ಚಿಕ್ಕಮಗಳೂರು: ಕದ್ದ ಹಣ ವಾಪಸ್ ನೀಡಲು 1500 ರೂ ಸಾಲ: ತೀರಿಸಲಾಗದೇ ಪ್ರಾಣ ಕಳೆದುಕೊಂಡ 9ನೇ ಕ್ಲಾಸ್ ವಿದ್ಯಾರ್ಥಿ

ಕದ್ದ ಹಣ ವಾಪಸ್ ನೀಡಲು 1500 ರೂ ಸಾಲ ಮಾಡಿ ಅದನ್ನು ತೀರಿಸಲಾಗದೇ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಆಗಸ್ಟ್ 22ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದ BGS ಖಾಸಗಿ ಶಾಲೆಯಲ್ಲಿ ನಡೆದಿದೆ. ಹಾಸ್ಟೆಲ್ ವಿರುದ್ಧ ದೂರು ದಾಖಲಾಗಿದ್ದು, ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಪೋಷಕರು ಕಣ್ಣಿರು ಹಾಕಿದ್ದಾರೆ.

ಚಿಕ್ಕಮಗಳೂರು: ಕದ್ದ ಹಣ ವಾಪಸ್ ನೀಡಲು 1500 ರೂ ಸಾಲ: ತೀರಿಸಲಾಗದೇ ಪ್ರಾಣ ಕಳೆದುಕೊಂಡ 9ನೇ ಕ್ಲಾಸ್ ವಿದ್ಯಾರ್ಥಿ
ಮೃತ ವಿದ್ಯಾರ್ಥಿ ಶ್ರೀನಿವಾಸ್
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಗಂಗಾಧರ​ ಬ. ಸಾಬೋಜಿ

Updated on:Aug 28, 2023 | 4:59 PM

ಚಿಕ್ಕಮಗಳೂರು, ಆಗಸ್ಟ್​ 28: ಕೇವಲ 1500 ರೂಪಾಯಿ ಸಾಲಕ್ಕೆ ಮನನೊಂದು ವಿದ್ಯಾರ್ಥಿ (student) ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಆಗಸ್ಟ್ 22ರಂದು ಜಿಲ್ಲೆಯ ಕೊಪ್ಪ ಪಟ್ಟಣದ BGS ಖಾಸಗಿ ಶಾಲೆಯಲ್ಲಿ ನಡೆದಿದೆ. ಅಜ್ಜಂಪುರ ತಾಲೂಕಿನ ಹಿರೇಬಳ್ಳೇಕೆರೆ ಗ್ರಾಮದ 9ನೇ ತರಗತಿಯ ಶ್ರೀನಿವಾಸ್ (14) ಮೃತ ವಿದ್ಯಾರ್ಥಿ. ಸ್ಮಾರ್ಟ್​ ವಾಚ್ ಖರೀದಿಗೆ ಹಾಸ್ಟೆಲ್ ವಾರ್ಡನ್​ನಿಂದ ಎರಡು ಸಾವಿರ ರೂ. ಹಣ ಕಳ್ಳತನ ಮಾಡಿ ಸಿಕ್ಕಿ ಬಿದ್ದಿದ್ದ. ಹಾಸ್ಟೆಲ್ ವಾರ್ಡನ್​ಗೆ ಹಣ ಹಿಂತಿರುಗಿಸಲು ಮೃತ ಶ್ರೀನಿವಾಸ್​ ತನ್ನ ಸ್ನೇಹಿತರಿಂದ 1500 ರೂ. ಸಾಲ ಮಾಡಿ ಮಾಡಿದ್ದಾನೆ. ವಾಪಸ್ಸು ಸಾಲ ನೀಡಲಾಗದೆ ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ಆತ್ಮಹತ್ಯೆ ರಹಸ್ಯ ಬಯಲಾಗಿದೆ.

ಮೃತ ಶ್ರೀನಿವಾಸ್​ ನಿವೃತ್ತ ಯೋಧ ರಮೇಶಪ್ಪ ಅವರ ಪುತ್ರ. ಶ್ರೀನಿವಾಸ್​​ಗೆ ಸಾಲ ಕೊಟ್ಟ ಸ್ನೇಹಿತರೂ ಸಹ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು, ವಿದ್ಯಾರ್ಥಿ ಬರೆದಿಟ್ಟ ಡೆತ್ ನೋಟ್ ಏಕಾಏಕಿ ವೈರಲ್​ ಆಗಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ; ಕೊಲೆಗೆ ಕಾರಣವಾಯ್ತಾ ಪ್ರಿಯಕರನ ಮದುವೆ?

ಸದ್ಯ ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ತಂದೆ-ತಾಯಿ ಕಣ್ಣೀರು ಹಾಕಿದ್ದಾರೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಹಾಸ್ಟೆಲ್ ವಿರುದ್ಧ ದೂರು ದಾಖಲಾಗಿದೆ ಎಂದು ಟಿವಿ9ಗೆ ಪೊಲೀಸ್ ಮೂಲಗಳು ತಿಳಿಸಿವೆ.

ಮೃತ ಶ್ರೀನಿವಾಸ್ ತಂದೆ ಹೇಳಿದ್ದಿಷ್ಟು

ಟಿವಿ9ಗೆ ಮೃತ ಯುವಕನ ತಂದೆ ರಮೇಶ್​ಯಪ್ಪ ಪ್ರತಿಕ್ರಿಯೆ ನೀಡಿದ್ದು, ನನ್ನ ಮಗನ ಸಾವಿನ ಬಗ್ಗೆ ಅನುಮಾನ ಹುಟ್ಟಿದೆ. ನನ್ನ ಮಗನ ಸಾವಿನ ಬಗ್ಗೆ ನಾನು ಶಾಲೆ ಮೇಲೆ ಆರೋಪ ಮಾಡುವುದಿಲ್ಲ. ನನ್ನ ಮಗ ಡೇತ್ ನೋಟ್​ ಬರೆದಿದ್ದಾನೆ ಅದರ ಬಗ್ಗೆ ನನಗೆ ಮಾಹಿತಿ ನೀಡಿಲ್ಲ.

ಇದನ್ನೂ ಓದಿ: Chikkamagaluru News: ಚಿಕ್ಕಮಗಳೂರು: ಎತ್ತು ತಿವಿದು ಯುವ ರೈತ ಸಾವು

ಶಾಲೆಯವನ್ನ ಕೇಳಿದರೆ ಸಾವಿನ ಬಗ್ಗೆ ಗೊತ್ತಿಲ್ಲ ತನಿಖೆ ನಡೆಯುತ್ತಿದೆ. ನನ್ನ ಮಗ ಬರೆದ ಡೆತ್ ನೋಟ್​​ನಲ್ಲಿ ಆಂಟಿ ಅಂತ ಇದೆ, ಅವರು ಯಾರು ಅಂತ ಗೊತ್ತಾಗಬೇಕಿದೆ. ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕು ಎಂದಿದ್ದಾರೆ.

ಎಸ್ಪಿ ವಿಕ್ರಮ ಅಮ್ಟೆ ಹೇಳಿದ್ದಿಷ್ಟು

ಟಿವಿ9ಗೆ ಚಿಕ್ಕಮಗಳೂರು ಎಸ್ಪಿ ವಿಕ್ರಮ ಅಮ್ಟೆ ಹೇಳಿಕೆ ನೀಡಿದ್ದು, ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಹಾಸ್ಟೆಲ್​ನಲ್ಲಿ ಕೆಲಸ ಮಾಡುವ ಓರ್ವರ ವಿರುದ್ಧ ದೂರು ನೀಡಿದ್ದಾರೆ. ಮೂವರ ವಿರುದ್ಧ ಅನುಮಾನ ವ್ಯಕ್ತಪಡಿಸಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ತಾಯಿ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಕೊಪ್ಪ ಪೊಲೀಸ್ ಠಾಣೆಯಲ್ಲಿ 306 ಅಡಿ ಪ್ರಕರಣ ದಾಖಲಾಗಿದೆ. ಡೆತ್ ನೋಟ್​ನಲ್ಲಿ ಮೂವರ ಹೆಸರನ್ನ ಬರೆದಿದ್ದಾನೆ. ಕೊಪ್ಪ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:02 pm, Mon, 28 August 23