ಚಿಕ್ಕಮಗಳೂರು: ಚಿರತೆ ದಾಳಿ; 17 ಕುರಿ, 14 ಮೇಕೆ ಸಾವು

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 15, 2023 | 10:39 PM

ಚಿಕ್ಕಮಗಳೂರು (Chikmagaluru) ಜಿಲ್ಲೆಯ ಕಡೂರು ತಾಲೂಕಿನ ಮಲ್ಲೇಶ್ವರ ಗ್ರಾಮದಲ್ಲಿ ಚಿರತೆ ದಾಳಿ(Leopard attack)ಯಿಂದ 17 ಕುರಿ ಹಾಗೂ 14 ಮೇಕೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಪಶು ವೈದ್ಯ ಉಮೇಶ್ ಅವರು ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿಕ್ಕಮಗಳೂರು: ಚಿರತೆ ದಾಳಿ; 17 ಕುರಿ, 14 ಮೇಕೆ ಸಾವು
ಕಡೂರು ತಾಲೂಕಿನಲ್ಲಿ ಕುರಿಗಳ ಮೇಲೆ ಚಿರತೆ ದಾಳಿ
Follow us on

ಚಿಕ್ಕಮಗಳೂರು, ಡಿ.15: ಚಿರತೆ ದಾಳಿ(Leopard attack)ಯಿಂದ 17 ಕುರಿ ಹಾಗೂ 14 ಮೇಕೆ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು (Chikmagaluru) ಜಿಲ್ಲೆಯ ಕಡೂರು ತಾಲೂಕಿನ ಮಲ್ಲೇಶ್ವರ ಗ್ರಾಮದಲ್ಲಿ ನಡೆದಿದೆ. ಚಂದ್ರು, ಬಸವರಾಜು, ಮಂಜು ಮತ್ತು ಲಕ್ಷ್ಮಣ್ ಎಂಬುವರಿಗೆ ಸೇರಿದ ಕುರಿಗಳು ಇದಾಗಿದ್ದು, ಸುಶೀಲಮ್ಮ ಎಂಬುವವರ ತೋಟದ ಮನೆಯಲ್ಲಿದ್ದವು. ಈ ವೇಳೆ ಏಕಾಎಕಿ ಚಿರತೆ ದಾಳಿ ಮಾಡಿದ್ದು, ಅಂದಾಜು 4 ಲಕ್ಷ ರೂ. ಮೌಲ್ಯದ ಕುರಿಗಳ ಸಾವನ್ನಪ್ಪಿವೆ. ಬಳಿಕ ಪಶು ವೈದ್ಯ ಉಮೇಶ್ ಅವರು ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೂರು ಕುರಿಗಳನ್ನು ತಿಂದ ಚಿರತೆ ಆತಂಕದಲ್ಲಿ ಕುರಿಗಾಹಿಗಳು

ಹಾವೇರಿ: ಜಿಲ್ಲೆಯ ಗುತ್ತಲ ಪಟ್ಟಣದ ಕೆರೆಯಲ್ಲಿ ಚಿರತೆ ದಾಳಿಯಿಂದ ಮೂರು ಕುರಿಗಳು ಸಾವನ್ನಪ್ಪಿದ ಘಟನೆ ನಡೆದಿದೆ. ಗುತ್ತಲ ತಾಂಡಾ ನಿವಾಸಿ ಚೆನ್ನಪ್ಪ ಎಂಬುವರಿಗೆ ಸೇರಿದ ಕುರಿಗಳು ಇದಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಚಿರತೆ ದಾಳಿಯಿಂದ ಗುತ್ತಲ, ಗುತ್ತಲ ತಾಂಡಾ, ಬಸಾಪುರ  ಹಾಗೂ ಕುರುಗೂಂದ ಗ್ರಾಮಗಳ ರೈತರಲ್ಲಿ ಆತಂಕ ಮೂಡಿದೆ.

ಇದನ್ನೂ ಓದಿ:ಪಿರಿಯಾಪಟ್ಟಣದಲ್ಲಿ ರೈತನ ಮೇಲೆ ಚಿರತೆ ದಾಳಿ, ಮೈಸೂರು ತಾಲೂಕಿನಲ್ಲಿ ಹುಲಿ ಸೆರೆಗಾಗಿ ಮುಂದುವರಿದ ಕಾರ್ಯಾಚರಣೆ

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು

ಕಲಬುರಗಿ: ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮಾಡಬೂಳ ಕ್ರಾಸ್ ಹತ್ತಿರ ನಡೆದಿದೆ. ನಿಂತಿದ್ದ ಲಾರಿಗೆ ಹಿಂದುಗಡೆಯಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ. ದಂಡೋತಿ ಗ್ರಾಮದ ಪ್ರಕಾಶ್ (24 ) ಮೃತಪಟ್ಟ ದುರ್ದೈವಿ. ದಂಡೋತಿ ಗ್ರಾಮದಿಂದ ಚಿತ್ತಾಪುರಕ್ಕೆ ಬರುವಾಗ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಚಿತ್ತಾಪುರ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ