬುವರಿಂದ ಶಾಸಕ ಮಸಾಲ ಜಯರಾಮ್ ಎರಡು ಎತ್ತುಗಳನ್ನ ಖರೀದಿ ಮಾಡಿದ್ದಾರೆ. ಎತ್ತುಗಳಿಗೆ ಮೂರು ವರ್ಷ.ಈಗಾಗಲೇ 6.5 ಲಕ್ಷ ರೂ. ಬೆಲೆಯ ಅಮೃತ್ ಮಹಲ್ ತಳಿ ಜೋಡಿ ಎತ್ತುಗಳನ್ನು ಶಾಸಕ ಖರೀದಿಸಿದ್ದಾರೆ. ಅಂಕಲಕೊಪ್ಪ ಗ್ರಾಮ ಶಾಸಕರ ತೋಟದಲ್ಲಿ ಜಾನುವಾರುಗಳು ಇವೆ.
ಇದನ್ನೂ ಓದಿ
ಇಟಲಿಯಲ್ಲಿ 70ರ ವೃದ್ಧೆಯ ಸಾವು 2 ವರ್ಷಗಳ ನಂತರ ಬೆಳಕಿಗೆ; ಜನರ ಅಂತರಾತ್ಮವನ್ನು ಕದಕಿದ ಘಟನೆ
ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಇಳಿಕೆ, ಸಾವಿನ ಸಂಖ್ಯೆ ಏರಿಕೆ! ನಾಳೆ ಡೆತ್ ಆಡಿಟ್ ಸಭೆ