ಮಡಿಕೇರಿಯಿಂದ ನಾಪತ್ತೆಯಾಗಿದ್ದ ಇಬ್ಬರು ಯುವತಿಯರು ಮಲ್ಪೆ ಬಳಿ ನೀರುಪಾಲು; ಆಪತ್ಬಾಂಧವ ಸಿಬ್ಬಂದಿ ಈಶ್ವರ್​ನಿಂದ ಓರ್ವ ಯುವತಿಯ ರಕ್ಷಣೆ

ಮಡಿಕೇರಿಯಿಂದ ನಾಪತ್ತೆಯಾಗಿದ್ದ ಇಬ್ಬರು ಯುವತಿಯರು ಮಲ್ಪೆ ಬಳಿ ನೀರುಪಾಲಾಗಿದ್ದು, ಓರ್ವ ಯುವತಿ ಸಾವನನಪ್ಪಿದರೆ, ಮತ್ತೊರ್ವ ಯುವತಿಯನ್ನ ರಕ್ಷಿಸಿದ ಘಟನೆ ನಡೆದಿದೆ.

ಮಡಿಕೇರಿಯಿಂದ ನಾಪತ್ತೆಯಾಗಿದ್ದ ಇಬ್ಬರು ಯುವತಿಯರು ಮಲ್ಪೆ ಬಳಿ ನೀರುಪಾಲು; ಆಪತ್ಬಾಂಧವ ಸಿಬ್ಬಂದಿ ಈಶ್ವರ್​ನಿಂದ ಓರ್ವ ಯುವತಿಯ ರಕ್ಷಣೆ
ನೀರುಪಾಲಾದ ಯುವತಿಯರನ್ನು ರಕ್ಷಿಸಿದ ಈಶ್ವರ್​ ಮಲ್ಪೆ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 06, 2023 | 9:14 AM

ಉಡುಪಿ, ಆ.6: ಮಡಿಕೇರಿ(Madikeri)ಯಿಂದ ನಾಪತ್ತೆಯಾಗಿದ್ದ ಇಬ್ಬರು ಯುವತಿಯರು ಮಲ್ಪೆ(Malpe) ಬಳಿ ನೀರುಪಾಲಾಗಿದ್ದು, ಓರ್ವ ಯುವತಿ ಸಾವನನಪ್ಪಿದರೆ, ಮತ್ತೊರ್ವ ಯುವತಿಯನ್ನು ರಕ್ಷಿಸಿದ ಘಟನೆ ನಡೆದಿದೆ. ಮಡಿಕೇರಿ ಮೂಲದ ಮಾನ್ಯ ಮೃತ ರ್ದುದೈವಿ. ಇನ್ನು ಬದುಕುಳಿದ ಯಶಸ್ವಿನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಮಡಿಕೇರಿಯಿಂದ ಈ ಹುಡುಗಿಯರು ನಾಪತ್ತೆಯಾಗಿದ್ದರು. ಈ ಕುರಿತು ಮಡಿಕೇರಿ ಠಾಣೆಯಲ್ಲಿ ಇಬ್ಬರು ಕಾಣೆಯಾಗಿರುವ ದೂರು ದಾಖಲಾಗಿತ್ತು. ಇದೀಗ ಮಲ್ಪೆ ಬಳಿ ನಿನ್ನೆ(ಆ.6)ತಡರಾತ್ರಿ ಭಾರಿ ಅಲೆಗಳ ಹೊಡೆತಕ್ಕೆ ಇಬ್ಬರು ಯುವತಿಯರು ಸಮುದ್ರ ಪಾಲಾಗಿದ್ದರು. ಕೂಡಲೇ ಆಪತ್ಬಾಂಧವ ಸಿಬ್ಬಂದಿ ಈಶ್ವರ್​ ಎಂಬುವವರು ಓರ್ವ ಯುವತಿಯನ್ನು ರಕ್ಷಣೆ ಮಾಡಿದ್ದು, ಮತ್ತೊರ್ವ ಯುವತಿ ಅಲೆಗಳ ಹೊಡೆತಕ್ಕೆ ಮೃತಪಟ್ಟಿದ್ದಾರೆ.

ರಸ್ತೆ ನಿರ್ಮಾಣ ಮಾಡಿದ ನಾಲ್ಕೇ ತಿಂಗಳಿಗೆ ಕಿತ್ತುಹೋದ ರಸ್ತೆ; ಗ್ರಾಮಸ್ಥರ ಆಕ್ರೋಶ

ಬೀದರ್: ಜಿಲ್ಲೆಯ ಔರಾದ್ ತಾಲೂಕಿನ ಜಂಬಗಿ ಗ್ರಾಮದಿಂದ ವಡಗಾಂವ್ ಗ್ರಾಮದವರೆಗೆ ಕಳೆದ ನಾಲ್ಕು ತಿಂಗಳ ಹಿಂದೆಯೇ ರಸ್ತೆ ನಿರ್ಮಾಣ ಮಾಡಲಾಗಿದೆ ಆದರೆ ರಸ್ತೆ ನಿರ್ಮಾಣಮಾಡಿದ ನಾಲ್ಕು ತಿಂಗಳಲ್ಲಿ ರಸ್ತೆ ಕಿತ್ತುಕೊಂಡು ಹೋಗಿದ್ದು ಗ್ರಾಮಸ್ಥರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ. ಇನ್ನು ಈ ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ಈ ರಸ್ತೆಯಲ್ಲಿ ವಾಹನ ಸವಾರಿ ಮಾಡಬೇಕಾದರೆ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ವಾಹನ ಸವಾರಿ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಕಳಪೆ ರಸ್ತೆ ಕಾಮಗಾರಿ ಮಾಡಿದ ಗುತ್ತಿಗೆದಾರನಿಗೆ ಲೈಸೆನ್ಸ್ ಕಪ್ಪು ಪಟ್ಟಿಗೆ ಸೇರಿಸಿ, ರಸ್ತೆ ದುರಸ್ಥಿ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿ:ಕಾವೇರಿ: ಎಚ್ಚರಿಕೆ ಧಿಕ್ಕರಿಸಿ ಈಜಲು ಹೋದ ಇಬ್ಬರು ದಾರುಣ ಸಾವು, ಬಲಮುರಿ ನೀರಿನಲ್ಲಿ ದುಸ್ಸಾಹಸಕ್ಕೆ ಕೈ ಹಾಕಿದವರು ನೀರುಪಾಲು

780ಕ್ಕೂ ಹೆಚ್ಚು ಅಡಕೆ ಮರಗಳನ್ನು ಕಡಿದು ಹಾಕಿದ ದುಷ್ಕರ್ಮಿಗಳು

ದಾವಣಗೆರೆ: ತಾಲೂಕಿನ ಮುದಹದಡಿ ಗ್ರಾಮದಲ್ಲಿ 780ಕ್ಕೂ ಹೆಚ್ಚು ಅಡಕೆ ಮರಗಳನ್ನು ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ. ಮುದಹದಡಿ ಗ್ರಾಮದ ರೈತ ಬೀರೇಶ್​ಗೆ ಸೇರಿದ ಅಡಕೆ ತೋಟ ಇದಾಗಿದ್ದು, ಹಳೆಯ ದ್ವೇಷಕ್ಕೆ ಅಡಕೆ ಮರಗಳನ್ನು ನಾಶ‌ ಮಾಡಲಾಗಿದೆ ಎಂದು ಹದಡಿ ಪೊಲೀಸ್ ಠಾಣೆಗೆ ರೈತ ಬೀರೇಶ್ ದೂರು ನೀಡಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:14 am, Sun, 6 August 23