ಚಿಕ್ಕಮಗಳೂರು, ಫೆ.03: ಪ್ರಸಕ್ತ ವರ್ಷ ಮಲೆನಾಡಿನಲ್ಲಿ ಮಂಗನ ಕಾಯಿಲೆ(Monkey Pox)ಗೆ ಮೊದಲ ಬಲಿಯಾಗಿದೆ. ವಯೋಸಹಜ ಅನಾರೋಗ್ಯದಿಂದ ಚಿಕ್ಕಮಗಳೂರು (Chikmagalur) ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾನೆ ಗ್ರಾಮದ 79 ವರ್ಷದ ವೃದ್ಧ ಬಳಲುತ್ತಿದ್ದರು. ಇವರನ್ನು ಮಣಿಪಾಲ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಇದೀಗ ಕೊನೆಯುಸಿರೆಳೆದಿದ್ದಾರೆ. ರೆಡ್ ಝೋನ್ನಲ್ಲಿ ತಪಾಸಣೆ ಮಾಡಿದಾಗ ವೃದ್ಧನಲ್ಲಿ ಕೆಎಫ್ಡಿ ಪತ್ತೆಯಾಗಿದೆ. ವೃದ್ಧನ ಸಾವಿನಿಂದ ಮಲೆನಾಡಿನ ಜನರಲ್ಲಿ ಆತಂಕ ಹೆಚ್ಚಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲೂ ಮಂಗನ ಕಾಯಿಲೆ ಪ್ರಕರಣ ಹೆಚ್ಚುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕಳೆದ 10 ದಿನಗಳಲ್ಲಿ ಬರೊಬ್ಬರಿ 21 ಜನರಿಗೆ ಸೋಂಕು ತಗುಲಿದ್ದು, ಬಿಸಿಲು ಹೆಚ್ಚಾದಂತೆ ಕಾಯಿಲೆ ಹೆಚ್ಚಾಗುವ ಆತಂಕವೂ ಜನರಲ್ಲಿ ಮನೆ ಮಾಡಿದೆ. ಇನ್ನು ಈ ಸೋಂಕು ಹರಡುವಿಕೆ ತಡೆಗೆ ಸದ್ಯ ರೋಗ ನಿರೋಧಕ ಲಸಿಕೆ ಇಲ್ಲವಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ವಹಿಸಿಕೊಳ್ಳುವುದೊಂದೇ ದಾರಿ ಮತ್ತು ಅತೀ ಅವಶ್ಯಕ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗನ ಕಾಯಿಲೆಗೆ ತತ್ತರಿಸುತ್ತಿದೆ ಉತ್ತರ ಕನ್ನಡ ಜಿಲ್ಲೆ, 10 ದಿನಗಳಲ್ಲಿ 21 ಜನರಿಗೆ ಸೋಂಕು
ಇನ್ನು ಜಿಲ್ಲೆಯಲ್ಲಿ ಮಂಗನ ಕಾಯಿಲೆ ಪಸರಿಸುತ್ತಿದೆ. ಕೆಲವು ವರ್ಷಗಳಿಂದ ಮಂಗನ ಕಾಯಿಲೆ ಪತ್ತೆ ಆಗದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೊಡಬೇಕಿರುವ ಲಸಿಕೆ ಬಗ್ಗೆಯೂ ಇಲಾಖೆ ಯೋಚನೆ ಮಾಡದೆ ಸುಮ್ಮನಾಗಿತ್ತು. ಹೀಗಾಗಿ ಇದೀಗ ಮಂಗನ ಕಾಯಿಲೆ ರೋಗ ಪತ್ತೆಯಾಗಿದೆ. ಇದೀಗ ಜಿಲ್ಲಾಡಳಿತ ಕಾಯಿಲೆ ಹೆಚ್ಚಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಪರದಾಡುತ್ತಿದೆ. ಅದರಲ್ಲೂ ಚಳಿಗಾಲ ಪ್ರಾರಂಭವಾಗುತ್ತಿರುವ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿಗರಿಗೆ ಮಂಗನ ಕಾಯಿಲೆ ಆತಂಕ ಕಾಡುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:30 pm, Sat, 3 February 24