ಅಯ್ಯೋ ಸಾರ್, ಜಗಳವಾಡ್ತಿದ್ದಾರೆ ತಕ್ಷಣ ಬನ್ನಿ ಎಂದು ಪೊಲೀಸರಿಗೆ ಕರೆ ಮಾಡಿದ ಭೂಪ! ಗೋಗರೆದಿದ್ದು ಯಾಕೆ ಗೊತ್ತಾ?

| Updated By: ಗಣಪತಿ ಶರ್ಮ

Updated on: Sep 27, 2024 | 11:13 AM

ಜಗಳವಾಗುತ್ತಿದೆ ಎಂದು ಕರೆ ಮಾಡಿ ತಕ್ಷಣ ಬರುವಂತೆ ಮನವಿ ಮಾಡಿದ ಯುವಕನೊಬ್ಬ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಕೊಟ್ಟಿಗೆಹಾರದಲ್ಲಿ ನಡೆದಿದೆ. ಆತನ ಕರೆಗೆ ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ಶಾಕ್ ಆಗಿದ್ದಾರೆ. ಅಷ್ಟಕ್ಕೂ ಆ ಯುವಕ ಮಾಡಿದ್ದೇನು? ಆತ ಹಾಗೆ ಮಾಡಲು ಕಾರಣವೇನು? ಕೊನೆಗೆ ಏನಾಯ್ತು ಎಂಬುದನ್ನು ತಿಳಿಯಲು ಮುಂದೆ ಓದಿ.

ಅಯ್ಯೋ ಸಾರ್, ಜಗಳವಾಡ್ತಿದ್ದಾರೆ ತಕ್ಷಣ ಬನ್ನಿ ಎಂದು ಪೊಲೀಸರಿಗೆ ಕರೆ ಮಾಡಿದ ಭೂಪ! ಗೋಗರೆದಿದ್ದು ಯಾಕೆ ಗೊತ್ತಾ?
ಕೊಟ್ಟಿಗೆಹಾರ ಪೊಲೀಸ್
Follow us on

ಚಿಕ್ಕಮಗಳೂರು, ಸೆಪ್ಟೆಂಬರ್ 27: ಯುವಕನೊಬ್ಬನ ಅವಾಂತರಕ್ಕೆ ಪೊಲೀಸರೇ ಬೇಸ್ತುಬಿದ್ದ ಘಟನೆ ಚಿಕ್ಕಮಗೂರು ಜಿಲ್ಲೆಯ ಮೂಡಿಗೆರೆಯ ಕೊಟ್ಟಿಗೆಹಾರದಲ್ಲಿ ನಡೆದಿದೆ. ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದ ಅಶೋಕ್ ಎಂಬಾತ ಪೊಲೀಸ್ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿ, ಜಗಳವಾಗುತ್ತಿದೆ ಸರ್, ಬೇಗ ಬನ್ನಿ ಎಂದು ಗೋಗರೆದಿದ್ದ. ಆತನ ಕರೆಗೆ ಸ್ಪಂದಿಸಿ ತಕ್ಷಣವೇ ಬಣಕಲ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲಿಗೆ ತಲುಪಿದ ಪೊಲೀಸರಿಗೆ ಒಂದು ಕ್ಷಣ ಶಾಕ್ ಆಗಿದೆ.

ಸ್ಥಳಕ್ಕೆ ಹೋದ ಪೊಲೀಸರು ಅಶೋಕ್​ ಬಳಿ ವಿಚಾರಣೆ ನಡೆಸಿದ್ದಾರೆ. ಅದಕ್ಕೆ ಆತ ನೀಡಿದ ಉತ್ತರದಿಂದ ಶಾಕ್ ಆಗಿದ್ದಾರೆ.

ಅಶೋಕ್ ಹೇಳಿದ್ದು ಕೇಳಿ ಪೊಲೀಸರು ಬೇಸ್ತು!

ಜಗಳವೂ ಇಲ್ಲ, ಏನೂ ಇಲ್ಲ ಸರ್. ನಾನು ಮಹಾಲಯಕ್ಕೆ ಹೋಗಬೇಕಿದೆ. ಬಸ್ ಸಿಗುತ್ತಿಲ್ಲ, ಸಮವೂ ಆಯಿತು. ಮಳೆ ಬೇರೆ ಬರುತ್ತಿದೆ. ದಯಮಾಡಿ ನೆಂಟರ ಮನೆಗೆ ಡ್ರಾಪ್ ಮಾಡಿ ಎಂದು ಪೊಲೀಸರ ಬಳಿ ಯುವಕ ಗೋಗರೆದಿದ್ದಾನೆ. ಅಷ್ಟೇ ಅಲ್ಲದೆ, ಕೊಟ್ಟಿಗೆಹಾರದಿಂದ ಫಲ್ಗುಣಿ ಗ್ರಾಮಕ್ಕೆ ಡ್ರಾಪ್ ಮಾಡುವಂತೆ ಪಟ್ಟು ಹಿಡಿದಿದ್ದಾನೆ.

ಇದನ್ನೂ ಓದಿ: ಬೆಳ್ತಂಗಡಿಯ ನಕ್ಸಲ್ ಪೀಡಿತವಾಗಿದ್ದ ಕುತ್ಲೂರು ಗ್ರಾಮಕ್ಕೆ ರಾಷ್ಟ್ರೀಯ ಸಾಹಸ ಪ್ರವಾಸೋದ್ಯಮ ಪ್ರಶಸ್ತಿ

ಯುವಕನ ಮಾತು ಕೇಳಿ ಶಾಕ್ ಆದ 112 ಪೊಲೀಸರು, ಬುದ್ಧಿ ಹೇಳಿ ಅಶೋಕ್​ನನ್ನು ಲಾರಿ ಹತ್ತಿಸಿ ಕಳುಹಿಸಿದ್ದಾರೆ. ಅಷ್ಟೇ ಅಲ್ಲದೆ, ವಾಪಸ್ ಬರುವಾಗ ಬಣಕಲ್ ಪೊಲೀಸ್ ಠಾಣೆಗೆ ಬರುವಂತೆ ಸೂಚನೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ