ಗದಗ: ಜಾನುವಾರು ತೊಳೆಯಲು ಹೋಗಿ ಹೊಂಡದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಬಾಲಕರ ಶವ ಪತ್ತೆ

ಗದಗ ನಗರದ ರಹಮತ್ ಬಡಾವಣೆ ಬಳಿಯ ಹೊಂಡದಲ್ಲಿ ನಿನ್ನೆ(ಆ.15) ಮಧ್ಯಾಹ್ನ ಆಕಳು ಮತ್ತು ಕರುವನ್ನು ಸ್ನಾನ ಮಾಡಿಸಲು ತೆರಳಿದ್ದ ಮಹಿಳೆ ಸೇರಿ ನಾಲ್ವರು ನೀರಿನಲ್ಲಿ ಮುಳುಗಿದ್ದರು. ಈ ವೇಳೆ ಸ್ಥಳೀಯರು ಇಬ್ಬರನ್ನು ಬಚಾವ್​ ಮಾಡಿದ್ದು, ಇಬ್ಬರು ಬಾಲಕರು ಪತ್ತೆಯಾಗಿರಲಿಲ್ಲ. ಇದೀಗ ಇಬ್ಬರ ಮೃತದೇಹವನ್ನು ಹೊರತೆಗೆದಿದ್ದಾರೆ.

ಗದಗ: ಜಾನುವಾರು ತೊಳೆಯಲು ಹೋಗಿ ಹೊಂಡದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಬಾಲಕರ ಶವ ಪತ್ತೆ
ಮೃತ ಬಾಲಕರು
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 16, 2023 | 9:59 AM

ಗದಗ, ಆ.16: ಜಾನುವಾರು ತೊಳೆಯಲು ಹೋಗಿ ಹೊಂಡದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಬಾಲಕರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಸಂತೋಷ್ ಕುಂಬಾರ್ (14), ಹಾಗೂ ಇಂದು ಬೆಳಗ್ಗೆ ಮೊಹಮ್ಮದ್ ಅಮನ್ (12) ಎಂಬುವವನ ಶವ ಪತ್ತೆಯಾಗಿದೆ. ನಿನ್ನೆ(ಆ.15) ಮಧ್ಯಾಹ್ನ ಗದಗ(Gadag) ನಗರದ ರಹಮತ್ ಬಡಾವಣೆ ಬಳಿಯ ಹೊಂಡದಲ್ಲಿ ಆಕಳು ಮತ್ತು ಕರುವನ್ನು ಸ್ನಾನ ಮಾಡಿಸಲು ಮಹಿಳೆ ಸೇರಿ ನಾಲ್ವರು ತೆರಳಿದ್ದರು. ಈ ವೇಳೆ ನಾಲ್ವರೂ ನೀರಿನಲ್ಲಿ ಮುಳುಗಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಮಹಿಳೆ ಶಾಹೀನ್ ಹುಬ್ಬಳ್ಳಿ ಹಾಗೂ ಆಕೆಯ ಮಗ ಮೊಹಮ್ಮದ್ ಆದಿಲ್​ನನ್ನು ಬಚಾವ್ ಮಾಡಿದ್ದರು. ಇನ್ನು ನಾಪತ್ತೆಯಾಗಿದ್ದ ಇಬ್ಬರು ಬಾಲಕರಿಗಾಗಿ ನಿನ್ನೆಯಿಂದ ಶೋಧ ಕಾರ್ಯ ನಡೆದಿತ್ತು. ಇದೀಗ ಇಬ್ಬರು ಬಾಲಕರ ಮೃತದೇಹ ಪತ್ತೆಯಾಗಿದೆ.

ಘಟನೆ ವಿವರ

ಅಕ್ರಮವಾಗಿ ಮಣ್ಣಿನ ಗಣಿಗಾರಿಗೆ ನಡೆಸಿದ ಹೊಂಡದಲ್ಲಿ ನೀರು ತುಂಬಿತ್ತು. ನಿನ್ನೆ ಆಕಳು ಕರುವನ್ನು ಸ್ನಾನ ಮಾಡಿಸಲೆಂದು ಮಹಿಳೆ ಶಾಹಿನ್ ತನ್ನ ಮಗನೊಂದಿಗೆ ಹೊಂಡದ ಬಳಿ ಬಂದಿದ್ದರು. ಈ ವೇಳೆ ಶಾಹಿನ್ ಮಗನ ಮೇಲೆ ಆಕಳು ಎರಗಿದೆ. ಇದರಿಂದ ಬಾಲಕ ನೀರಿನಲ್ಲಿ ಮುಳುಗಿದ್ದಾನೆ. ಕೂಡಲೇ ಶಾಹಿನ್, ಮಗನ ರಕ್ಷಣೆಗೆ ದಾವಿಸಿದ್ದಳು. ಈಕೆಯೊಂದಿಗೆ 14 ವರ್ಷದ ಸಂತೋಷ್ ಕುಂಬಾರ, 12 ಮಹ್ಮದ್ ಅಮನ್ ಹುಬ್ಬಳ್ಳಿ ಕೂಡ ಹೊಂಡಕ್ಕೆ ಹಾರಿದ್ದರು. ಇವರ್ಯಾರಿಗೂ ಈಜು ಬಾರದ ಹಿನ್ನಲೆ ನಾಲ್ವರೂ ನೀರಿನಲ್ಲಿ ಮುಳುಗುತ್ತಿರುವುದನ್ನು ನೋಡಿದ ರಾಜಾ ಸಿಂಗ್ ಎಂಬವರು ಕೂಡಲೇ ಹೊಂಡಕ್ಕೆ ಹಾರಿ ಮಹಿಳೆ ಮತ್ತು ಆಕೆಯ ಮಗನನ್ನು ರಕ್ಷಿಸಿದ್ದರು.

ಇದನ್ನೂ ಓದಿ:Karnataka Breaking Kannada News Live: ಕುಣಿಗಲ್ ತಾಲೂಕಿನ ಸಂತೆ ಮಾವತ್ತೂರು ಬಳಿ ಕಾರು ಡಿಕ್ಕಿಯಾಗಿ ವ್ಯಕ್ತಿ ಸಾವು

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮದ ದಳದ ಸಿಬ್ಬಂದಿಗಳು ಇಬ್ಬರು ಬಾಲಕರಿಗಾಗಿ ಹುಡುಕಾಟ ನಡೆಸಿದ್ದರು. ಜೊತೆಗೆ ಗದಗ ಎಸ್​ಪಿ ಬಿ.ಎಸ್.ನೇಮಗೌಡ ಆಗಮಿಸಿ ಪರಿಶೀಲನೆ ನಡೆಸಿದ್ದರು. ಮಣ್ಣು ಗಣಿಗಾರಿಕೆ ಮಾಡಿ ಹೊಂಡವನ್ನು ಹಾಗೇ ಬಿಟ್ಟಿದ್ದಾರೆ ಎನ್ನುವ ಮಾಹಿತಿ ಇದೆ. ಈ ಜಾಗ ಯಾರ ಹೆಸರಿನಲ್ಲಿದೆ ಎಂದು ನೋಡಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದರು. ಇನ್ನು ಗದಗ ತಾಲೂಕಿನ ಹುಲಕೋಟಿ, ಕುರ್ತಕೋಟಿ, ಕಳಸಾಪೂರ, ಲಕ್ಕುಂಡಿ ಸೇರಿದಂತೆ ಹಲವು ಗ್ರಾಮಗಳ ಸುತ್ತಮುತ್ತ ಇಂತಹ 50ಕ್ಕೂ ಅಧಿಕ ಸಾವಿನ ಹೊಂಡಗಳಿವೆ. ಈಗಾಗಲೇ ಗದಗ ತಾಲೂಕಿನಲ್ಲಿ ಇಂತಹ ಅಕ್ರಮ ಹೊಂಡಕ್ಕೆ ನಾಲ್ಕು ಮಕ್ಕಳು ಬಲಿಯಾಗಿದ್ದು, ಈಗ ಮತ್ತೆ ಬಾಳಿ ಬದುಕಬೇಕಾದ ಇಬ್ಬರು ಮಕ್ಕಳು ನೀರು ಪಾಲಾಗಿರುವುದು ದುರಂತ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:59 am, Wed, 16 August 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ