ಮಾಜಿ ಸಚಿವ ಜೀವರಾಜ್​ ವಿರುದ್ಧ ರೇಪ್ ಕೇಸ್ ದಾಖಲಿಸುವುದಾಗಿ ಬೆದರಿಕೆ: ಆರೋಪಿಗಳಿಗೆ ಜೈಲು ಶಿಕ್ಷೆ

| Updated By: ರಮೇಶ್ ಬಿ. ಜವಳಗೇರಾ

Updated on: Oct 10, 2023 | 10:49 AM

ಶೃಂಗೇರಿ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಡಿ.ಎನ್ ಜೀವರಾಜ್ ಅವರಿಗೆ ಅತ್ಯಾಚಾರ ಆರೋಪದ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದ ಆರೋಫಿಗಳಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ. ಬರೋಬ್ಬರಿ 10 ವರ್ಷ 2 ತಿಂಗಳ ಕಾಲ‌ ವಿಚಾರಣೆ ನಡೆಸಿದ್ದ N.R ಪುರದ JMFC ನ್ಯಾಯಾಲಯ ಇದೀಗ ಇಬ್ಬರು ಆರೋಪಿಗಳಿಗೆ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.

ಮಾಜಿ ಸಚಿವ ಜೀವರಾಜ್​ ವಿರುದ್ಧ ರೇಪ್ ಕೇಸ್ ದಾಖಲಿಸುವುದಾಗಿ ಬೆದರಿಕೆ: ಆರೋಪಿಗಳಿಗೆ ಜೈಲು ಶಿಕ್ಷೆ
ಡಿ.ಎನ್ ಜೀವರಾಜ್, ಮಾಜಿ ಶಾಸಕ
Follow us on

ಚಿಕ್ಕಮಗಳೂರು, (ಅಕ್ಟೋಬರ್ 10): ಬಿಜೆಪಿ ನಾಯಕ, ಶೃಂಗೇರಿ ಮಾಜಿ ಶಾಸಕ ಡಿ.ಎನ್ ಜೀವರಾಜ್ (DN Jeevaraj) ಅವರಿಗೆ ರೇಪ್ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಗಳಿಗೆ ಕೋರ್ಟ್​ ಶಿಕ್ಷೆ ವಿಧಿಸಿದೆ. 5 ಕೋಟಿ ರೂ. ಹಣಕ್ಕೆ ಬೇಡಿಕೆ‌ ಇಟ್ಟು ಬ್ಲಾಕ್ ಮೇಲ್ ಮಾಡಿದ್ದ ಇಬ್ಬರಿಗೂ ಎನ್​ಆರ್​ ಪುರದ ಜೆಎಂಎಫ್​ಸಿ ನ್ಯಾಯಾಲಯ ಎರಡು ವರ್ಷ ಸಜೆ, 5000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ಮನು ,ಅರಣ್ಯ ಶಿಕ್ಷೆಗೊಳಗಾದ ಆರೋಪಿಗಳು.

ಮೊದಲು ಮನು ಅರಣ್ಯ. ಎನ್ನುವರು 2013 ಆಗಸ್ಟ್ 20 ರಂದು ಎನ್​ಆರ್​ ಪುರ‌‌ ಪೊಲೀಸ್ ಠಾಣೆಯಲ್ಲಿ ಜೀವರಾಜ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಬಳಿಕ ಅಂದಿನ ಸರ್ಕಾರ ಅತ್ಯಾಚಾರ ,ಬ್ಲಾಕ್‌ಮೇಲ್ ಪ್ರಕರಣವನ್ನ CID ಗೆ ವಹಿಸಿತ್ತು. ನಂತರ 2014 ರಲ್ಲಿ ಎನ್​ಆರ್ ಪುರ ಕೋರ್ಟ್, ಆರೋಪದಲ್ಲಿ ಹುರುಳಿಲ್ಲ ಎಂದು ಕೇಸ್ ವಜಾ ಮಾಡಿತ್ತು. ಈ ಹಿನ್ನೆಲೆಯಲ್ಲಿ ಜೀವರಾಜ್ ನಿರಪರಾಧಿ ಎಂದು ಸಾಬೀತು ಆಗಿತ್ತು.

ಇದನ್ನೂ ಓದಿ: ಧಾರವಾಡ: ಎಸ್​ಬಿಎಂ ಬ್ಯಾಂಕ್​ಗೆ ವಂಚಿಸಿದ್ದ ಅಧಿಕಾರಿ ಸೇರಿ ಇಬ್ಬರಿಗೆ ಶಿಕ್ಷೆ

ಇದಾದ ಬಳಿಕ 5 ಕೋಟಿ ರೂ. ಹಣಕ್ಕೆ ಬೇಡಿಕೆ‌ ಇಟ್ಟು ಬ್ಲಾಕ್ ಮೇಲ್ ಮಾಡಿದ್ದಾರೆ. ಇಲ್ಲದಿದ್ದರೆ ರೇಪ್ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಜೀವರಾಜ್ ಅವರು ಮನು ಹಾಗೂ ಅರಣ್ಯ ವಿರುದ್ಧ ದೂರು ದಾಖಲಿಸಿದ್ದರು. 10 ವರ್ಷ 2 ತಿಂಗಳ ಕಾಲ‌ ವಿಚಾರಣೆ ನಡೆಸಿದ್ದ N.R ಪುರದ JMFC ನ್ಯಾಯಾಲಯ, ಇದೀಗ ಈ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆಯಾಗಿದೆ.