3 ತಿಂಗಳು ಕೆಟ್ಟದನ್ನ ನೋಡಲ್ಲ, ಕೆಟ್ಟದನ್ನ ಕೇಳಲ್ಲ, ಕೆಟ್ಟದನ್ನ ಮಾಡಲ್ಲ ಶಪಥ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್

| Updated By: ರಮೇಶ್ ಬಿ. ಜವಳಗೇರಾ

Updated on: Feb 05, 2023 | 3:05 PM

3 ತಿಂಗಳು ಕೆಟ್ಟದನ್ನ ನೋಡಲ್ಲ, ಕೆಟ್ಟದನ್ನ ಕೇಳಲ್ಲ, ಕೆಟ್ಟದನ್ನ ಮಾಡಲ್ಲ ಎಂದು ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭಾವನಾತ್ಮಕ ಮಾತುಗಳನ್ನಾಡಿದ್ದಾರೆ.

3 ತಿಂಗಳು ಕೆಟ್ಟದನ್ನ ನೋಡಲ್ಲ, ಕೆಟ್ಟದನ್ನ ಕೇಳಲ್ಲ, ಕೆಟ್ಟದನ್ನ ಮಾಡಲ್ಲ ಶಪಥ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಲಕ್ಷ್ಮೀ ಹೆಬ್ಬಾಳ್ಕರ್
Follow us on

ಚಿಕ್ಕಮಗಳೂರು: ಸಿಡಿ ಪ್ರಕರಣ ಸಂಬಂಧ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ(Ramesh Jarkiholi) ಅವರು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಲ್ಲೇ ಇದ್ದಾರೆ. ಇನ್ನು ಈ ವಿಚಾರವಾಗಿ ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದಲ್ಲಿ ಪ್ರತಿಕ್ರಿಯಿಸಿದ್ದು, 3 ತಿಂಗಳು ಕೆಟ್ಟದನ್ನ ನೋಡಲ್ಲ, ಕೆಟ್ಟದನ್ನ ಕೇಳಲ್ಲ, ಕೆಟ್ಟದನ್ನ ಮಾಡಲ್ಲ . ಈ ಬಾರಿ ತಾಳ್ಮೆಯಿಂದ ಚುನಾವಣೆ ಮಾಡಬೇಕೆಂದು ಅಂದುಕೊಂಡಿದ್ದೇನೆ. ಸಿಡಿ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲ್ಲವೆಂದು ಎಂದು ಸ್ಪಷ್ಟಪಡಿಸಿದರು.

ಸಿ.ಡಿ.ಬಾಂಬ್ ಪ್ರಕರಣದಿಂದ ಹೆಣ್ಣಿನ ಸಂಘರ್ಷದ ಬದುಕನ್ನ ಎಳೆತಂದ ಲಕ್ಷ್ಮೀ ಹೆಬ್ಬಾಳ್ಕರ್, ರಾಜಕಾರಣದಲ್ಲಿ ಮಹಿಳೆಯರಿಗೆ ಬಹಳ ಕಷ್ಟ. ಹಂತ ಹಂತದಲ್ಲಿ ನಾವು ಅಗ್ನಿ ಪರೀಕ್ಷೆ ಎದುರಿಸಬೇಕು. ಆ ಸೀತಾ ಮಾತೆ ಕೂಡ ಅಗ್ನಿ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ ಯಾವ ಲೆಕ್ಕ. ಮಹಿಳೆ ಅಂದರೆ ಸಂಘರ್ಷ, ಅದು ಮಹಿಳೆ ಜೊತೆಯೇ ಬರುತ್ತೆ. ಹುಟ್ಟಿನಿಂದ ಸಾಯುವವರೆಗೂ ಪರೀಕ್ಷೆಗಳನ್ನ ಹೊತ್ತುಕೊಂಡೇ ಇರಬೇಕು ಎದುರಿಸಬೇಕು. ಪಾಸಾಗಬೇಕು ಎಂದು ಭಾಷಣದಲ್ಲಿ ಭಾವುಕರಾಗಿ ಮಾತನಾಡಿದರು.

ನಾನು ಮಾಡಿದ ಅಭಿವೃದ್ಧಿ ಕೆಲಸದಿಂದ ಚುನಾವಣೆಯಲ್ಲಿ ಗೆಲ್ಲಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ. ಮಹಿಳೆಯರ ಪರವಾದ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಾಗಿದೆ. ಹಾಗಾಗಿ 3 ತಿಂಗಳು ಬಹಳ ತಾಳ್ಮೆಯಿಂದ ಇರಲು ಬಯಸುತ್ತೇನೆ ಎಂದು ಹೇಳಿದರು.

ಕುಮಾರಸ್ವಾಮಿ ಹೇಳಿಕೆ ನಾನು ಕೇಳಿಲ್ಲ. ಕುಮಾರಸ್ವಾಮಿ ಅಣ್ಣನ ಬಗ್ಗೆ ತುಂಬಾ ಗೌರವ ಇದೆ. ಅವರು ಯಾವ ಮೂಲದಿಂದ ಹೇಳಿದ್ದಾರೆ ಗೊತ್ತಿಲ್ಲ, ಅದಕ್ಕೆ ನಾನು ಪ್ರತಿಕ್ರಿಯೇ ನೀಡುವುದು ಸರಿಯಲ್ಲ ಎಂದರು.