ಸಾಹಿತಿ ಗಣೇಶ್ ಹೆಗಡೆ ಅವರ ಮನೆ ಮೇಲೆ ಗುಡ್ಡ ಕುಸಿತ; ಮನೆಯಲ್ಲಿನ ಪುಸ್ತಕ ಹೊರತರಲಾಗದೆ ಸಾಹಿತಿಯ ಪರದಾಟ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಸಾಹಿತಿ ಗಣೇಶ್ ಹೆಗಡೆ ಅವರ ಮನೆ ಮೇಲೆ ಗುಡ್ಡ ಕುಸಿತಗೊಂಡಿದ್ದು, ಮನೆಯಲ್ಲಿನ ಪುಸ್ತಕ ಹೊರತರಲಾಗದೆ ಸಾಹಿತಿ ಗಣೇಶ್ ಹೆಗಡೆ ಅವರು ಪರದಾಡುತ್ತಿದ್ದಾರೆ.
ಚಿಕ್ಕಮಗಳೂರು: ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಶೃಂಗೇರಿಯಲ್ಲಿ (Sringeri) ಸಾಹಿತಿ (Writer) ಗಣೇಶ್ ಹೆಗಡೆ ಅವರ ಮನೆ ಮೇಲೆ ಗುಡ್ಡ ಕುಸಿತಗೊಂಡಿದ್ದು, ಮನೆಯಲ್ಲಿನ ಪುಸ್ತಕ ಹೊರತರಲಾಗದೆ ಸಾಹಿತಿ ಗಣೇಶ್ ಹೆಗಡೆ ಅವರು ಪರದಾಡುತ್ತಿದ್ದಾರೆ. ಕುಸಿಯುವ ಹಂತದ ಮನೆಯಲ್ಲಿ 4,500ಕ್ಕೂ ಹೆಚ್ಚು ಪುಸ್ತಕಗಳಿವೆ. ಭಾರಿ ಮಳೆಯಿಂದಾಗಿ ಮನೆಯೊಳಗೆ ನೀರು ನುಗ್ಗುತ್ತಿದ್ದು, ಪುಸ್ತಕಗಳನ್ನ ಉಳಿಸಿಕೊಳ್ಳಬೇಕೆಂದು ಸಾಹಿತಿ ಹರಸಾಹಸ ಪಡುತ್ತಿದ್ದಾರೆ. ಸಾಹಿತಿ ಗಣೇಶ್ ಹೆಗಡೆ ಅವರು 14 ಕಾದಂಬರಿಗಳನ್ನು ಬರೆದಿದ್ದಾರೆ.
ಮುಕ್ಕುಂದ ಗ್ರಾಮದ ಕರಿವೀರೇಶ್ವರ ದೇಗುಲದ ಅರ್ಚಕ ನೀರುಪಾಲು
ರಾಯಚೂರು: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುಕ್ಕುಂದ ಗ್ರಾಮದ ಕರಿವೀರೇಶ್ವರ ದೇಗುಲದ ಅರ್ಚಕ ನೀರುಪಾಲಾಗಿದ್ದಾರೆ. ಲಿಂಗಪ್ಪ ಪೂಜಾರ(52) ನೀರುಪಾಲಾದ ಅರ್ಚಕ. ತುಂಗಭದ್ರಾ ನದಿ ದಡದಲ್ಲಿರುವ ಕರಿವೀರೇಶ್ವರ ದೇವಸ್ಥಾನಕ್ಕೆ ಅರ್ಚಕ ಪೂಜೆ ಮಾಡಲು ಹೋಗಿದ್ದಾರೆ. ಪೂಜೆಗು ಮುನ್ನ ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದಾಗ ಅರ್ಚಕ ಕೊಚ್ಚಿಹೋಗಿದ್ದಾರೆ. ಅಗ್ನಿಶಾಮಕ ದಳ, ಸಿಂಧನೂರು ಗ್ರಾಮಾಂತರ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ.