ಚಿಕ್ಕಮಗಳೂರು: ತರೀಕೆರೆಯ ಹಾಡಿಕೆರೆ ಗ್ರಾಮ ಪಂಚಾಯತಿಗೆ ಗಾಂಧಿ ಗ್ರಾಮ ಪುರಸ್ಕಾರ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 28, 2023 | 12:07 PM

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಜನರಿಗೆ ತಲುಪಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲು ಪ್ರಶಸ್ತಿ ಪ್ರೇರಣೆ ನೀಡಿದೆ ಎಂದು ಹಾಡಿಕೆರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಭೈರೇಶ್​ ಹೇಳಿದರು.

ಚಿಕ್ಕಮಗಳೂರು: ತರೀಕೆರೆಯ ಹಾಡಿಕೆರೆ ಗ್ರಾಮ ಪಂಚಾಯತಿಗೆ ಗಾಂಧಿ ಗ್ರಾಮ ಪುರಸ್ಕಾರ
ಹಾಡಿಕೆರಿ ಪಂಚಾಯತಿ
Image Credit source: DH
Follow us on

ಚಿಕ್ಕಮಗಳೂರು, ಸೆ.28: ಜಿಲ್ಲೆಯ ತರೀಕೆರೆ(Tarikere)ತಾಲೂಕಿನ ಹಾಡಿಕೆರೆ ಗ್ರಾಮ ಪಂಚಾಯತಿ(Hadikere Grama panchayat) ಅತ್ಯುತ್ತಮ ಸಾಧನೆಗಾಗಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಹೌದು, ಪಂಚಾಯತಿ ವ್ಯಾಪ್ತಿಯಲ್ಲಿನ ಜನರ ಜೀವನದ ಗುಣಮಟ್ಟವನ್ನು ಮೇಲ್ದರ್ಜೆಗೇರಿಸಲು, ಸರ್ಕಾರದ ಅನುದಾನಗಳ ಉತ್ತಮ ಬಳಕೆ, ಶಾಲೆಗಳು ಅಭಿವೃದ್ಧಿ, ಡಿಜಿಟಲ್​ ಗ್ರಂಥಾಲಯ, ಬಾಲ್ಯ ವಿವಾಹ ನಿಯಂತ್ರಣ, ಇನ್ನಿತರ ಉತ್ತಮ ಕೆಲಸಗಳನ್ನು ಮಾಡಲಾಗಿದೆ. ಇನ್ನು ಆಸ್ತಿ ಸಮೀಕ್ಷೆ, ತೆರಿಗೆ ಪರಿಷ್ಕರಣೆ ಮತ್ತು ಸರ್ಕಾರದ ನಿಧಿ ಬಳಕೆಗೆ ಕ್ರಿಯಾ ಯೋಜನೆ ಸೇರಿ ಇತರೆ ಕೆಲಸಗಳನ್ನು ಪ್ರಶಸ್ತಿ ಆಯ್ಕೆಗೆ ಪರಿಗಣಿಸಲಾಗಿದೆ.

ಇನ್ನು 15 ನೇ ಹಣಕಾಸು ಆಯೋಗದ ಅನುದಾನ ಬಳಕೆ, ಎಸ್​ಸಿ-ಎಸ್​ಟಿ ಸಮುದಾಯಗಳ ಕಲ್ಯಾಣ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ದಿನಗೂಲಿ ಮತ್ತು ಕಾರ್ಡ್​ಗಳ ವಿತರಣೆ, ಸಂಜೀವಿನಿ ಶೆಡ್​ಗಳ ನಿರ್ಮಾಣ, ಶಾಲಾ ಉದ್ಯಾನವನ ನಿರ್ವಹಣೆಯ ಜೊತೆ ಸ್ವಸಹಾಯ ಸಂಘಗಳ ಸಹಭಾಗಿತ್ವದಲ್ಲಿ ದಾಸೋಹ ಭವನವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಪಂಚಾಯತ್​ ಮುಖ್ಯಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ:ವಿಜಯನಗರ: ಸತತ ಎರಡು ಬಾರಿ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮುಂದೂಡಿಕೆ; ಆಕ್ರೋಶಗೊಂಡ ಸದಸ್ಯರಿಂದ ಅಹೋರಾತ್ರಿ ಧರಣಿ

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಜನರಿಗೆ ತಲುಪಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲು ಪ್ರಶಸ್ತಿ ಪ್ರೇರಣೆ ನೀಡಿದೆ ಎಂದು ಹಾಡಿಕೆರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಭೈರೇಶ್​ ಹೇಳಿದರು. ಇನ್ನು ಇದೇ ವೇಳೆ ಪಂಚಾಯತಿ ಅಧ್ಯಕ್ಷೆ ರೇಖಾ ರವಿಶಯ್ಯ ಮಾತನಾಡಿ ‘ಪ್ರಸಕ್ತ ಸಾಲಿನಲ್ಲಿ ಕುಡಿಯುವ ನೀರಿನ ಸೌಲಭ್ಯ, ನೈರ್ಮಲ್ಯ, ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದ್ದು, ಈ ಶ್ರೇಯಸ್ಸು ಪಂಚಾಯತಿ ಸಿಬ್ಬಂದಿ ಹಾಗೂ ಗ್ರಾಮದ ಜನರ ಶ್ರಮಕ್ಕೆ ಸಲ್ಲುತ್ತದೆ ಎಂದರು.

ಇನ್ನು ಇದೇ ವೇಳೆ ಪಂಚಾಯತಿ ಸದಸ್ಯ ಎನ್​ಎಸ್​ ವಸಂತಕುಮಾರ್​ ಮಾತನಾಡಿ ‘ಗ್ರಾಮ ಪಂಚಾಯತಿ ವತಿಯಿಂದ ಪ್ರತಿ ಮನೆ ಹಾಗೂ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೌಚಾಲಯ ನಿರ್ಮಾಣ, ಘನತ್ಯಾಜ್ಯ ನಿರ್ವಹಣಾ ಘಟಕ ಸೇರಿದಂತೆ ತ್ಯಾಜ್ಯ ಸಂಗ್ರಹಣೆ ಮತ್ತು ವಿಂಗಡಣೆ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ