ಪ್ರಭಾವಿಗಳಿಗೆ ಸರ್ಕಾರಿ ಜಮೀನು ಪರಭಾರೆ: KAS ಅಧಿಕಾರಿ ಉಮೇಶ್​​ಗೆ ಜಾಮೀನು, ಮತ್ತೊಂದು ಪ್ರಕರಣದಲ್ಲಿ ತಕ್ಷಣವೇ ಮರು ಬಂಧನ!

| Updated By: ಸಾಧು ಶ್ರೀನಾಥ್​

Updated on: Sep 01, 2023 | 12:16 PM

ಕಡೂರಿನ ಹಿಂದಿನ ತಹಶಿಲ್ದಾರ್ ಉಮೇಶ್ JMFC ನ್ಯಾಯಾಲಯದಿಂದ ಜಾಮೀನು ಪಡೆದು ಇಂದು ಶುಕ್ರವಾರ ಚಿಕ್ಕಮಗಳೂರು ಜೈಲಿನಿಂದ ಹೊರ ಬರುತ್ತಿದ್ದಂತೆ ಚಿಕ್ಕಮಗಳೂರು ಅರಣ್ಯ ಇಲಾಖೆಯ DFO ರಮೇಶ್ ಬಾಬಾ ನೇತೃತ್ವದ ತಂಡ ಎಮ್ಮೆದೊಡ್ಡಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮೀಸಲಿಟ್ಟ ಪ್ರಕರಣ ಸಂಬಂಧ KAS ಅಧಿಕಾರಿ ಉಮೇಶನನ್ನು ಬಂಧಿಸಿದೆ.

ಪ್ರಭಾವಿಗಳಿಗೆ ಸರ್ಕಾರಿ ಜಮೀನು ಪರಭಾರೆ: KAS ಅಧಿಕಾರಿ ಉಮೇಶ್​​ಗೆ ಜಾಮೀನು, ಮತ್ತೊಂದು ಪ್ರಕರಣದಲ್ಲಿ ತಕ್ಷಣವೇ ಮರು ಬಂಧನ!
KAS ಅಧಿಕಾರಿ ಉಮೇಶ್​​ಗೆ ಜಾಮೀನು, ಮತ್ತೊಂದು ಪ್ರಕರಣದಲ್ಲಿ ತಕ್ಷಣವೇ ಮರು ಬಂಧನ!
Follow us on

ಚಿಕ್ಕಮಗಳೂರು, ಸೆಪ್ಟೆಂಬರ್​​ 1: ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದ ಕಂದಾಯ ಭೂಮಿ ಅಕ್ರಮದ ಜೊತೆಗೆ ಅರಣ್ಯ ಭೂಮಿ ಅಕ್ರಮ ಕೂಡ ಬಯಲಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಎಮ್ಮೆದೊಡ್ಡಿ, ಅಯ್ಯನಕೆರೆ, ಮದಗದಕೆರೆ ವ್ಯಾಪ್ತಿಯಲ್ಲಿರುವ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮೀಸಲಿಟ್ಟ ಪ್ರದೇಶವನ್ನ ಅಕ್ರಮವಾಗಿ ಪ್ರಭಾವಿಗಳಿಗೆ ಪರಭಾರೆ ಮಾಡಿರುವುದು ಸರ್ಕಾರ ರಚನೆ ಮಾಡಿರುವ 15 ಜನ ತಹಶಿಲ್ದಾರ್ ನೇತೃತ್ವದ ತಂಡದ ತನಿಖೆಯಿಂದ ಹೊರ ಬಂದಿದೆ. ಅಕ್ರಮದಲ್ಲಿ ಭಾಗಿಯಾಗಿದ್ದ ಹಿಂದಿನ ಕಡೂರು ತಹಶಿಲ್ದಾರ್ (KAS) ಉಮೇಶನನ್ನು (Kadur, Chikkamagalur) ಚಿಕ್ಕಮಗಳೂರು DFO ರಮೇಶ್ ಬಾಬಾ ಬಂಧಿಸಿ ಅಕ್ರಮದ ಕುರಿತು ತನಿಖೆ ನಡೆಸುತ್ತಿದ್ದಾರೆ.

ಉಳ್ಳಿನಾಗರ ಪ್ರಕರಣದಲ್ಲಿ KAS ಅಧಿಕಾರಿ ಉಮೇಶ್ ಗೆ ಬೇಲ್:
ಕಡೂರು ತಾಲೂಕಿನ ಉಳ್ಳಿನಾಗರ ಗ್ರಾಮದಲ್ಲಿ ಸರ್ವೇ ನಂಬರ್ 43 ರಲ್ಲಿ 5.4 ಎಕರೆ ಸರ್ಕಾರಿ ಭೂಮಿಯನ್ನ ಪ್ರಭಾವಿಗಳಿಗೆ ಪರಭಾರೆ ಸಂಬಂಧ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸೂಚನೆ ಮೇರೆಗೆ ತರೀಕೆರೆ ಉಪ ವಿಭಾಗಾಧಿಕಾರಿ ಕಾಂತರಾಜ್ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕಡೂರು ಪೊಲೀಸ್ ಠಾಣೆಯಲ್ಲಿ ಉಮೇಶ್ , RI ಕಿರಣ್ ಸೇರಿದಂತೆ ನಿವೃತ್ತ ಶಿರಸ್ತೇದಾರ್ ನಂಜುಂಡಯ್ಯ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಭೂ ಕಂದಾಯ ಕಾಯ್ದೆ 192A(2) ಅಡಿ ಪ್ರಕರಣ ದಾಖಲಾಗಿತ್ತು. ಬೆಂಗಳೂರಿನ ಪೀಣ್ಯದ ಬಳಿ ಕಡೂರು ಪೊಲೀಸರು ಉಮೇಶನನ್ನ ಅಗಸ್ಟ್ 25 ರಂದು ಬಂಧಿಸಿದ್ದರು. 31.8.2023 ರಂದು ಉಳ್ಳಿನಾಗರ ಪ್ರಕರಣ ಸಂಬಂಧಿಸಿದಂತೆ ಕಡೂರು JMFC ನ್ಯಾಯಾಲಯದಿಂದ ಉಮೇಶ್​​ಗೆ ಷರತ್ತುಬದ್ಧ ಜಾಮೀನು ನೀಡಲಾಗಿತ್ತು.

ಜೈಲಿನಿಂದ ಹೊರಬರುತ್ತಿದ್ದಂತೆ ಉಮೇಶ್ ಬಂಧನ:
ಕಡೂರು JMFC ನ್ಯಾಯಾಲಯದಿಂದ ಉಮೇಶ್ ಜಾಮೀನು ಪಡೆದು ಇಂದು ಶುಕ್ರವಾರ ಚಿಕ್ಕಮಗಳೂರು ಜೈಲಿನಿಂದ ಹೊರ ಬರುತ್ತಿದ್ದಂತೆ ಚಿಕ್ಕಮಗಳೂರು ಅರಣ್ಯ ಇಲಾಖೆಯ DFO ರಮೇಶ್ ಬಾಬಾ ನೇತೃತ್ವದ ತಂಡ ಎಮ್ಮೆದೊಡ್ಡಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮೀಸಲಿಟ್ಟ ಪ್ರಕರಣ ಸಂಬಂಧ KAS ಅಧಿಕಾರಿ ಉಮೇಶನನ್ನು ಬಂಧಿಸಿದೆ.

ಉಮೇಶ್ ವಿರುದ್ಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲು:
ಈ ಹಿಂದೆ ಕಡೂರು ತಾಲೂಕಿನ ತಹಶಿಲ್ದಾರ್ ಆಗಿದ್ದ ಅವಧಿಯಲ್ಲಿ ಉಮೇಶ್ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮೀಸಲಿಟ್ಟ ಪ್ರದೇಶದಲ್ಲಿ ಅಕ್ರಮ ಮಾಡಿರುವುದು ಬೆಳಕಿಗೆ ಬಂದಿದ್ದು. 220 ಪ್ರಭಾವಿಗಳಿಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡದೆ ಪರಭಾರೆ ಮಾಡಿರುವುದು 15 ಜನ ತಹಶಿಲ್ದಾರ್ ತಂಡದ ತನಿಖೆಯಿಂದ ಹೊರ ಬಂದಿದ್ದು. ಕಡೂರು ಅರಣ್ಯ ಇಲಾಖೆಯಲ್ಲಿ ಉಮೇಶ್ ವಿರುದ್ಧ 1963ರ ಅರಣ್ಯ ಕಾಯ್ದೆ ಅಡಿ ಉಮೇಶ್ ವಿರುದ್ಧ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ:
ಈ ಹಿಂದೆ ಉಮೇಶ್ ಕಡೂರು ತಹಶಿಲ್ದಾರ್ ಆಗಿದ್ದ ಅವಧಿಯಲ್ಲಿ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪ ಇರುವ ಎಮ್ಮೆದೊಡ್ಡಿ, ಅಯ್ಯನಕೆರೆ ,ಮದಗದಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲಿ ಸಂರಕ್ಷಿತ ಪ್ರದೇಶಕ್ಕೆಂದು ಮೀಸಲಿಟ್ಟ ಪ್ರದೇಶವನ್ನ ಅರಣ್ಯ ಇಲಾಖೆಗೆ ಮಾಹಿತಿ ನೀಡದೆ 220 ಜನರಿಗೆ ಪರಭಾರೆ ಮಾಡುವ ಮಾಡಿದ್ದಾರೆ. ಕಡೂರು ಪೊಲೀಸ್ ಠಾಣೆಯ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ರಾಜಕಾರಣಿಗಳ ಹೆಸರಿಗೆ ಖಾತೆ ಮಾಡಿದ್ದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸೂಚನೆ ಮೇರೆಗೆ ಖಾತೆ ಹೊಂದಿದವರಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ.

ಚಿಕ್ಕಮಗಳೂರು ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ