ಕಾಫಿನಾಡಲ್ಲಿ ಸಂಗೀತದ ಝೇಂಕಾರ: ಮನರಂಜನೆ ಉಣಬಡಿಸಿದ ಸೆಲೆಬ್ರಿಟಿಗಳಿಗೆ ಜೈಕಾರ!

|

Updated on: Mar 01, 2020 | 5:28 PM

ಚಿಕ್ಕಮಗಳೂರು: ಇಳಿಸಂಜೆಯಲ್ಲಿ ಸಂಗೀತದ ಝೇಂಕಾರ. ಮನರಂಜನೆ ಉಣಬಡಿಸಿದ ಸೆಲೆಬ್ರಿಟಿಗಳಿಗೆ ಪ್ರೇಕ್ಷಕರ ಜೈಕಾರ. ರಂಗು ರಂಗಿನ ಬೆಳಕಿನಲ್ಲಿ ರಂಗೋಲಿ ಚಿತ್ತಾರ. ಮ್ಯೂಸಿಕಲ್ ನೈಟ್​ಗೆ ಸಾಕ್ಷಿಯಾದ ಜನಸಾಗರ. ಮಲೆನಾಡಿನ ಮಂಜಿನಲ್ಲಿ ಹಾಡು ಗುನುಗಿದ್ರೆ ಹೇಗಿರುತ್ತೆ.. ಹಾಡಿನ ಜೊತೆ ಡ್ಯಾನ್ಸ್ ಮಾಡಿದ್ರೆ ಕೇಳ್ಬೇಕಾ.. ಕಾಫಿನಾಡು ಚಿಕ್ಕಮಗಳೂ ಜಿಲ್ಲೆಯಲ್ಲಿ ಎರಡನೇ ದಿನವೂ ಜಾನಪದ ಹಬ್ಬ ರಂಗೇರಿತ್ತು. ಗಾಯಕಿ ಕಲಾವತಿ ಹೇಳಿದ ಕೋಳಿಕೆ ರಂಗ ಕಾಫಿನಾಡಿನಲ್ಲಿ ಹೈವೋಲ್ಟೇಜ್ ಪವರ್ ಹೊತ್ತಿಸಿತ್ತು. ಅಜಯ್ ವಾರಿಯರ್-ಜೋಗಿ ಸುನೀತಾ ಜುಗಲ್ ಬಂಧಿ ಸಾಂಗ್​ಗೆ ಎಲ್ರೂ ಕಳೆದೋದ್ರು. ಹೇಮಂತ್- ಶಮಿತಾ […]

ಕಾಫಿನಾಡಲ್ಲಿ ಸಂಗೀತದ ಝೇಂಕಾರ: ಮನರಂಜನೆ ಉಣಬಡಿಸಿದ ಸೆಲೆಬ್ರಿಟಿಗಳಿಗೆ ಜೈಕಾರ!
Follow us on

ಚಿಕ್ಕಮಗಳೂರು: ಇಳಿಸಂಜೆಯಲ್ಲಿ ಸಂಗೀತದ ಝೇಂಕಾರ. ಮನರಂಜನೆ ಉಣಬಡಿಸಿದ ಸೆಲೆಬ್ರಿಟಿಗಳಿಗೆ ಪ್ರೇಕ್ಷಕರ ಜೈಕಾರ. ರಂಗು ರಂಗಿನ ಬೆಳಕಿನಲ್ಲಿ ರಂಗೋಲಿ ಚಿತ್ತಾರ. ಮ್ಯೂಸಿಕಲ್ ನೈಟ್​ಗೆ ಸಾಕ್ಷಿಯಾದ ಜನಸಾಗರ.

ಮಲೆನಾಡಿನ ಮಂಜಿನಲ್ಲಿ ಹಾಡು ಗುನುಗಿದ್ರೆ ಹೇಗಿರುತ್ತೆ.. ಹಾಡಿನ ಜೊತೆ ಡ್ಯಾನ್ಸ್ ಮಾಡಿದ್ರೆ ಕೇಳ್ಬೇಕಾ.. ಕಾಫಿನಾಡು ಚಿಕ್ಕಮಗಳೂ ಜಿಲ್ಲೆಯಲ್ಲಿ ಎರಡನೇ ದಿನವೂ ಜಾನಪದ ಹಬ್ಬ ರಂಗೇರಿತ್ತು. ಗಾಯಕಿ ಕಲಾವತಿ ಹೇಳಿದ ಕೋಳಿಕೆ ರಂಗ ಕಾಫಿನಾಡಿನಲ್ಲಿ ಹೈವೋಲ್ಟೇಜ್ ಪವರ್ ಹೊತ್ತಿಸಿತ್ತು. ಅಜಯ್ ವಾರಿಯರ್-ಜೋಗಿ ಸುನೀತಾ ಜುಗಲ್ ಬಂಧಿ ಸಾಂಗ್​ಗೆ ಎಲ್ರೂ ಕಳೆದೋದ್ರು. ಹೇಮಂತ್- ಶಮಿತಾ ಮಲ್ನಾಡ್ ಹೇಳಿದ ಗೀತೆಗಳು ಕಿವಿಗೆ ಇಂಪು ನೀಡಿದ್ರೆ, ಲೈವ್​ ಆಗಿ ಸಾಂಗ್ ಕೇಳಿ ಪ್ರೇಕ್ಷಕರು ಕಳೆದೋದ್ರು.

ಕಾಫಿನಾಡಿನಲ್ಲಿ ರಂಗೇರಿದ್ದ ಜಾನಪದ ಹಬ್ಬ:
ಇನ್ನು, ಭಾರ್ಗವಿ ತಂಡದ ದೀಪ ನೃತ್ಯ ಸೇರಿ ಭರತನಾಟ್ಯ ಪ್ರೇಕ್ಷರನ್ನ ತುದಿಗಾಲಿನಲ್ಲಿ ನಿಲ್ಲಿಸಿತ್ತು. ಈ ಮಧ್ಯೆ ಸ್ಟನ್ನಿಂಗ್ ಎಂಟ್ರಿಕೊಟ್ಟ ಮಿಮಿಕ್ರಿ ದಯಾನಂದ ಮಾತಿನ ಕಚಗುಳಿ ಇಟ್ರು. ಕಲಾವಿದರು ಒಂದ್ಕಡೆ ತಮ್ಮ ಟ್ಯಾಲಂಟ್​ ತೋರಿಸ್ತಿದ್ರೆ, ನಾನೇನು ಕಡಿಮೆಯಿಲ್ಲ ಅಂತಾ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಜಾನಪದ ಹಾಡಿಗೆ ದನಿಯಾದರು. ಕಾರ್ಯಕ್ರಮದಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಸೇರಿ ಹಲವು ಗಣ್ಯರು ಭಾಗಿಯಾಗಿದ್ರು.

ತಂಪಾದ ಸಂಜೆಯಲ್ಲಿ ಶುರುವಾದ ಸಂಗೀತ ಕಲರವ ಮಧ್ಯರಾತ್ರಿವರೆಗೂ ಜಬರ್​ದಸ್ತ್​ ಆಗಿ ನಡೀತು. ಚುಮು ಚುಮು ಚಳಿ ನಡುವೆ ಗಾಯಕರು, ನೃತ್ಯಪಟುಗಳು ವೇದಿಕೆಯಲ್ಲಿ ಅಬ್ಬರಿಸ್ತಿದ್ರೆ, ಕಾಫಿನಾಡಿನ ಜನ ಹುಚ್ಚೆದ್ದು ಕುಣಿದ್ರು. ಸಚಿವ ಸಿ.ಟಿ.ರವಿ ಪತ್ನಿ ಕೂಡ ಮಸ್ತ್ ಸ್ಪೆಪ್ ಹಾಕಿದ್ರು. ಒಟ್ನಲ್ಲಿ ಕಾಫಿನಾಡಲ್ಲಿ 2 ನೇ ದಿನವೂ ನಡೆದ ಜಾನಪದ ಹಬ್ಬ ಜನರಿಗೆ ಸಂಗೀತದ ರಸದೌತಣದ ಉಣ ಬಡಿಸಿದಂತು ಸುಳ್ಳಲ್ಲ.