ಚಿಕ್ಕಮಗಳೂರು: ಮಟನ್​​​ ಎಂದು ಗೋಮಾಂಸದ ಊಟ ಸರ್ವ್ ಮಾಡುತ್ತಿದ್ದ​​ ಹೋಟೆಲ್​​ಗಳ ಮೇಲೆ ಪೊಲೀಸರ ದಾಳಿ

| Updated By: ವಿವೇಕ ಬಿರಾದಾರ

Updated on: Aug 30, 2023 | 3:03 PM

ಮಟನ್​ ಊಟವೆಂದು, ಗೋ ಮಾಂಸದ ಊಟ ನೀಡುತ್ತಿದ್ದ ಚಿಕ್ಕಮಗಳೂರು ನಗರದ ಪ್ರತಿಷ್ಠಿತ ಹೋಟೆಲ್​ಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಸದ್ಯ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಎವರೆಸ್ಟ್ ಹೋಟೆಲ್ ಮಾಲೀಕ ಲತೀಫ್ ಮತ್ತು ಬೆಂಗಳೂರಿನ ಹೋಟೆಲ್ ಮಾಲೀಕ ಶಿವರಾಜ್ ಅವರನ್ನು ಬಂಧಿಸಿದ್ದಾರೆ.

ಚಿಕ್ಕಮಗಳೂರು: ಮಟನ್​​​ ಎಂದು ಗೋಮಾಂಸದ ಊಟ ಸರ್ವ್ ಮಾಡುತ್ತಿದ್ದ​​ ಹೋಟೆಲ್​​ಗಳ ಮೇಲೆ ಪೊಲೀಸರ ದಾಳಿ
ವಶಪಡಿಸಿಕೊಳ್ಳಲಾದ ಮಾಂಸ
Follow us on

ಚಿಕ್ಕಮಗಳೂರು: ನಗರದ ಪ್ರತಿಷ್ಠಿತ ಹೋಟೆಲ್​ಗಳ (Hotel) ಮೇಲೆ ದಾಳಿ ಮಾಡಿ ಪೊಲೀಸರು ಗೋಮಾಂಸದ (Beef) ಖಾದ್ಯ ವಶಪಡಿಸಿಕೊಂಡಿದ್ದಾರೆ. ಚಿಕ್ಕಮಗಳೂರು (Chikkamagaluru) ನಗರದ ಬೆಂಗಳೂರು ಹೋಟೆಲ್, ಎವರೆಸ್ಟ್ ಹೋಟೆಲ್​ಗಳು ಮಟನ್ ಬದಲು ಗೋಮಾಂಸದ ಖಾದ್ಯಗಳನ್ನ ನೀಡುತ್ತಿದ್ದವು ಎಂಬ ಆರೋಪ ಕೇಳಿಬಂದಿದೆ. ಸದ್ಯ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಎವರೆಸ್ಟ್ ಹೋಟೆಲ್ ಮಾಲೀಕ ಲತೀಫ್ ಮತ್ತು ಬೆಂಗಳೂರಿನ ಹೋಟೆಲ್ ಮಾಲೀಕ ಶಿವರಾಜ್ ಅವರನ್ನು ಬಂಧಿಸಿದ್ದಾರೆ. ಚಿಕ್ಕಮಗಳೂರು ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಚಿಕ್ಕಮಗಳೂರು ನಗರದ ಅಂಬೇಡ್ಕರ್ ರಸ್ತೆಯಲ್ಲಿರುವ ನ್ಯಾಮತ್ ಹೋಟೆಲ್‌ನಲ್ಲಿ ಸಂಗ್ರಹಿಸಲಾಗಿದ್ದ 20 ಕೆಜಿ ಗೋಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸತೀಶ್ ನೇತೃತ್ವದಲ್ಲಿ ದಾಳಿ ನಡೆದಿದೆ. ಹೊಟೇಲ್ ಮಾಲೀಕ ಇರ್ಷಾದ್ ಅಹಮದ್ ನನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಕದ್ದ ಹಣ ವಾಪಸ್ ನೀಡಲು 1500 ರೂ ಸಾಲ: ತೀರಿಸಲಾಗದೇ ಪ್ರಾಣ ಕಳೆದುಕೊಂಡ 9ನೇ ಕ್ಲಾಸ್ ವಿದ್ಯಾರ್ಥಿ

ಜೂನ್‌ನಲ್ಲಿ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಹಾಸನದಿಂದ ನಗರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 140 ಕೆಜಿ ಗೋಮಾಂಸವನ್ನು ಚಿಕ್ಕಮಗಳೂರು ಪೊಲೀಸರು ವಶಪಡಿಸಿಕೊಂಡಿದ್ದರು. ಹಾಸನ ನಿವಾಸಿಗಳಾದ ಜಾಫರ್ ಉಮರ್ ಮತ್ತು ಮೊಹಮ್ಮದ್ ಮೊಹಲ್ಲಾ ಎಂಬುವರನ್ನು ಪೊಲೀಸರು ಬಂಧಿಸಿ, ದನದ ಮಾಂಸದೊಂದಿಗೆ ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದರು.

2021ರಲ್ಲಿ ಅಂದಿನ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಕಾಯ್ದೆ ಪ್ರಕಾರ (ಹಸು, ಎತ್ತು, ಎತ್ತು) ಸಾಗಣೆ, ವಧೆ ಮತ್ತು ವ್ಯಾಪಾರವು ಕಾನೂನುಬಾಹಿರವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:02 pm, Wed, 30 August 23