ಚಿಕ್ಕಮಗಳೂರು, ಅಕ್ಟೋಬರ್ 14: ಕಾಫಿನಾಡಲ್ಲಿ ಕಾಡಾನೆ-ಮಾನವ ಸಂಘರ್ಷಕ್ಕೆ ದಶಕಗಳ ಇತಿಹಾಸವಿದೆ. ಆನೆ ಹಾವಳಿಗೆ ಬ್ರೇಕ್ ಹಾಕ್ಬೇಕು ಅಂದ್ರೆ ಆನೆ ಬಿಡಾರವೊಂದೇ (elephant camp) ಅನಿವಾರ್ಯ ಎಂಬ ಆಗ್ರಹದ ಕೂಗು ಇತ್ತು. ಇದೀಗ ಸರ್ಕಾರ ಕಾಫಿನಾಡಲ್ಲೂ ಆನೆ ಶಿಬಿರ ತೆರೆಯೋ ಚಿಂತನೆಯಲ್ಲಿದ್ದು, 18 ಸಮೃದ್ಧ ಜಾಗಗಳನ್ನ ಗುರುತಿಸಿದೆ. ಫೈನಲಿ ಭದ್ರಾ ಅಭಯಾರಣ್ಯವೇ ಬೆಸ್ಟ್ ಪ್ಲೇಸ್ ಅನ್ನೋ ತೀರ್ಮಾನಕ್ಕೆ ಸರ್ಕಾರ ಬಂದಿದೆ. ಆದ್ರೆ, ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. ಆದ್ರೆ, ಆನೆಗಳಿಗೆಂದೇ ಇರೋ ಮುತ್ತೋಡಿಯಲ್ಲೇಕೆ ಆನೆಶಿಬಿರ. ಮೂಡಿಗೆರೆಯಲ್ಲಿ ಆನೆ ಹಾವಳಿ ಹೆಚ್ಚಿರೋದು. ಅದು ಸರ್ಕಲ್ ಪ್ರದೇಶ. ಅಲ್ಲೇ ಮಾಡಿ ಅಂತ ಮುತ್ತೋಡಿ ಆನೆ ಶಿಬಿರಕ್ಕೆ ಪರಿಸರವಾದಿಗಳ ತೀವ್ರ ವಿರೋಧ ವ್ಯಕ್ತವಾಗಿದೆ.
ಮುತ್ತೋಡಿಯಲ್ಲಿ ಆನೆ ಶಿಬಿರಕ್ಕೆ ವಿರೋಧ ಏಕೆಂದ್ರೆ, ಭದ್ರಾ ಹುಲಿ ಸಂರಕ್ಷಿತ ಅರಣ್ಯ ಸುಮಾರು 460 ಚದರ ಕಿಲೋ ಮೀಟರ್ ಇದೆ. ಇಲ್ಲಿ ಕಾಡಾನೆಗಳು ಇವೆ. ಇದರ ಮಧ್ಯೆ ಆನೆ ಶಿಬಿರ ಮಾಡಿದ್ರೆ ಪ್ರತ್ಯೇಕ ಜಾಗ ಮೀಸಲಿಡಬೇಕು. ಅದಕ್ಕೆ ಅಂತಾನೇ ಮಾವುತರನ್ನ ಇಡಬೇಕು. ಜೊತೆಗೆ ಹಲವರ ನೇಮಕವಾಗಬೇಕು. ಸಾಲದಕ್ಕೆ ಆನೆಗಳಿಗೆ ಆಹಾರವನ್ನು ಭದ್ರಾ ಅರಣ್ಯದಿಂದಲೇ ನೀಡಬೇಕು. ಈ ಜಾಗವೂ ಪ್ರವಾಸಿ ತಾಣವಾಗುತ್ತೆ. ಆಗ ಕಾಡಿನ ಸೌಂದರ್ಯ ಕ್ರಮೇಣ ನಶಿಸಿಹೋಗುತ್ತೆ. ಹೀಗಾಗಿ ಕಾಡಿನ ನಡುವೆ ಆನೆಗಳು ಸ್ವಚ್ಚಂದವಾಗಿ ಇರುವಾಗ ಇಲ್ಲಿ ಆನೆ ಶಿಬಿರ ಏಕೆ ಅಂತ ಪರಿಸರವಾದಿಗಳ ಪ್ರಶ್ನೆ.
ಇದನ್ನೂ ಓದಿ: ಕಳಸ: ಅಳಿವಿನಂಚಿನಲ್ಲಿರುವ ಅತ್ಯಂತ ಸುಂದರ ಹಾವು ಪಶ್ಚಿಮ ಘಟ್ಟದಲ್ಲಿ ಕಾಣಿಸಿಕೊಂಡಿದೆ- ವಿಡಿಯೋ ನೋಡಿ
ಮೂಡಿಗೆರೆಯಲ್ಲಿ ಆನೆ ಹಾವಳಿ ಹೆಚ್ಚಿದೆ. ಮೂಡಿಗೆರೆಯ ಬೈರಾಪುರ ಗ್ರಾಮದಲ್ಲಿ ಆನೆ ಶಿಬಿರ ಮಾಡಿದ್ರೆ ಚಿಕ್ಕಮಗಳೂರು, ಸಖಲೇಶಪುರ, ಮೂಡಿಗೆರೆ ಎಲ್ಲಾ ಭಾಗಕ್ಕೂ ಅನುಕೂಲವಾಗಲಿದೆ ಅನ್ನೋದು ಪರಿಸರವಾದಿಗಳ ಮಾತು.
ಇದನ್ನೂ ಓದಿ: ಚಿಕ್ಕಮಗಳೂರು-ಶೃಂಗೇರಿ ಹೆದ್ದಾರಿಯಲ್ಲಿ ಕಾಡಾನೆ ಹಿಂಡು: ವಾಹನ ಸವಾರರಿಗೆ ಎಚ್ಚರಿಕೆ ನೀಡಿದ ಅರಣ್ಯ ಇಲಾಖೆ
ಪ್ರತಿ ಬಾರಿ ಆನೆ ದಾಳಿ ನಡೆದಾಗಲು ಜನ ಆನೆ ಕಾಟಕ್ಕೆ ಬೇಸತ್ತು ಆನೆಯನ್ನ ಸೆರೆ ಹಿಡೀರಿ ಅಂತಾರೆ. ಓಡಿಸ್ರಿ ಅಂತಾರೆ. ಆದ್ರೆ, ಸೆರೆ ಹಿಡಿಯೋಕೆ ಶಿಬಿರದಿಂದ ಸಾಕಿದ ಆನೆಗಳೇ ಬರಬೇಕು. ಅದು ಸರ್ಕಾರಕ್ಕೆ ಖರ್ಚು. ಆದ್ರೆ, ಇಲ್ಲೇ ಶಿಬಿರ ಇದ್ರೆ ಒಳ್ಳೆದು. ಆದ್ರೆ, ಎಲ್ಲಿ ಇರಬೇಕು ಅನ್ನೋದನ್ನ ತಜ್ಞರು ತೀರ್ಮಾನಿಸಬೇಕು. ಇದರ ನಡುವೇ ಸರ್ಕಾರವೇನೂ ಆನೆ ಶಿಬಿರವನ್ನ ಮುತ್ತೋಡಿ ಅಭಯಾರಣ್ಯದಲ್ಲಿ ಮಾಡೋ ಪ್ರಸ್ತಾವನೆ ಕಲಿಸಿದೆ.
ಇದರ ಮಧ್ಯೆ ಆನೆ ಶಿಬಿರ ಮೂಡಿಗೆರೆಗೆ ಹೋಗ್ಲಿ ಅನ್ನೋ ಮಾತು ಇದೆ. ಚಿಕ್ಕಮಗಳೂರಿಗೆ ಬೇಡ್ವೇ ಬೇಡ, ಕಾಡಾನೆಗಳು ಬರದಂತೆ ಕ್ರಮವಹಿಸಿ ಅನ್ನೋರು ಇದ್ದಾರೆ. ಆದ್ರೆ, ಸರ್ಕಾರ ಏನ್ ಮಾಡುತ್ತೋ ಕಾದುನೋಡ್ಬೇಕು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:15 pm, Sat, 14 October 23