AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರು: ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ; ಕೊಲೆಗೆ ಕಾರಣವಾಯ್ತಾ ಪ್ರಿಯಕರನ ಮದುವೆ?

ಮೂರು ತಿಂಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ನೆಮ್ಮಾರಿನ ಮಹಿಳೆಯೊಬ್ಬರು ಕಾಣೆಯಾಗಿದ್ದರು. ಈ ಕುರಿತು ಆಕೆಯ ಮಕ್ಕಳು ತಾಯಿಯನ್ನು ಹುಡುಕಿ ಕೊಡುವಂತೆ ಶೃಂಗೇರಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದರು. ಇದೀಗ ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ. ಕೊಲೆಗೆ ಕಾರಣವನ್ನು ಪೊಲೀಸರು ಭೇಧಿಸಿದ್ದು, ಕಾರಣ ಇಲ್ಲಿದೆ.

ಚಿಕ್ಕಮಗಳೂರು: ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ; ಕೊಲೆಗೆ ಕಾರಣವಾಯ್ತಾ ಪ್ರಿಯಕರನ ಮದುವೆ?
ಮೃತ ಮಹಿಳೆ, ಆರೋಪಿ
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on: Aug 22, 2023 | 10:38 PM

Share

ಚಿಕ್ಕಮಗಳೂರು, ಆ.22: ಈ ಫೋಟೋದಲ್ಲಿರುವ ಮಹಿಳೆಯ ಹೆಸರು ವಾಸಂತಿ. ಮೂಲತಃ ಶೃಂಗೇರಿಯ (Sringeri) ನೆಮ್ಮಾರಿನವರು. ಇವರು ಮಾರ್ಚ್​ನಲ್ಲಿ ನಾಪತ್ತೆಯಾಗಿದ್ದರು. ಆದಾದ ನಂತರ ಮಹಿಳೆ ಏನಾದರು ಎನ್ನುವುದು ಆ ಕುಟುಂಬದವರಿಗೆ ಗೊತ್ತಿರಲಿಲ್ಲ. ಇನ್ನು ಆಕೆಯ ಗಂಡ ಕೂಡ ಮರಣಹೊಂದಿ 15 ವರ್ಷ ಅಗಿತ್ತು. ಇವರಿಗೆ ಇಬ್ಬರೂ ಮಕ್ಕಳಿದ್ದು, ಮಾರ್ಚ್​ನಲ್ಲಿ ನಾಪತ್ತೆಯಾದವಳನ್ನು ಹುಡುಕಾಟ ನಡೆಸಿದ್ದ ಮಕ್ಕಳು, ಶೃಂಗೇರಿ ಪೊಲೀಸರ ಮೊರೆ ಹೋಗಿದ್ದರು.

ಅಮ್ಮನನ್ನು ಹುಡುಕಿಕೊಡುವಂತೆ ದೂರು ಕೊಟ್ಟಿದ್ದ ಮಕ್ಕಳು

ನಮ್ಮ ತಾಯಿ ಕಳೆದು ಹೋಗಿದ್ದಾರೆ ಎಂದು ಶೃಂಗೇರಿ ಠಾಣೆಗೆ ಆಕೆಯ ಮಕ್ಕಳು ದೂರು ಕೊಟ್ಟಿದ್ದರು. ಬಳಿಕ ಕಂಪ್ಲೀಟ್ ಡೀಟೆಲ್ಸ್​ ಪಡೆದುಕೊಂಡ ಪೊಲೀಸರು ಪತ್ತೆ ಹಚ್ಚುವ ಭರವಸೆಯನ್ನು ಕೊಟ್ಟು, ಇನ್ವೆಸ್ಟಿಗೇಷನ್ ಶುರುಮಾಡುತ್ತಾರೆ. ಆಕೆಯ ಪೋನ್ ನಂಬರ್​ನ ಜಾಡು ಹಿಡಿದು ಹೊರಟ್ಟವರಿಗೆ ಒಂದು ಯುವಕನ ಹೆಸರು ಸಿಗುತ್ತದೆ. ಹೌದು, ಇತನ ಹೆಸರು ಕಳಸ ಮೂಲದ ಪ್ರಕಾಶ್, ಇತ ಮತ್ತು ಕಾಣೆಯಾದ ಮಹಿಳೆಯ ನಡುವೆ ಲವ್ವಿಡವ್ವಿ ಶುರುವಾಗಿರುತ್ತದೆ.

ಇದನ್ನೂ ಓದಿ:ಮಡಿಕೇರಿಯಿಂದ ನಾಪತ್ತೆಯಾಗಿದ್ದ ಇಬ್ಬರು ಯುವತಿಯರು ಮಲ್ಪೆ ಬಳಿ ನೀರುಪಾಲು; ಆಪತ್ಬಾಂಧವ ಸಿಬ್ಬಂದಿ ಈಶ್ವರ್​ನಿಂದ ಓರ್ವ ಯುವತಿಯ ರಕ್ಷಣೆ

ಪ್ರೇಮಿಯಿಂದಲೇ ಕೊಲೆಯಾದ ಮಹಿಳೆ

ಪ್ರಕಾಶನಿಗೂ ಹಾಗೂ ಕಾಣೆಯಾಗಿದ್ದ ಮಹಿಳೆ ವಾಸಂತಿ ಇಬ್ಬರು ಚೆನ್ನಾಗಿಯೇ ಇದ್ದರು. ಆದರೆ, ಆಕೆಗೆ ಪ್ರಕಾಶ ಯಾವಾಗ ಮದುವೆಯಾಗಿದ್ದಾನೆ ಎಂದು ಗೊತ್ತಾಯಿತು, ವಾಸಂತಿ ಇನ್ನಿಲ್ಲದ ಗಲಾಟೆ ಮಾಡುತ್ತಾಳೆ. ಅದೇನಾಯ್ತೋ ಪ್ರಕಾಶನ ಕೋಪ ನೆತ್ತಿಗೇರ್ತಾ ಇದ್ದಂತೆ ವಾಸಂತಿ ಮೇಲೆ ಹಲ್ಲೆ ಮಾಡುತ್ತಾನೆ. ಈ ವೇಳೆ ವಾಸಂತಿ ಸಾವನ್ನಪ್ಪುತ್ತಾಳೆ. ಕೂಡಲೇ ಆರೋಪಿ ಪ್ರಕಾಶ ಶೃಂಗೇರಿಯ ತ್ಯಾವಣ ಅರಣ್ಯದಲ್ಲಿ ಗುಂಡಿ ತೆಗೆದು ಆಕೆಯನ್ನು ಹುತ್ತಿಟ್ಟು ನಾಪತ್ತೆಯಾಗುತ್ತಾನೆ. ಇನ್ನು ಪೊಲೀಸರಿಗೆ ಇತನ ಮೇಲೆ ಡೌಟ್ ಬಂದು ಅವ್ರದ್ದೇ ಶೈಲಿಯಲ್ಲಿ ವಿಚಾರಣೆ ನಡೆಸುತ್ತಾರೆ. ಈ ವೇಳೆ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡು, ಹತ್ಯೆಗೆ ನಿಖರ ಕಾರಣವನ್ನು ಹೇಳುತ್ತಾನೆ. ಬಳಿಕ ಆತನ ಮಾಹಿತಿ ಮೇರೆಗೆ ಮಣ್ಣಿನಡಿಯಲ್ಲಿದ್ದ ವಾಸಂತಿ ಶವವನ್ನು ಹೊರತೆಗೆಯುತ್ತಾರೆ. ಒಟ್ಟಾರೆ 42 ರ ಮಹಿಳೆ ಹಾಗೂ 28 ರ ಯುವಕನ ನಡುವಿನ ಲವ್ವಿಡವ್ವಿಯಲ್ಲಿ ಯುವಕ ಮದುವೆಯಾಗಿದ್ದೆ, ಮುಳುವಾಗಿದೆ. ಕೆಲ ವರ್ಷ ಜೊತೆಗಿದ್ದ ಲವ್ ಕಹಾನಿ ಕೊಲೆಯಲ್ಲಿ ಕೊನೆಯಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ