Datta peeta: ಚಿಕ್ಕಮಗಳೂರು ದತ್ತಪೀಠದ ಹೋಮ ಮಂಟಪದಲ್ಲೇ ಮಾಂಸಹಾರದ ಊಟ, ಹಿಂದೂ ಭಾವನೆಗಳಿಗೆ ಧಕ್ಕೆ

Meat consumption: ಚಿಕ್ಕಮಗಳೂರು -ಇಲ್ಲಿನ ಐತಿಹಾಸಿಕ ದತ್ತಪೀಠದ ಆವರಣದಲ್ಲಿರುವ ಹೋಮ ಮಂಟಪದಲ್ಲಿಯೇ ಮತ್ತೆ ಮಾಂಸಹಾರದ ಊಟ ಮಾಡಲಾಗಿದೆ.

Datta peeta: ಚಿಕ್ಕಮಗಳೂರು ದತ್ತಪೀಠದ ಹೋಮ ಮಂಟಪದಲ್ಲೇ ಮಾಂಸಹಾರದ ಊಟ, ಹಿಂದೂ ಭಾವನೆಗಳಿಗೆ ಧಕ್ಕೆ
ದತ್ತಪೀಠದ ಹೋಮ ಮಂಟಪದಲ್ಲೇ ಮಾಂಸಹಾರದ ಊಟ, ಹಿಂದೂ ಭಾವನೆಗಳಿಗೆ ಧಕ್ಕೆ
Edited By:

Updated on: Oct 08, 2022 | 3:03 PM

ಚಿಕ್ಕಮಗಳೂರು: ಇಲ್ಲಿನ ಐತಿಹಾಸಿಕ ದತ್ತಪೀಠದ ಆವರಣದಲ್ಲಿರುವ ಹೋಮ ಮಂಟಪದಲ್ಲಿಯೇ ಮತ್ತೆ ಮಾಂಸಹಾರದ ಊಟ  (Meat consumption) ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಭಾವೈಕ್ಯತೆ ಕೇಂದ್ರದಲ್ಲಿ (chikmagalur datta peeta) ಹೀಗೆ ಮತ್ತೆ ಹಿಂದೂಗಳ (Hindus) ಭಾವನೆಗಳಿಗೆ ಧಕ್ಕೆ ಮಾಡಿರುವುದರಿಂದ ಹಿಂದೂ ಸಂಘಟನೆ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವೇ ಕ್ರಮ ಕೈಗೊಳ್ತೀವಿ ಎಂದೂ ಹಿಂದೂ ಬ್ರಿಗೇಡ್ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯದಿಂದ ಹೋಮ ಮಂಟಪದಲ್ಲಿ ಮಾಂಸಾಹಾರ ಸೇವನೆಯಾಗಿದೆ. ಪೀಠದ ಆವರಣದ ಪಕ್ಕದಲ್ಲೇ ಹೋಮಕ್ಕೆಂದು ನಿರ್ಮಿಸಿರುವ ತಾತ್ಕಾಲಿಕ ಶೆಡ್ ನಲ್ಲಿ ಮಾಂಸಾಹಾರ ಮಾಡಲಾಗಿದೆ. ಆರು ತಿಂಗಳ ಹಿಂದೆಯೂ ಇದೇ ಮಂಟಪದಲ್ಲಿ ಬಿರಿಯಾನಿ ಮಾಡಿದ್ದರು. ಆದರೆ ಕ್ರಮ ಕೈಗೊಳ್ಳುತ್ತೇವೆಂದು ಹೇಳಿ ಜಿಲ್ಲಾಡಳಿತ ಸುಮ್ಮನಾಗಿದೆ ಎಂದು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈದ್ ನೆಪದಲ್ಲಿ ವೃತ್ತಕ್ಕೆ ಹಸಿರು ಬಟ್ಟೆ ಅಲಂಕಾರ! ಪರಿಸ್ಥಿತಿಯ ಗಂಭೀರತೆ ಅರಿತು ಹಸಿರು ಬಟ್ಟೆ ತೆರವು ಮಾಡಿದ ಪೊಲೀಸರು

ಮಂಗಳೂರು: ಇಸ್ಲಾಂನ ಕೊನೆಯ ಪ್ರವಾದಿ ಹಜರತ್ ಮುಹಮ್ಮದ್ ಜನಿಸಿದ ದಿನದ ಅಂಗವಾಗಿ ಅಕ್ಟೋಬರ್ 9ರಂದು ಮುಸ್ಲೀಮರು ಈದ್ ಮಿಲಾದ್ ಹಬ್ಬವನ್ನು ಆಚರಿಸುತ್ತಾರೆ. ಹಬ್ಬದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲದ ಸಂದೀಪ್ ಉನ್ನಿಕೃಷ್ಣನ್ ವೃತ್ತಕ್ಕೆ ಹಸಿರು ಬಟ್ಟೆ ಹೊದಿಸಿ ತಯಾರಿ ಮಾಡಿಕೊಳ್ಳಲಾಗಿದೆ. ಆದ್ರೆ ಹಸಿರು ಬಟ್ಟೆ ಹೊದಿಕೆಗೆ ಭಾರಿ ವಿರೋಧ ವ್ಯಕ್ತವಾಗಿದೆ.

ಈದ್ ಮಿಲಾದ್ ಹಬ್ಬದ ಹಿನ್ನೆಲೆ ವೀರ ಸೈನಿಕನ ಹೆಸರಿನ ವೃತ್ತಕ್ಕೆ ಹಸಿರು ಬಟ್ಟೆ ಮತ್ತು ಹಸಿರು ಬಾವುಟ ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಹಸಿರು ಬಟ್ಟೆ ತೆಗೆಯಲು ಹಿಂದೂ ಪರ ಸಂಘಟನೆಗಳು ಆಗ್ರಹಿಸಿವೆ. ಅಧಿಕಾರಿಗಳು ತಕ್ಷಣ ಪರಿಸ್ಥಿತಿ ಗಂಭೀರತೆ ಅರಿತು ಹಸಿರು ಬಟ್ಟೆ ತೆರವು ಮಾಡಿದ್ದಾರೆ. ಸದ್ಯ ಹಸಿರು ಬಟ್ಟೆ ತೆರವು ಮಾಡಿ ಪೊಲೀಸರು ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಸಂಪ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published On - 2:09 pm, Sat, 8 October 22