ಚಿಕ್ಕಮಗಳೂರಿನ ಇತಿಹಾಸ ಪ್ರಸಿದ್ಧ ಮೈಲಾರಲಿಂಗನ ಕಾರ್ಣಿಕ: “ಸರ್ವರು ಎಚ್ಚರದಿಂದರಬೇಕು ಪರಾಕ್”

| Updated By: Digi Tech Desk

Updated on: Oct 25, 2023 | 10:42 AM

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೀರೂರಿನ ಸ್ವರಸ್ವತಿಪುರಣನಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಶ್ರೀ ಮೈಲಾರಲಿಂಗಸ್ವಾಮಿಯ ಕಾರ್ಣಿಕವನ್ನು ಗೊರವಯ್ಯಾ ದಶರಥ ಪೂಜಾರ್ ಅವರು ಮುಂಜಾನೆ 4.45ಕ್ಕೆ ನುಡಿದಿದ್ದಾರೆ.

ಚಿಕ್ಕಮಗಳೂರು ಅ.25: “ಇಟ್ಟ ರಾಮನ ಬಾಣ ಹುಸಿಯಿಲ್ಲ. ಸುರರು ಅಸೂರರು ಕಾದಾಡಿದರು. ಭಕ್ತ ಕೋಟಿಗೆ ಮಂಗಳವಾಯಿತು. ಶಾಂತಿಯ ಮಂತ್ರ ಪಠಿಸಿದರು. ಸರ್ವರು ಎಚ್ಚರದಿಂದರಬೇಕು ಪರಾಕ್”. ಎಂದು ಚಿಕ್ಕಮಗಳೂರಿನಲ್ಲಿ (Chikkamagaluru) ಮೈಲಾರಿಗೇಶ್ವರ (Mailarlingeshwar) ಸ್ವಾಮಿಯ ಕಾರ್ಣಿಕ ನುಡಿದಿದೆ. ಈ ನುಡಿಗಳು ಯಾವುದಕ್ಕೆ ಸಂಬಂಧಿಸಿದ್ದು ಎಂದು ಜನರಲ್ಲಿ ಚರ್ಚೆ ಶುರುವಾಗಿದೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೀರೂರಿನ ಸ್ವರಸ್ವತಿಪುರಣನಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಶ್ರೀ ಮೈಲಾರಲಿಂಗಸ್ವಾಮಿಯ ಕಾರ್ಣಿಕವನ್ನು ಗೊರವಯ್ಯಾ ದಶರಥ ಪೂಜಾರ್ ಅವರು ಮುಂಜಾನೆ 4.45ಕ್ಕೆ ನುಡಿದಿದ್ದಾರೆ. ರಾತ್ರಿಯಿಂದ ಬೆಳಗಿನ ಜಾವದವರೆಗೆ ಹೂವಿನ ಪಲಕ್ಕಿಯೊಂದಿಗೆ ಮೈಲಾರಲಿಂಗ ಸ್ವಾಮಿಯ ಮೆರವಣಿಗೆ ನಡೆಯಿತು.

ಇದನ್ನೂ ಓದಿ: ಒಂದು ಹೆಣ್ಣಿನ ಹಸ್ತಕ್ಷೇಪದಿಂದ ರಾಜ್ಯ ರಾಜಕೀಯ ಏರುಪೇರಾಗುವ ಸಾಧ್ಯತೆ: ದೇವರಗುಡ್ಡ ಕಾರ್ಣಿಕ ನುಡಿ

ಬುಧವಾರ ಬೆಳಗಿನ ಜಾವ 4:45ಕ್ಕೆ ಇಲ್ಲಿ ಮಹಾನವಮಿ ಬಯಲಿನಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬೆಣ್ಣೆ ಮೆತ್ತಿದ ದೊಡ್ಡಬಿಲ್ಲಯ್ಯನನ್ನ ಏರಿದ ಗೊರವಯ್ಯಾ ದಶರಥ ಪೂಜಾರರು ಕಾರ್ಣಿಕದ ನುಡಿಗಳನ್ನಾಡಿದರು. ಮೈಲಾರಲಿಂಗಸ್ವಾಮಿಯ ದೇವರ ಕಾರ್ಣಿಕೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:07 am, Wed, 25 October 23