Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಟಲಿಯಲ್ಲಿ 70ರ ವೃದ್ಧೆಯ ಸಾವು 2 ವರ್ಷಗಳ ನಂತರ ಬೆಳಕಿಗೆ; ಜನರ ಅಂತರಾತ್ಮವನ್ನು ಕದಕಿದ ಘಟನೆ

ಲೊಂಬಾರ್ಡಿಯಲ್ಲಿ ಜೋರಾಗಿ ಗಾಳಿ ಬೀಸಲಾಲರಂಭಿಸಿದಾಗ ಪ್ರದೇಶದ ಮನೆಯೊಂದರಲ್ಲಿ ವಾಸವಿದ್ದ ಜನ ನೆರವಿಗಾಗಿ ಫೋನ್ ಮಾಡಿದ ಬಳಿಕ ಅಲ್ಲಿಗೆ ತೆರಳಿದ ಪೊಲೀಸರು ಬೆರೆಟ್ಟಾಳ ಮನೆ ಮುಂದಿನ ತೋಟದಲ್ಲಿದ್ದ ನಿರ್ಲಕ್ಷಿತ ಮರಗಳನ್ನು ಉರುಳಿಸುವ ಸಂದರ್ಭದಲ್ಲಿ ಆಕೆಯ ಅವಶೇಷಗಳು ಪತ್ತೆಯಾಗಿವೆ. ಇಟಲಿ ಮಾಧ್ಯಮಗಳ ಪ್ರಕಾರ ಕಳೆದ ಎರಡೂವರೆ ವರ್ಷಗಳಿಂದ ಬೆರಟ್ಟಾಳ ನೆರೆಹೊರೆಯವರು ಆಕೆಯನ್ನು ನೋಡಿರಲಿಲ್ಲ.

ಇಟಲಿಯಲ್ಲಿ 70ರ ವೃದ್ಧೆಯ ಸಾವು 2 ವರ್ಷಗಳ ನಂತರ ಬೆಳಕಿಗೆ; ಜನರ ಅಂತರಾತ್ಮವನ್ನು ಕದಕಿದ ಘಟನೆ
ಇಟಲಿ ಪೊಲೀಸರು
Follow us
TV9 Web
| Updated By: shivaprasad.hs

Updated on: Feb 10, 2022 | 9:14 AM

ಇಟಲಿಯ ಪೊಲೀಸರಿಗೆ 70 ವರ್ಷ ವೃದ್ಧೆಯ ಸಂರಕ್ಷಿತ (mummy) ದೇಹದ ಅವಶೇಷಗಳು (remains) ಮೇಜಿನ ಮೇಲೆ ಕುಳಿತಿರುವ ಭಂಗಿಯಲ್ಲಿ ಸಿಕ್ಕಿದ್ದು ಆಕೆ ಸುಮಾರು ಎರಡು ವರ್ಷಗಳ ಹಿಂದೆ ಸತ್ತಿರಬಹುದೆಂದು ಭಾವಿಸಲಾಗಿದೆ. ವೃದ್ಧೆಯ ಅವಶೇಷಗಳು ಅಂಥ ಸ್ಥಿತಿ ಪತ್ತೆಯಾಗಿರುವುದು ಇಟಲಿಯಲ್ಲಿ (Italy) ಹಿರಿಯ ನಾಗರಿಕರಿಗೆ ಸಿಗುತ್ತಿರುವ ಆರೈಕೆ, ಕಾಳಜಿ ಬಗ್ಗೆ ಹಲವು ಪ್ರಶ್ನೆಗಳನ್ನು ಸೃಷ್ಟಿಸಿದೆ. ವೃದ್ಧೆಯ ಹೆಸರು ಮ್ಯಾರಿನೆಲ್ಲ ಬೆರೆಟ್ಟಾ (Marinelli Barretta) ಆಗಿದ್ದು ಆಕೆ ಉತ್ತರ ಇಟಲಿಯ ಲೇಕ್ ಕೊಮೋ (Lake Como) ಬಳಿಯಿರುವ ಪ್ರಿಸ್ಟನ್ನೋ ಹೆಸರಿನ ಸ್ಥಳದಲ್ಲಿದ್ದ ತನ್ನ ಸ್ವಂತ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದಳು. ಲೊಂಬಾರ್ಡಿಯಲ್ಲಿ ಜೋರಾಗಿ ಗಾಳಿ ಬೀಸಲಾಲರಂಭಿಸಿದಾಗ ಪ್ರದೇಶದ ಮನೆಯೊಂದರಲ್ಲಿ ವಾಸವಿದ್ದ ಜನ ನೆರವಿಗಾಗಿ ಫೋನ್ ಮಾಡಿದ ಬಳಿಕ ಅಲ್ಲಿಗೆ ತೆರಳಿದ ಪೊಲೀಸರು ಬೆರೆಟ್ಟಾಳ ಮನೆ ಮುಂದಿನ ತೋಟದಲ್ಲಿದ್ದ ನಿರ್ಲಕ್ಷಿತ ಮರಗಳನ್ನು ಉರುಳಿಸುವ ಸಂದರ್ಭದಲ್ಲಿ ಆಕೆಯ ಅವಶೇಷಗಳು ಪತ್ತೆಯಾಗಿವೆ. ಇಟಲಿ ಮಾಧ್ಯಮಗಳ ಪ್ರಕಾರ ಕಳೆದ ಎರಡೂವರೆ ವರ್ಷಗಳಿಂದ ಬೆರಟ್ಟಾಳ ನೆರೆಹೊರೆಯವರು ಆಕೆಯನ್ನು ನೋಡಿರಲಿಲ್ಲ.

‘ಮ್ಯಾರಿನೆಲ್ಲ ಬೆರೆಟ್ಟಾ ಅವರಿಗೆ ಕೊಮೋನಲ್ಲಿ ಸಂಭವಿಸಿದ್ದು ಮತ್ತು ಮರೆತುಹೋದ ಆಕೆಯ ಒಂಟಿತನ ನಮ್ಮ ಅಂತರಾತ್ಮಗಳಿಗೆ ಘಾಸಿಯನ್ನುಂಟು ಮಾಡುತ್ತಿದೆ,’ ಎಂದು ಇಟಲಿಯ ಸಚಿವೆ ಎಲೀನಾ ಬೊನೆಟ್ಟಿ ಪೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

‘ಒಗ್ಗಟ್ಟಿನಿಂದ ಇರಬಯಸುವ ಒಂದು ಸಮುದಾಯದ ಭಾಗವಾಗಿರುವ ನಮ್ಮ ಮೇಲೆ ಆಕೆಯ ಬದುಕನ್ನು ಸ್ಮರಿಸುವ ಒಂದು ಹೊಣೆಗಾರಿಕೆ ಇದೆ, ಯಾರನ್ನೂ ಒಬ್ಬಂಟಿಯಾಗಿರಲು ಬಿಡಬಾರದು,’ ಎಂದು ಅವರು ಹೇಳಿದ್ದಾರೆ.

ಒಂದು ವರದಿಯ ಪ್ರಕಾರ 75 ಕ್ಕಿಂತ ಜಾಸ್ತಿ ವಯಸ್ಸಿನ ಇಟಾಲಿಯನ್ ವೃದ್ಧರ ಪೈಕಿ ಶೇಕಡ 40 ರಷ್ಟು ಜನ ಒಂಟಿಯಾಗಿ ಜೀವನ ನಡೆಸುತ್ತಾರೆ. ಅವರಿಗೆ ಸಹಾಯ ಬೇಕಾದಾಗ ಮೊರೆಹೋಗಲು ಸಂಬಂಧಿಕರಾಗಲೀ ಸ್ನೇಹಿತರಾಗಲೀ ಇಲ್ಲ ಎಂದು ಅದೇ ವರದಿ ತಿಳಿಸುತ್ತದೆ.

ಇಟಲಿಯ ಅತ್ಯಂತ ಹೆಚ್ಚು ಪ್ರಸರಣ ಹೊಂದಿರುವ ದಿನಪತ್ರಿಕೆಯ ಸಂಪಾದಕೀಯದಲ್ಲಿ ಮಾಸ್ಸಿಮೋ ಗ್ರಾಮೆಲ್ಲೆನಿ ಅವರು ಬೆರೆಟ್ಟಾ, ‘ಒಂಟಿತದ ಪ್ರತೀಕವಾಗಿದ್ದರು,’ ಅಂತ ಬರೆದಿದ್ದಾರೆ.

‘ಗದ್ದಲಮಯ ವಾತಾವಾರಣದಿಂದ ಕೂಡಿರುತ್ತಿದ್ದ ಅವಿಬಾಜ್ಯ ಕುಟುಂಬಗಳ ಚಿತ್ರಣ ನಮ್ಮಲ್ಲಿನ ಕೆಲವರ ಸ್ಮೃತಿಪಟಲದಲ್ಲಿ ಇನ್ನೂ ಉಳಿದುಕೊಂಡಿದೆ. ಅದರೆ, ಆಧುನಿಕ ಕುಟುಂಬಗಳಲ್ಲಿ ಸದಸ್ಯರ ಸಂಖ್ಯೆ ಇಳಿಮುಖಗೊಂಡಿದೆ. ಜನ ಒಂಟಿಯಾಗಿ ಸಾಯುತ್ತಿದ್ದಾರೆ ಮತ್ತು ಅದಕ್ಕೂ ಕೆಟ್ಟ ಸಂಗತಿಯೆಂದರೆ ನಾವು ಒಂಟಿಯಾಗಿ ಬದುಕುತ್ತಿದ್ದೇವೆ,’ ಎಂದು ಗ್ರಾಮೆಲ್ಲೆನಿ ಬರೆದಿದ್ದಾರೆ.

2019 ರ ಸೆಪ್ಟೆಂಬರ್ ನಲ್ಲಿ ಬೆರೆಟ್ಟಾರನ್ನು ಕೊನೆಯ ಬಾರಿಗೆ ನೋಡಿದ್ದ ಆಕೆಯ ನೆರೆಹೊರೆಯವರು ಕೊರೋನಾ ವೈರಸ್ ಪಿಡುಗಿನಿಂದಾಗಿ ಆಕೆ ಮತ್ತೊಂದು ಸ್ಥಳಕ್ಕೆ ಹೋಗಿರಬಹುದೆಂದು ಭಾವಿಸಿದ್ದರಂತೆ. 2020ರಲ್ಲಿ ಕೊರೋನಾ ಉತ್ತರ ಇಟಲಿಯಲ್ಲಿ ಮರಣ ಮೃದಂಗ ನಡೆಸಿತ್ತು.

ಬೆರೆಟ್ಟಾಳ ಸಾವು ಅಸಹಜವಾಗಿರಬಹುದೇ ಎನ್ನುವುದನ್ನು ಪುಷ್ಠೀಕರಿಸಲು ಸ್ಥಳದಲ್ಲಿ ಅನುಮಾನ ಹುಟ್ಟಿಸುವ ಯಾವುದೇ ವಸ್ತು ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆಕೆಯ ಅಂತ್ಯಸಂಸ್ಕಾರದ ವೆಚ್ಚವನ್ನು ಸ್ಥಳೀಯ ಆಡಳಿತ ಭರಿಸಲಿದೆ.

‘ತಮ್ಮ ಮುಚ್ಚಿದ ಕಾಟೇಜ್ ನೊಳಗೆ ಮಾರಿನೆಲ್ಲ ಬೆರೆಟ್ಟಾ ಅವರ ಅಗೋಚರ ಬದುಕಿನ ವಿಸ್ಮಯ ನಮಗೆ ಒಂದು ಭಯಾನಕ ಪಾಠವನ್ನು ಹೇಳುತ್ತದೆ,’ ಎಂದು ಮೆಸ್ಸೆಗೆರೊ ದಿನಪತ್ರಿಕೆ ಹೇಳಿದೆ.

‘ಬೆರೆಟ್ಟಾ ಸತ್ತಿದ್ದು ಯಾರಿಗೂ ಗೊತ್ತಾಗದೆ ಹೋಗಿದ್ದು ನಿಜವಾದ ವಿಷಾದಕರ ಮತ್ತು ದುಃಖಕರ ಸಂಗತಿ ಅಲ್ಲ, ಆಕೆ ಬದುಕಿದ್ದಾಗ ಯಾರ ಗಮನಕ್ಕೂ ಬಾರದೆಹೋಗಿದ್ದೇ ದುರಂತ,’ ಎಂದು ಪತ್ರಿಕೆಯಲ್ಲಿ ಬರೆಯಲಾಗಿದೆ.

ಇದನ್ನೂ ಓದಿ:   ಇಟಲಿಯಿಂದ ಅಮೃತ​ಸರ​ಕ್ಕೆ ಬಂದ ವಿಮಾನದಲ್ಲಿದ್ದ 125 ಪ್ರಯಾಣಿಕರಿಗೆ ಕೊರೊನಾ ಸೋಂಕು ಎಂಬುದು ಸುಳ್ಳು ಸುದ್ದಿ: ಏರ್​ ಇಂಡಿಯಾ ಸ್ಪಷ್ಟನೆ

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ