ಸಮಸ್ಯೆ ಬಗೆಹರಿಸೋ ಭಗವಂತ: ಅಯೋಧ್ಯೆ ರಾಮನಿಗೆ ಮಲೆನಾಡಿಗರಿಂದ ಅಡಿಕೆ ಹಿಂಗಾರ ಸಮರ್ಪಣೆ

ಹಳದಿ ಎಲೆ ರೋಗ, ಕಸ್ತೂರಿ ರಂಗನ್ ವರದಿ, ಬಫರ್ ಜೋನ್, ಮೀಸಲು ಅರಣ್ಯದ ಹೆಸರಲ್ಲಿ ಆಳುವ ವರ್ಗ ಯೋಚಿಸದೆ ಕಾನೂನಿನ ಕುಣಿಕೆಗೆ ಬೆಲೆ ತೆರುವಂತಾಗಿದೆ. ಕೃಷಿಯನ್ನೇ ನಂಬಿ ಜೀವನ ಅಂದುಕೊಂಡವರ ಜೀವನ ಉಳಿಯಲಿ ಎಂಬ ಭಿನ್ನಹ ಪತ್ರದೊಂದಿಗೆ ಚಿಕ್ಕಮಗಳೂರಿನ ಅಡಿಕೆ ಕೃಷಿಕರು ಅಯೋಧ್ಯೆ ಶ್ರೀರಾಮನಿಗೆ ಮಲೆನಾಡಿನ ಅಡಿಕೆ ಹಿಂಗಾರ ಸರ್ಮಪಿಸಲು ಮುಂದಾಗಿದ್ದಾರೆ.

ಸಮಸ್ಯೆ ಬಗೆಹರಿಸೋ ಭಗವಂತ: ಅಯೋಧ್ಯೆ ರಾಮನಿಗೆ ಮಲೆನಾಡಿಗರಿಂದ ಅಡಿಕೆ ಹಿಂಗಾರ ಸಮರ್ಪಣೆ
ಸಮಸ್ಯೆ ಬಗೆಹರಿಸುವಂತೆ ಅಯೋಧ್ಯೆ ರಾಮನಿಗೆ ಅಡಿಕೆ ಹಿಂಗಾರ ಸಮರ್ಪಣೆಗೆ ಮುಂದಾದ ಚಿಕ್ಕಮಗಳೂರಿನ ಅಡಿಕೆ ಬೆಳೆಗಾರರು
Updated By: Rakesh Nayak Manchi

Updated on: Feb 18, 2024 | 5:49 PM

ಚಿಕ್ಕಮಗಳೂರು, ಫೆ.18: ಬಾಳೆಹೊನ್ನೂರಿನ ಖಾಂಡ್ಯ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ “ನಮ್ಮ ಸಮಸ್ಯೆ ಬಗೆಹರಿಸೋ ಭಗವಂತ” ಎಂದು ವಿಶೇಷ ಪೂಜೆ ಸಲ್ಲಿಸಿದ ಚಿಕ್ಕಮಗಳೂರಿನ (Chikkamagalur) ಅಡಿಕೆ ಕೃಷಿಕರು, ಅಯೋಧ್ಯೆ ಶ್ರೀರಾಮನಿಗೆ (Ayodhya Ram) ಮಲೆನಾಡಿನ ಅಡಿಕೆ ಹಿಂಗಾರ ಸಮರ್ಪಣೆ ಮಾಡಲು ಮುಂದಾಗಿದ್ದಾರೆ.

ಹಳದಿ ಎಲೆ ರೋಗ, ಕಸ್ತೂರಿ ರಂಗನ್ ವರದಿ, ಬಫರ್ ಜೋನ್, ಮೀಸಲು ಅರಣ್ಯದ ಹೆಸರಲ್ಲಿ ಆಳುವ ವರ್ಗ ಯೋಚಿಸದೆ ಕಾನೂನಿನ ಕುಣಿಕೆಗೆ ಬೆಲೆ ತೆರುವಂತಾಗಿದೆ. ಕೃಷಿಯನ್ನೇ ನಂಬಿ ಜೀವನ ಅಂದುಕೊಂಡವರ ಜೀವನ ಉಳಿಯಲಿ ಎಂಬ ಭಿನ್ನಹ ಪತ್ರದೊಂದಿಗೆ ಅಡಿಕೆ ಹಿಂಗಾರ ಸರ್ಮಪಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ರಾಮ ಮಂದಿರ ನಿರ್ಮಾಣದಿಂದ ಬಡತನ ನಿರ್ಮೂಲನೆ ಆಗಲ್ಲ: ಸಂತೋಷ್ ಲಾಡ್

ನಾಳೆ ಅಥವಾ ನಾಡಿದ್ದು ರಾಮಲಲ್ಲನಿಗೆ ಮಲೆನಾಡ ಅಡಿಕೆ ಹಿಂಗಾರ ಸಮರ್ಪಣೆ ಮಾಡಲು ಮಲೆನಾಡಿಗರು ಅಯೋಧ್ಯೆಗೆ ಭಿನ್ನಹ ಪತ್ರದೊಂದಿಗೆ ಅಡಿಕೆ ಹಿಂಗಾರ ಕೊಂಡೊಯ್ದಿದ್ದಾರೆ. ಆ ಮೂಲಕ ಮಲೆ‌ನಾಡ ಕೃಷಿಕರ ಪ್ರಮುಖ ಸಮಸ್ಯೆಗಳ ನಿವಾರಣೆಗಾಗಿ ಆಯೋಧ್ಯ ಶ್ರೀರಾಮ ಮೊರೆಹೋಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ