ಕಾವೇರಿ: ಎಚ್ಚರಿಕೆ ಧಿಕ್ಕರಿಸಿ ಈಜಲು ಹೋದ ಇಬ್ಬರು ದಾರುಣ ಸಾವು, ಬಲಮುರಿ ನೀರಿನಲ್ಲಿ ದುಸ್ಸಾಹಸಕ್ಕೆ ಕೈ ಹಾಕಿದವರು ನೀರುಪಾಲು
ಮೃತ ಧನರಾಜ್ ಹಾಗೂ ಪ್ರಸನ್ನ ಇಬ್ಬರೂ ಸಹ ಮೈಸೂರು ನಿವಾಸಿಗಳು. ನಿನ್ನೆ ರಾಮನವಮಿಯ ನಿಮಿತ್ತ ಗಣೇಶನ ದೇವಾಲಯಕ್ಕೆ ಬಂದು ದರ್ಶನ ಪಡೆದಿದ್ದಾರೆ. ಬಳಿಕ ನೀರಿನಲ್ಲಿ ಇಳಿದು ಆಟವಾಡಲು ಮುಂದಾಗಿದ್ದಾರೆ. ನೀರಿಗೆ ಇಳಿಯ ಬಾರದೆಂಬ ಸೂಚನಾ ಫಲಕ ಹಾಕಿದ್ದರೂ ಅದನ್ನ ಲೆಕ್ಕಿಸದೆ, ಸಾವನ್ನು ಅಪ್ಪಿದ್ದಾರೆ.
ನೀರಿನಲ್ಲಿ ಮೋಜು ಮಸ್ತಿ ಮಾಡಲು (swimming) ಹೋದ ಇಬ್ಬರ ದಾರುಣ ಅಂತ್ಯವಾಗಿದೆ. ಎಚ್ಚರಿಕೆಯ ಸೂಚನಾ ಫಲಕವಿದ್ದರೂ ಧಿಕ್ಕರಿಸಿ ನೀರಿಗೆ ಇಳಿದವರು ಸಾವನ್ನಪ್ಪಿದ್ದಾರೆ. ಅಷ್ಟಕ್ಕೂ ಕಾವೇರಿ (cauvery) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರಾದರೂ ಯಾರು? ಬಲಮುರಿಯಲ್ಲಿ ಪ್ರವಾಸಿಗರ ಹುಚ್ಚಾಟ ಹೇಗಿದೆ? ಎಂಬುದರ ಕುರಿತಾದ ಒಂದು ರಿಪೋರ್ಟ್ ನಿಮ್ಮ ಮುಂದೆ. ಧುಮ್ಮಿಕ್ಕಿ ಹರಿಯುತ್ತಿರುವ ಕಾವೇರಿ ತಾಯಿ.. ಬಿರು ಬೇಸಿಗೆಯಲ್ಲಿ ಮೈ ತಂಪಾಗಿಸಲು ನದಿಯಲ್ಲಿ ಈಜಾಡುತ್ತಿರೊ ಜನರು.. ಮಹಿಳೆಯರು, ಮಕ್ಕಳನ್ನದೆ ನದಿಯಲ್ಲಿ ಸೆಲ್ಫಿ ತೆಗೆದು ಕೊಂಡು ಎಂಜಾಯ್ ಮಾಡುತ್ತಿರುವ ಪ್ರವಾಸಿಗರು. ಈ ಎಲ್ಲ ದೃಶ್ಯ ಕಣ್ಣಿಗೆ ರಾಚಿದ್ದು ಬಲಮುರಿ ಪ್ರವಾಸಿ ತಾಣದಲ್ಲಿ (Mandya).. ಆದರೆ ಹೀಗೆ ನೀರಿನಲ್ಲಿ ಮೋಜು ಮಸ್ತಿ ಮಾಡಲು ಇಳಿದವರ ಪೈಕಿ ಇಬ್ಬರು (youth) ತಮ್ಮ ಜೀವವನ್ನೆ ಕಳೆದು ಕೊಂಡಿದ್ದಾರೆ (death). ಮೈಸೂರಿನಿಂದ ಕಾವೇರಿ ನದಿಯನ್ನ ಕಣ್ತುಂಬಿ ಕೊಳ್ಳಲು ಬಂದವರು ಈಗ ಶವವಾಗಿ ಹೋಗಿದ್ದಾರೆ. ನದಿಯಲ್ಲಿ ಇಳಿದು ಮೋಜು ಮಸ್ತಿ ಮಾಡಲು ಬಂದವರ ದುರಂತ ಅಂತ್ಯವಾಗಿದೆ
ಸಾವು ಅದ್ಯಾವಾಗ ಹೇಗೆ ಬರುತ್ತೆಂದು ಯಾರಿಗೂ ತಿಳಿದಿಲ್ಲ. ಪಂಚಭೂತಗಳ ಜೊತೆ ಚೆಲ್ಲಾಟ ಆಡಿದ್ರೆ ದುರಂತ ಅಂತ್ಯ ಕಟ್ಟಿಟ್ಟ ಬುತ್ತಿ ಎಂಬುದು ತಿಳಿದಿರುವ ವಿಷಯವೇ. ಇಷ್ಟೆಲ್ಲಾ ಗೊತ್ತಿದ್ರು ಪ್ರವಾಸಿಗರು ನೀರಿನಲ್ಲಿ ಚೆಲ್ಲಾಟ ಆಡುವುದು ಬಿಟ್ಟಿಲ್ಲ. ಅದೇ ರೀತಿ ನಿನ್ನೆ ಶುಕ್ರವಾರ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬಲಮುರಿ ಪ್ರವಾಸಿ ತಾಣಕ್ಕೆ ಧನರಾಜ್ ಹಾಗೂ ಆತನ ಸ್ನೇಹಿತ ಪ್ರಸನ್ನ ಬಂದಿದ್ರು.
ಕಾವೇರಿ ನದಿಗೆ ಇಳಿದು ಸ್ನಾನ ಮಾಡಲು ನಿಂತಿದ್ದರು. ಈ ವೇಳೆ ಸುಳಿಗೆ ಸಿಲುಕಿ ಇಬ್ಬರೂ ಮೃತಪಟ್ಟಿದ್ದಾರೆ. ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರನ್ನೂ ಸ್ಥಳೀಯರು ರಕ್ಷಿಸಲು ಪ್ರಯತ್ನ ಪಟ್ಟರೂ ಪ್ರಯೋಜನಕ್ಕೆ ಬಾರಲಿಲ್ಲ. ನೋಡನೋಡುತ್ತಲೇ ಇಬ್ಬರೂ ನೀರಿನಲ್ಲಿ ಮುಳುಗಿ ಪ್ರಾಣ ಕಳೆದು ಕೊಂಡಿದ್ದಾರೆ.
Also Read: ಚಿತ್ರದುರ್ಗ: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರುಪಾಲು
ಇನ್ನು ಮೃತ ಧನರಾಜ್ ಹಾಗೂ ಪ್ರಸನ್ನ ಇಬ್ಬರೂ ಸಹ ಮೈಸೂರು ನಿವಾಸಿಗಳು. ನಿನ್ನೆ ರಾಮನವಮಿಯ ನಿಮಿತ್ತ ಗಣೇಶನ ದೇವಾಲಯಕ್ಕೆ ಬಂದು ದರ್ಶನ ಪಡೆದಿದ್ದಾರೆ. ಬಳಿಕ ನೀರಿನಲ್ಲಿ ಇಳಿದು ಆಟವಾಡಲು ಮುಂದಾಗಿದ್ದಾರೆ.
ನೀರಿಗೆ ಇಳಿಯ ಬಾರದೆಂಬ ಸೂಚನಾ ಫಲಕ ಹಾಕಿದ್ದರೂ ಅದನ್ನ ಲೆಕ್ಕಿಸದೆ, ಸಾವನ್ನು ಅಪ್ಪಿಕೊಂಡಿದ್ದಾರೆ. ಸದ್ಯ ಕೆ.ಆರ್.ಎಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತ ದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ